ಆ ಹಡಗಿನಲ್ಲಿದ್ದವರಿಗೆ ಏನಾಯಿತು, ಇಂದಿಗೂ ನಿಗೂಢವಾಗಿ ಉಳಿದ ರಹಸ್ಯ!

in ಕನ್ನಡ ಮಾಹಿತಿ/ಮನರಂಜನೆ 42 views

ಜಗತ್ತಿನಲ್ಲಿ ಇಂತಹ ಹಡಗುಗಳ ಅನೇಕ ಕಥೆಗಳಿವೆ. ಅವು ಕೂಡ ಸಾಕಷ್ಟು ನಿಗೂಢವಾಗಿವೆ. ಆದರೆ ಆ ಹಡಗುಗಳ ರಹಸ್ಯಗಳು ಇಲ್ಲಿಯವರೆಗೆ ತಿಳಿದಿಲ್ಲ. ಅಂತಹ ಒಂದು ನಿಗೂಢ ಹಡಗಿನ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ವಿಶಿಷ್ಟ ಘಟನೆ ಇಲ್ಲಿಯವರೆಗೆ ಬಗೆಹರಿಯದೆ ಹಾಗೆ ಉಳಿದಿದೆ. ಈ ಘಟನೆಯ ಬಗ್ಗೆ ಕೇಳಿದರೆ ನೀವು ಸಹ ಯೋಚಿಸಲು ಶುರು ಮಾಡುತ್ತೀರಿ. ಈ ಘಟನೆಯು ತುಂಬಾ ಹಳೆಯದಲ್ಲ, 73 ವರ್ಷದ ಹಿಂದಿನ ಕಥೆ. 1947 ರಲ್ಲಿ ಜೂನ್ ತಿಂಗಳಿನ ಸಮಯದಲ್ಲಿ, ಅನೇಕ ಸಮುದ್ರ ಹಡಗುಗಳು ಗಲ್ಫ್ ಆಫ್ ಮಲಾಕ್ಕಾದಲ್ಲಿ ವ್ಯಾಪಾರ ಮಾರ್ಗದ ಮೂಲಕ ಹಾದುಹೋಗುತ್ತಿದ್ದವು. ಈ ಸಮಯದಲ್ಲಿ ಒಂದು ಹಡಗಿನ ಎಲ್ಲಾ ಸಿಬ್ಬಂದಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ಎಸ್ಒಎಸ್ ಸಂದೇಶ ಬಂದಿತು. ವಾಸ್ತವವಾಗಿ ಎಸ್ಒಎಸ್ ಸಂದೇಶಗಳನ್ನು ತುರ್ತು ಪರಿಸ್ಥಿತಿಯಲ್ಲಿ ಕಳುಹಿಸಲಾಗುತ್ತದೆ. ಆಗ ಆ ಹಡಗಿನ ಸಂಕೇತವನ್ನು ಗುರುತಿಸಿದ ಹತ್ತಿರದ ಎಲ್ಲಾ ಹಡಗುಗಳು ತೊಂದರೆಯಲ್ಲಿದ್ದ ಹಡಗಿನ ಕಡೆಗೆ ಸಾಗಿದವು. ಆ ಸಮಯದಲ್ಲಿ ತೊಂದರೆಗೀಡಾದ ಹಡಗಿನ ಸಮೀಪ ದಿ ಸಿಲ್ವರ್ ಸ್ಟಾರ್ ಹಡಗು ಇತ್ತು.

Advertisement

 

Advertisement


ದಿ ಸಿಲ್ವರ್ ಸ್ಟಾರ್ ನಲ್ಲಿದ್ದ ಸಿಬ್ಬಂದಿಗಳು ತೊಂದರೆಗೊಳಗಾದ ಹಡಗಿನ ಸಮೀಪ ತಲುಪಿದಾಗ ಶವಗಳು ಎಲ್ಲೆಡೆ ಹರಡಿಕೊಂಡಿರುವುದನ್ನು ನೋಡಿ ಬೆರಗಾದರು. ಅನೇಕ ಜನರು ಕಣ್ಣು ತೆರೆದಿದ್ದರು. ಅವರನ್ನು ನೋಡುವಾಗ ಅವರು ಏನನ್ನಾದರೂ ನೋಡಿ ಹೆದರಿದ್ದರು ಎಂದು ತೋರುತ್ತಿತ್ತಂತೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಸಾವನ್ನಪ್ಪಿದ ಜನರ ದೇಹದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳಿಲ್ಲ. ಅವರು ನಿಗೂಢವಾಗಿ ನಿಧನರಾಗಿದ್ದರು. ಅದು ಏಕೆಂದು ಇಲ್ಲಿಯವರೆಗೆ ತಿಳಿದಿಲ್ಲ.
ನಂತರ, ದಿ ಸಿಲ್ವರ್ ಸ್ಟಾರ್’ನ ಸಿಬ್ಬಂದಿಗಳು ಹಡಗಿನ ಬಾಯ್ಲರ್ ಕೋಣೆಗೆ ತಲುಪಿದಾಗ ತಾಪಮಾನವು 100 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿದ್ದರೂ ಅವರು ತಣ್ಣಗಾಗಲು ಪ್ರಾರಂಭಿಸಿದರು.

Advertisement

 

Advertisement

ಇದೆಲ್ಲವನ್ನೂ ನೋಡಿದ ನಂತರ, ದಿ ಸಿಲ್ವರ್ ಸ್ಟಾರ್ನ ಸಿಬ್ಬಂದಿಗಳು ತಮ್ಮ ಹಡಗನ್ನು ಬೇಗನೆ ಹತ್ತಲು ನಿರ್ಧರಿಸಿದರು. ದಿ ಸಿಲ್ವರ್ ಸ್ಟಾರ್’ನ ಸಿಬ್ಬಂದಿಗಳು ತಮ್ಮ ಹಡಗನ್ನು ತಲುಪುವ ಮೊದಲು, ಆ ನಿಗೂಢ ಹಡಗಿನಿಂದ ಹೊಗೆ ಹೊರಬರಲು ಪ್ರಾರಂಭಿಸಿ, ಬೆಂಕಿ ಹೊತ್ತಿತು. ಆ ನಂತರ ಆ ಹಡಗಿನಲ್ಲಿ ಬಲವಾದ ಸ್ಫೋಟ ಸಂಭವಿಸಿದ ನಂತರ ಹಡಗು ಸಮುದ್ರದ ಆಳಕ್ಕೆ ಹೋಯಿತು. ಈ ಘಟನೆಯ ಹಿಂದಿನ ನಿಗೂಢ ಶಕ್ತಿಯ ಬಗ್ಗೆ ಕೆಲವರು ಕೆಲವು ತರಹ ಮಾತನಾಡುತ್ತಾರೆ. ಅಂದಹಾಗೆ ಬೆಂಕಿಗೆ ಆಹುತಿಯಾದ ಆ ಹಡಗಿನ ಹೆಸರು ‘ದಿ ಎಸ್ಎಸ್ ಆರೆಂಜ್ ಮೆಡಾನ್’.

Advertisement
Share this on...