ಟಿಕ್​​ಟಾಕ್ ಬ್ಯಾನ್ ಆಗಿದ್ದಕ್ಕೆ ಕಣ್ಣೀರಿಡುತ್ತಿರುವ ಬಾಲಕಿ…ಈಕೆಗೆ ಇದ್ದ ಫಾಲೋವರ್ಸ್ ಎಷ್ಟು ಗೊತ್ತಾ…?

in ಕನ್ನಡ ಮಾಹಿತಿ/ಮನರಂಜನೆ 48 views

ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ ಚೀನಾ ಎಲ್ಲಾ ದೇಶಗಳ ಕೆಂಗಣ್ಣಿಗೆ ಗುರಿಯಾಯಿತು. ಚೀನಾದ ವೂಹಾನ್​​​ನಲ್ಲಿ ಆರಂಭವಾದ ಕೊರೊನಾ ವಿಶ್ವಾದ್ಯಂತ ವ್ಯಾಪಿಸಿತು. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದ್ದು 16 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಭಾರತದ ಗಾಲ್ವಾನ್ ಕಣಿವೆ ಬಳಿ ಚೀನಾ ಸೈನಿಕರು ದಾಳಿ ಮಾಡಿದ ಪರಿಣಾಮ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದು ಬಹಳಷ್ಟು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಈ ಕಾರಣದಿಂದ ಭಾರತಕ್ಕೆ ಚೀನಾ ಮೇಲೆ ಮತ್ತಷ್ಟು ಆಕ್ರೋಶ ಹೆಚ್ಚಾಗಿದೆ. ಚೀನಾ ಮೂಲದ ಷೇರ್ ಇಟ್, ಯುಸಿ ಬ್ರೌಸರ್, ಹಲೋ, ವಿವಾ ವಿಡಿಯೋ, ವಿ ಮೀಟ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಸುಮಾರು 59 ಮೊಬೈಲ್ ಅಪ್ಲಿಕೇಶನ್​​ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಹೀಗೆ ಬ್ಯಾನ್ ಆದ ಆ್ಯಪ್​​ಗಳಲ್ಲಿ ಟಿಕ್​ಟಾಕ್ ಕೂಡಾ ಒಂದು. ಬೇರೆ ಆ್ಯಪ್​​ಗಳ ಬಗ್ಗೆ ಜನರು ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೊ ಗೊತ್ತಿಲ್ಲ. ಆದರೆ ಟಿಕ್​ಟಾಕ್ ಬ್ಯಾನ್ ಆಗಿದ್ದು ಅನೇಕರಿಗೆ ಶಾಕ್​​​ ನೀಡಿದೆ.

Advertisement

Advertisement

ಟಿಕ್​ಟಾಕ್ ಮಾಡಲು ಹೋಗಿ ಎಷ್ಟೋ ಜನರು ಪ್ರಾಣಕ್ಕೆ ಸಂಚಕಾರ ತಂದುಕೊಂಡ ಕಾರಣ ಇದಕ್ಕೂ ಮುನ್ನವೇ ಒಮ್ಮೆ ಟಿಕ್ ಟಾಕ್ ಬ್ಯಾನ್ ಆಗಿತ್ತು. ಆದರೆ ಮತ್ತೆ ಟಿಕ್​​​ಟಾಕ್ ಮೇಲಿನ ನಿರ್ಬಂಧ ಸಡಿಲಗೊಳಿಸಲಾಗಿತ್ತು. ಆದರೆ ಇದೀಗ ಮತ್ತೆ ಕಟ್ಟು ನಿಟ್ಟಾಗಿ ಟಿಕ್​ಟಾಕ್ ಬ್ಯಾನ್ ಮಾಡಲಾಗಿದೆ. ಟಿಕ್​ಟಾಕ್​ ಬ್ಯಾನ್ ಆದ ಕಾರಣದಿಂದ ಮಹಾರಾಷ್ಟ್ರದ ಶಿರಡಿಗೆ ಸೇರಿದ 10 ವರ್ಷದ ಬಾಲಕಿಯೊಬ್ಬಳು ಗೋಳಾಡಿದ್ಧಾಳೆ. ಏಕೆಂದರೆ ಈ ಪುಟ್ಟ ಬಾಲೆಗೆ ಟಿಕ್​​ಟಾಕ್​​ನಲ್ಲಿ 1.58 ಫಾಲೋವರ್ಸ್​ಗಳಿದ್ದರು. ಸುಮಾರು 1 ವರ್ಷದಿಂದ ಈ ಬಾಲಕಿ ಟಿಕ್​​ಟಾಕ್ ಮಾಡುತ್ತಿದ್ದು ಈ ಬಾಲಕಿಯ ಆ್ಯಕ್ಟಿಂಗ್​​ಗೆ ಎಲ್ಲರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

Advertisement

Advertisement

ಅಷ್ಟೇ ಅಲ್ಲ ಈಕೆಯ ಪ್ರತಿಭೆ ಬಗ್ಗೆ ಅನೇಕ ಟಿವಿ ಚಾನೆಲ್​​​ಗಳಲ್ಲಿ ಕಾರ್ಯಕ್ರಮ ಕೂಡಾ ಪ್ರಸಾರ ಆಗಿತ್ತು. ಈ ಬಾಲಕಿ ಫೇಮಸ್ ಆಗಲು ಕಾರಣವಾಗಿದ್ದ ಟಿಕ್​ಟಾಕ್ ಇದ್ದಕ್ಕಿದ್ದಂತೆ ಬ್ಯಾನ್ ಆಗಿದ್ದರಿಂದ ಈಕೆ ಅಳುತ್ತಾ ಕುಳಿತಿದ್ದಾಳೆ.ಪೋಷಕರು ಬಾಲಕಿಯನ್ನು ಸಮಾಧಾನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಟಿಕ್​​ಟಾಕ್ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ.

Advertisement
Share this on...