ವಿಶಿಷ್ಟ ಹಾಗೂ ತಲೆಕೆಳಗಾಗಿರುವ ಏಕೈಕ ಶಿವ ದೇವಾಲಯ, ಇರೋದೆಲ್ಲಿ ಗೊತ್ತಾ?

in ಕನ್ನಡ ಮಾಹಿತಿ 206 views

ಜಗತ್ತಿಗೆ ಮೂಲಾಧಾರವಾಗಿರುವ ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರನ್ನು ಕ್ರಮವಾಗಿ ಸೃಷ್ಟಿಕರ್ತ-ಪಾಲನ ಕರ್ತ-ಲಯಕರ್ತರೆಂದು ಕರೆಯುತ್ತಾರೆ. ಲಯಕರ್ತನಾದ ಮಹೇಶ್ವರನನ್ನು ಶಿವ, ಪರಮೇಶ್ವರ, ವಿಶ್ವೇಶ್ವರ, ಈಶ್ವರ ಹೀಗೆ ನಾನಾ ಹೆಸರುಗಳಿಂದ ಪೂಜಿಸುತ್ತಾರೆ. ಲಯಕರ್ತನಾದ ಶಿವ ಮೃತ್ಯುವನ್ನು ಜಯಿಸಬಲ್ಲ ಮೃತ್ಯುಂಜಯನೂ ಕೂಡ ಆಗಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಿರಿರುವ ವಿಷಯ. ಇಷ್ಟಕ್ಕೂ ಇಷ್ಟೊಂದು ಪೀಠಿಕೆ ಹಾಕಲು ಕಾರಣ, ಜಗತ್ತಿನ ಏಕೈಕ ಹಾಗೂ ವಿಶಿಷ್ಟವಾಗಿರುವ ಶಿವ ದೇವಾಲಯದ ಬಗ್ಗೆ ಹೇಳಲು. ಹೌದು. ಶಿವ ಅಥವಾ ಈಶ್ವರನನ್ನು ಲಿಂಗ ರೂಪದಲ್ಲಿ, ಇಲ್ಲ ನಟರಾಜನ ರೂಪದಲ್ಲಿ, ಇಲ್ಲ ಧ್ಯಾನ ಸ್ವರೂಪದಲ್ಲಿ ಇರುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಲಿಂಗ ಸ್ವರೂಪದಲ್ಲಿರುವ ಶಿವ ಅಥವಾ ನಟರಾಜನ ರೂಪದಲ್ಲಿರುವ ಶಿವನನ್ನು ಆರಾಧಿಸುವುದು ವಾಡಿಕೆ. ಆದರೆ ತಲೆಕೆಳಗಾಗಿ, ಶೀರ್ಷಾಸನದಲ್ಲಿ ವಿಭಿನ್ನ ಭಂಗಿಯಲ್ಲಿರುವ ಶಿವನನ್ನು ಆರಾಧಿಸುವ ವಿಶಿಷ್ಟ ದೇವಾಲಯದ ಬಗ್ಗೆ ನಿಮಗೆ ಗೊತ್ತೆ? ಅಂತದ್ದೊಂದು ಪ್ರಪಂಚದ ಏಕೈಕ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

Advertisement

ಈ ವಿಶಿಷ್ಟವಾದ ದೇವಾಲಯದಲ್ಲಿ ಧ್ಯಾನಸ್ವರೂಪದಲ್ಲಿರುವ ಶಿವ ತಲೆಕೆಳಗಾಗಿ ಶೀರ್ಷಾಸನದಲ್ಲಿದ್ದಾನೆ. ಅಂದರೆ ಶಿವನ ತಲೆ ಭೂಮಿಯನ್ನು ತಲುಪಿದ್ದರೆ, ಆತನ ಪಾದಗಳು ಆಕಾಶದತ್ತ ಮುಖಮಾಡಿವೆ. ಈ ಶಿವಾಲಯವನ್ನು ಶಕ್ತೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ಶೀರ್ಷಾಸನದಲ್ಲಿರುವ ಶಿವನ ಪಕ್ಕದಲ್ಲಿಯೇ ಪಾರ್ವತಿದೇವಿ ತನ್ನ ಮಡಿಲಿನಲ್ಲಿ ಕಾರ್ತಿಕೇಯನ್ನು ಇರಿಸಿಕೊಂಡಿರುವುದನ್ನು ಕಾಣಬಹುದು. ಶಿವ-ಶಕ್ತಿಯಜೊತೆಗೂಡಿ ಇಲ್ಲಿ ನೆಲೆಸಿರುವುದೇ ಶಕ್ತೇಶ್ವರ ದೇವಾಲಯ ಎನ್ನಲಾಗಿದೆ.

Advertisement

ಈ ವಿಭಿನ್ನ ದೇವಾಲಯವಿರುವುದು ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಯನಮದೂರಿನಲ್ಲಿ. ಹೀಗೆ ಶಿವನು ತಲೆಕೆಳಗಾಗಿ ನಿಂತು ಪೂಜಿಸಿಕೊಳ್ಳುವ ದೇವಾಲಯವನ್ನು ನೀವು ಜಗತ್ತಿನ ಇನ್ನಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ. ಹಾಗಾದರೆ ಶಿವ ಇಲ್ಲಿ ತಲೆಕೆಳಗಾಗಿ ನಿಂತಿರುವುದಾದರೂ ಏಕೆ ಇದರ ಹಿಂದಿನ ಕಥೆಯೇನು? ಇಲ್ಲಿದೆ ಸಂಪೂರ್ಣ ಚಿತ್ರಣ.

Advertisement

ಇಲ್ಲಿ ಶಿವ ಹೀಗೆ ವಿಶಿಷ್ಟ ಭಂಗಿಯಲ್ಲಿ ನೆಲೆಸಿರಲು ಕಾರಣ ಯಮಧರ್ಮರಾಯ. ಶಂಭುರನೆಂಬ ರಾಕ್ಷಸನ ಅಟ್ಟಹಾಸ ಹೆಚ್ಚಾದಾಗ ದೇವಾನುದೇವತೆಗಳು, ಋಷಿ ಮುನಿಗಳು, ಜನಸಾಮಾನ್ಯರು ಆತನ ಉಪಟಳದಿಂದ ಸಂಕಷ್ಟಕ್ಕೀಡಾಗುತ್ತಾರೆ. ಆಗ ದೇವಾನುದೇವತೆಗಳು ಯಮಧರ್ಮರಾಯನ ಬಳಿ ಹೋಗಿ ಶುಂಭುರನ ಸಂಹಾರ ಮಾಡುವಂತೆ ಕೇಳಿಕೊಳ್ಳುತ್ತಾರೆ. ಶಂಭುರ ರಾಕ್ಷಸನನ್ನು ಸಂಹರಿಸಲು ಮುಂದಾದ ಯಮನಿಗೆ ಆತನನ್ನು ಸಂಹರಿಸಲು ಕಷ್ಟಸಾಧ್ಯವಾಗುತ್ತದೆ. ಆಗ ಯಮಧರ್ಮರಾಯ ಶಿವನ ಮೊರೆ ಹೋಗುತ್ತಾನೆ. ಆಗ ಶಿವ ಶೀರ್ಷಾಸನದಲ್ಲಿದ್ದು ತನ್ನ ತಪ್ಪಸ್ಸಿನ ಶಕ್ತಿಯನ್ನು ಪಾರ್ವತಿ ಮೂಲಕವಾಗಿ ಯಮನಿಗೆ ನೀಡಿ ಶಂಭುರ ಎಂಬ ರಾಕ್ಷನ ಸಂಹಾರವಾಗುವಂತೆ ಮಾಡುತ್ತಾನೆ. ಹೀಗಾಗಿ ಋಷಿಮುನಿಗಳು ಈ ಊರಿನಲ್ಲಿ ಶಕ್ತಿಯ ಜೊತೆಗೂಡಿ ಶೀರ್ಷಾಸನದಲ್ಲಿ ಶಿವನನ್ನು ಪ್ರತಿಷ್ಠಾಪಿಸಿದರು ಎಂಬುದು ವಾಡಿಕೆ.

ಇನ್ನು ಕಾಳಿದಾಸ ವಿರಚಿತ ಕುಮಾರ ಸಂಭವಂ ನಲ್ಲಿ ಕೂಡ ಯನಮದೂರಿನ ಈ ಶಕ್ತೇಶ್ವರ ದೇವಾಲಯದ ಬಗ್ಗೆ ಪ್ರಸ್ತಾಪವಿದ್ದು, ಭೂಜರಾಜ ಕೂಡ ಇಲ್ಲಿಗೆ ಬಂದು ಪೂಜೆ ಸಲ್ಲಿಸುತಾನೆ ಎಂದು ಹೇಳಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...