ಶಿವನ ಕುತ್ತಿಗೆಗೆ ಹಾವು ಹೇಗೆ ಬಂತು ಗೊತ್ತಾ ?

in ಕನ್ನಡ ಮಾಹಿತಿ 349 views

ವಿಷ್ಣುವಿನ ಹಾಸಿಗೆಯ ಆದಿಶೇಷನಿಗೂ ಶಿವನ ಕುತ್ತಿಗೆಯ ನಾಗನಿಗು ಏನು ಸಂಬಂಧ ?  ಶಿವನ ಕುತ್ತಿಗೆಗೆ  ಹಾವು  ಬಂದಿದ್ದರ ಬಗ್ಗೆ ಪುರಾಣ ಇದು ಹೇಳುತ್ತದೆ. ಅದು ಅಲಂಕಾರಕ್ಕಾಗಿ ಇಡಲಾದ ಹಾರ ಅಥವಾ ಇದರಿಂದ ಭಯಂಕರವಾದಂತಹ  ಕಾರಣವಿದೆಯೇ ಎಂಬುದನ್ನು ತಿಳಿದುಕೊಳ್ಳೋಣ.
ಶಿವ ಹಿಂದೂ ಧರ್ಮದಲ್ಲಿ ವಿಶಿಷ್ಟವಾದ ದೇವರು.  ಅವರ ಹುಲಿ ಚರ್ಮದ ಬಟ್ಟೆಯಾಗಿರಬಹುದು, ತಲೆಯಲ್ಲಿ ಚಂದ್ರ ಗಂಗೆ, ಕುತ್ತಿಗೆಯಲ್ಲಿ ಹಾವು ಎಲ್ಲವೂ ಒಂದಕ್ಕೊಂದು  ವಿಚಿತ್ರವೂ ಮತ್ತು ವಿಶಿಷ್ಟವೂ ಕೂಡ ಹೌದು . ಅದರಲ್ಲೂ ತುಂಬಾ ಆಶ್ಚರ್ಯವನ್ನುಂಟು ಮಾಡುವಂತಹುದು ಕುತ್ತಿಗೆಯಲ್ಲಿ ಇರುವಂತಹ ಹಾವು.  ಶಿವನ ಕುತ್ತಿಗೆಯಲ್ಲಿರುವ  ಯಾವಾಗಲೂ ಇರುವ ನಾಗ  ನಾಗರಾಜ ವಾಸುಕಿ . ನಾಗಲೋಕ ರಾಜನಾಗಿರುವ ವಾಸುಕಿ ಶಿವನ ಕುತ್ತಿಗೆಯನ್ನು ಸೇರಲು ಕಾರಣವೇನು ಎಂಬುದಕ್ಕೆ ಹಲವಾರು ಪುರಾಣ ಕಥೆಗಳಿವೆ .

Advertisement

Advertisement

ಮೊದಲನೆಯ ಕತೆಯ ಪ್ರಕಾರ ನಾಗಗಳೆ ಶಿವಲಿಂಗವನ್ನು  ಪೂಜೆ ಮಾಡುತ್ತಾ ಇದ್ದವು ಆಗ ನಾಗಗಳ ರಾಜನಾಗಿದ್ದ ವಾಸುಕಿ. ಆಗ ವಾಸುಕಿಯ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷರಾಗಿ ನಿನಗೆ ಏನು ವರ ಬೇಕೋ ಬೇಡಿಕೋ ಎಂದು ಹೇಳಿದಾಗ  ನನಗೆ ಏನೂ ಬೇಡ ನಿಮ್ಮ ಜೊತೆಯಲ್ಲಿ ಇದ್ದುಕೊಂಡು ನಿಮ್ಮ ಸೇವೆಯನ್ನು ಮಾಡುವ ಅವಕಾಶವನ್ನು ಕೊಡಿ ಎಂದು ಕೇಳಿಕೊಂಡಾಗ ಶಿವ ಖುಷಿಯಿಂದ ವಾಸುಕಿಯನ್ನು ಕುತ್ತಿಗೆಯಲ್ಲಿ ಹಾಕಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

Advertisement

 

Advertisement

ಮತ್ತೊಂದು ಕಥೆಯ ಪ್ರಕಾರ ಸಮುದ್ರ ಮಂಥನ ಮಾಡುವ ಸಮಯದಲ್ಲಿ ವಾಸುಕಿಯನ್ನು ಸಮೀರ ಪರ್ವತಕ್ಕೆ ಹಗ್ಗದ ರೂಪದಲ್ಲಿ ಕಟ್ಟಲಾಗಿತ್ತು.  ವಾಸುಕಿ ದೇಹದ ತುಂಬಾ ಗಾಯಗಳಾಗಿದ್ದವು ಆದರೂ ಸಹ ಸಮುದ್ರ ಮಂಥನದ ವೇಳೆ ವಿಷಯ ಬಂದಾಗ ಶಿವ ಅದನ್ನು ಕುಡಿದಾಗ ವಾಸುಕಿ ಸೇರಿದಂತೆ ಉಳಿದ ನಾಗಗಳು ಸೇರಿ ಸ್ವಲ್ಪ ಸ್ವಲ್ಪ ವಿಷವನ್ನು ಕುಡಿದಿದ್ದವು. ಬಳಿಕ ವಾಸುಕಿಯ ನಿಸ್ವಾರ್ಥ ಭಕ್ತಿಯನ್ನು ನೋಡಿದ ಶಿವ ವಾಸುಕಿಯನ್ನು ತಮ್ಮ ಕುತ್ತಿಗೆಗೆ ಸುತ್ತಿಕೊಂಡು ಎಂದು ಹೇಳಲಾಗುತ್ತದೆ .

 

 

ಇನ್ನು ಮತ್ತೊಂದು ಕತೆಯ ಪ್ರಕಾರ ಶಿವ ಮತ್ತು ಪಾರ್ವತಿಗೆ ಸಂಬಂಧ  ಪಟ್ಟಿದ್ದು.  ಶಿವ ಮತ್ತು ಪಾರ್ವತಿಯ ಮದುವೆಯ ಸಂದರ್ಭದಲ್ಲಿ ಎಲ್ಲ ಗಣಗಳು ಶಿವನ ಬಳಿ  ಹೋಗಿ ಅಲಂಕಾರ ಮಾಡಿಕೊಳ್ಳಲು ಹಠ ಹಿಡಿಯುತ್ತವೆ. ದೇವ ಗಣಗಳ ಬೇಡಿಕೆ ಸಲುವಾಗಿ ಶಿವ ತನ್ನ ಶೃಂಗಾರದ ಜವಬ್ದಾರಿಯನ್ನು ವಾಸುಕಿಗೆ ನೀಡುತ್ತಾರೆ . ಶೃಂಗಾರದ ರೂಪದಲ್ಲಿ ವಾಸುಕಿ ಶಿವನ ಕುತ್ತಿಗೆಗೆ  ಸುತ್ತಿಕೊಳ್ಳುತ್ತಾರೆ. ವಾಸುಕಿಗೆ ಇರುವ ಪ್ರೀತಿ ಮತ್ತು ಭಕ್ತಿಯನ್ನು ಕಂಡ ಶಿವ ತನ್ನ ಮದುವೆಯ ನಂತರವೂ ವಾಸುಕಿಗೆ ತನ್ನ ಕುತ್ತಿಗೆಯಲ್ಲಿ ಶಾಶ್ವತವಾಗಿ ಸ್ಥಾನವನ್ನು ನೀಡಿದರು ಎಂದು ಹೇಳಲಾಗುತ್ತದೆ. ನಂತರ ತ್ರಿಪುರ ದಹನದ ವೇಳೆ ವಾಸುಕಿ ಶಿವನ ಬಿಲ್ಲಿಗೆ ಎದೆಯಾಗಿದ್ದ ಹೀಗಾಗಿ  ಈ ಎಲ್ಲ ಕಾರಣಗಳಿಂದ ಶಿವನು ತನ್ನ ವಾಹನವಾದ ನಂದಿಯನ್ನು ಪ್ರೀತಿಸುವಷ್ಟೇ   ವಾಸುಕಿಯನ್ನು ಕೂಡ ಪ್ರೀತಿಸುತ್ತಾರೆ  ಎಂದು ಹೇಳಲಾಗುತ್ತದೆ.

 

ಈ ವಾಸುಕಿ ಯಾರೆಂದರೆ ಕಶ್ಯಪ ಮಹರ್ಷಿಗಳು ಎರಡನೆಯ ಪುತ್ರ. ದಕ್ಷ ಪ್ರಜಾಪತಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ವನಿತಾ ಮತ್ತು ಕದ್ರು ಮಹರ್ಷಿ ಕಶ್ಯಪ ರನ್ನು ಮದುವೆಯಾಗಿದ್ದರು . ಸ್ವಲ್ಪ ದಿನ ಕಳೆದ ಮೇಲೆ ತಮ್ಮ ಹೆಂಡತಿಯರ ಸೇವೆಯಿಂದ ಮಹರ್ಷಿಗೆ ತುಂಬಾ ಖುಷಿಯಾಗುತ್ತದೆ .  ಹೀಗಾಗಿ ತನ್ನ ಇಬ್ಬರು ಹೆಂಡತಿಯರನ್ನು ಕರೆದು ಒಂದೊಂದು ವರವನ್ನು ಕೇಳುವಂತೆ ಹೇಳುತ್ತಾರೆ. ಆಗ ಕದ್ರು ತನ್ನ ಪತಿ ಮಹರ್ಷಿಯ ಬಳಿ ನನಗೆ ಒಂದು ಸಾವಿರ ಮಕ್ಕಳು ಬೇಕು ಎಂದು ಕೇಳುತ್ತಾರೆ . ವನಿತಾ ಪತಿ ಮಹರ್ಷಿಯ ಬಳಿ ನನಗೆ ಇಬ್ಬರು ಮಕ್ಕಳು ಬೇಕು ಅವರು ಕುದ್ರುವಿನ ಸಾವಿರ ಮಕ್ಕಳಿಗಿಂತ ಶಕ್ತಿಶಾಲಿಯಾಗಬೇಕು ಎಂದು ಕೇಳಿಕೊಳ್ಳುತ್ತಾರೆ . ಇಬ್ಬರು ಕೇಳಿಕೊಂಡಿದ್ದಕ್ಕೂ  ಮಹರ್ಷಿ ತಥಾಸ್ತು ಎಂದು ವರವನ್ನು ಕೊಡುತ್ತಾರೆ .

 

ಸ್ವಲ್ಪ ದಿನಗಳ ನಂತರ ಮಹರ್ಷಿಯ ವರದಂತೆ ಕದ್ರು  ಸಾವಿರ ಮಕ್ಕಳಿಗೆ ಜನ್ಮವನ್ನು ನೀಡುತ್ತಾರೆ. ಅದರಲ್ಲಿ ಮೊದಲನೆಯ ಮಗ ಶೇಷನಾಗ ಎಂದರೆ ಆದಿಶೇಷನ ಜನನವಾಯಿತು. ಆದಿಶೇಷನಿಗೆ ಸಾವಿರ ತಲೆಗಳಿವೆ ಅಲ್ಲದೆ ಆದಿಶೇಷನಿಗೆ ಯಾವುದೇ ಅಂತ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಆದಿಶೇಷನನ್ನು ಅನಂತ ಎಂಬ ಹೆಸರಿನಿಂದ ಕರೆಯಲಾಗುತ್ತದೆ . ಭೂಮಿ ಮೇಲೆ ಎಲ್ಲ ಜೀವರಾಶಿಗಳು ನಾಶವಾಗಿ ಹೋದರೂ ಕೂಡ ಶೇಷ  ನಾಗ ಜೀವಂತವಾಗಿ ಇರುತ್ತಾನೆ ಎಂದು ಹೇಳಲಾಗುತ್ತದೆ. ಬ್ರಹ್ಮನಿಂದ ಪಡೆದಂತಹ ವರದಿಂದ  ಆದಿಶೇಷನ ತಲೆಯ ಮೇಲೆ ಇಡೀ ಭೂಲೋಕ ನಿಂತಿದೆ ಎಂದು ಹೇಳಲಾಗುತ್ತದೆ .  ನಾಗ ಲೋಕದಲ್ಲೆ ಹಿರಿಯ ಪುತ್ರ ಆದ್ದರಿಂದ ಆದಿಶೇಷನನ್ನು ನಾಗಲೋಕದ ರಾಜನನ್ನಾಗಿ ಮಾಡಲಾಯಿತು. ಆದರೆ ಬ್ರಹ್ಮನ ವರದಾನದಂತೆ ಭೂಮಿಯ ಒಳಗಡೆ ಹೋಗುವಾಗ ತನ್ನ ತಮ್ಮ ವಾಸುಕಿಯನ್ನು ಕರೆದು ನಾಗಲೋಕ ರಾಜನನ್ನಾಗಿ ನೇಮಿಸಿದರು.

ವಾಸುಕಿ ಕಶ್ಯಪ  ಮತ್ತು ಕದ್ರುವಿನ ಎರಡನೆಯ ಪುತ್ರ ಇತ್ತ ಆದಿಶೇಷನಷ್ಟು ಅಲ್ಲದೇ ಇದ್ದರೂ ಶಕ್ತಿಶಾಲಿ ಮತ್ತು ಪರಾಕ್ರಮಿಯಾಗಿದ್ದ  ಕೃಷ್ಣನ ಜನನದ ಸಂದರ್ಭದಲ್ಲಿ ಕಂಸನಿಂದ ರಕ್ಷಣೆಯನ್ನು ಪಡೆಯಲು ಜೈಲಿನಿಂದ ತಪ್ಪಿಸಿಕೊಂಡು ಬರುವಾಗ ವಾಸುದೇವ ಪ್ರವಾಹದಲ್ಲಿ ಸಿಲುಕಿದ್ದರು . ಈ ವೇಳೆ ಯಮುನೆಯ ಪ್ರವಾಹ ಮತ್ತು ಮಳೆಯಿಂದ ವಾಸುಕಿ   ಕೃಷ್ಣ ಮತ್ತು ವಾಸು ದೇವರನ್ನು ರಕ್ಷಿಸಿದರು . ಭವಿಷ್ಯ ಪುರಾಣದ ಪ್ರಕಾರ ವಾಸುಕಿಯ ತಲೆಯಲ್ಲೇ  ನಾಗಮಣಿ ಇದೆ . ವಾಸುಕಿ ಶಿವನ ಸೇವೆ ಮಾಡುವ ಸಲುವಾಗಿ ತನ್ನ ಎಲ್ಲ ರಾಜ್ಯವನ್ನು  ತ್ಯಾಗ ಮಾಡಿ ತನ್ನ ತಮ್ಮ ದಕ್ಷಕನನ್ನು ರಾಜನನ್ನಾಗಿ ಮಾಡುತ್ತಾರೆ.

Advertisement
Share this on...