ಸಾವಿರಾರು ಶಿವಲಿಂಗಗಳಿರುವ ಕರ್ನಾಟಕದ ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

in ಕನ್ನಡ ಮಾಹಿತಿ 50 views

ಭೂಮಿಯ ಮೇಲೆ ವಿಶಿಷ್ಟವಾಗಿರುವ ಅನೇಕ ಸ್ಥಳಗಳಿವೆ. ಕೆಲವೊಮ್ಮೆ ಅವುಗಳ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಭಾರತದಲ್ಲಿ ಅಂತಹ ಸ್ಥಳಗಳಿಗೆ ಯಾವುದೇ ಕೊರತೆಯಿಲ್ಲ ಬಿಡಿ, ಇಂತಹ ಸ್ಥಳಗಳನ್ನು ‘ವಿಶಿಷ್ಟ ಸ್ಥಳಗಳು’ ಎಂದು ಕರೆದರೆ ತಪ್ಪಾಗುವುದಿಲ್ಲ. ನಮ್ಮ ಕರ್ನಾಟಕದಲ್ಲಿಯೂ ಅಂತಹ ಒಂದು ಸ್ಥಳವಿದ್ದು, ಇದು ಧಾರ್ಮಿಕ ಸ್ಥಳವಾಗಿದೆ. ಇಲ್ಲಿನ ನದಿಯ ದಡದಲ್ಲಿ ನೀವು ಸಾವಿರಾರು ಶಿವಲಿಂಗಗಳನ್ನು ಕಾಣಬಹುದು, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಶಿವನ ಭಕ್ತರಿಗೆ, ಈ ಸ್ಥಳವು ಹೆಚ್ಚು ಪ್ರಿಯವಾಗಿದೆ. ಏಕೆಂದರೆ ಇಲ್ಲಿ ಅವರು ಅನೇಕ ಶಿವಲಿಂಗಗಳ ದರ್ಶನವನ್ನು ಒಟ್ಟಿಗೆ ಪಡೆಯಬಹುದು.

Advertisement

 

Advertisement

Advertisement

ಸಾವಿರಾರು ಶಿವಲಿಂಗಗಳಿರುವ ಈ ಪವಿತ್ರ ಸ್ಥಳವು ಶಿರಸಿಯಿಂದ 14 ಕಿ.ಮೀ. ದೂರದಲ್ಲಿದ್ದು, ಶಾಲ್ಮಲಾ ನದಿ ನದಿಯ ದಡದಲ್ಲಿದೆ. ಈ ಸ್ಥಳವನ್ನು ಸಹಸ್ರ ಲಿಂಗ ಎಂದು ಕರೆಯಲಾಗುತ್ತದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಪ್ರಾಚೀನ ಕಾಲದ ಶಿವಲಿಂಗಗಳು ಕಂಡುಬರುತ್ತವೆ. ಅಲ್ಲದೇ ಕಲ್ಲುಗಳ ಮೇಲೆ ಕೆತ್ತಿದ ನಂದಿ (ಶಿವನ ಸವಾರಿ) ಪ್ರತಿಮೆಯೂ ಇದೆ.
ನದಿಯ ದಡದಲ್ಲಿರುವ ಈ ಶಿವಲಿಂಗಗಳು ಮತ್ತು ಪ್ರತಿಮೆಗಳನ್ನು ವಿಜಯನಗರ ಸಾಮ್ರಾಜ್ಯದ ರಾಜ ಸದಾಶಿವರೈ ವರ್ಮಾ ಅವರು 1678 ರಿಂದ 1718 ರ ನಡುವೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಮಹಾ ಶಿವರಾತ್ರಿ ಸಮಯದಲ್ಲಿ ಪ್ರತಿವರ್ಷ ಇಲ್ಲಿ ಜಾತ್ರೆ ಆಯೋಜಿಸಲಾಗುತ್ತದೆ. ಆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಶಿವಲಿಂಗದ ಬಳಿ ಪ್ರಾರ್ಥಿಸುತ್ತಾರೆ.

Advertisement

 


ಇಲ್ಲಿರುವ ಶಿವಲಿಂಗಗಳು ಮತ್ತು ಶಿಲಾ ರಚನೆಗಳು ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಮುಳುಗಿದರೂ, ನೀರಿನ ಮಟ್ಟ ಕಡಿಮೆಯಾಗಲು ಪ್ರಾರಂಭವಾಗುತ್ತಿದ್ದಂತೆ, ಸಾವಿರಾರು ಶಿವಲಿಂಗಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಆಗ ನದಿ ನೋಡಲು ನಿಜವಾಗಿಯೂ ಅದ್ಭುತವಾಗಿ ಕಾಣಿಸುತ್ತದೆ. ಇದೇ ರೀತಿಯ ಸಹಸ್ರ ಲಿಂಗಗಳು ಕಾಂಬೋಡಿಯಾದ ನದಿಯೊಂದರಲ್ಲಿಯೂ ಕಂಡುಬರುತ್ತದೆ. ಈ ಸ್ಥಳವನ್ನು ಜೀನ್ ಬೋಲ್ಬೆಟ್ ಅವರು 1969 ರಲ್ಲಿ ಕಂಡುಹಿಡಿದರು. ಮೊದಲನೇ ರಾಜ ಸೂರ್ಯವರ್ಮನ ಸಮಯದಲ್ಲಿ ಈ ಶಿವಲಿಂಗಗಳನ್ನು ಇಲ್ಲಿ ನಿರ್ಮಿಸಲು ಪ್ರಾರಂಭಿಸಲಾಯಿತು. ಆ ನಂತರ ರಾಜ ಉದಯದಿತ್ಯ ವರ್ಮನ್ ಅವರ ಕಾಲಕ್ಕೆ ಇದು ಸಂಪೂರ್ಣವಾಗಿ ಸಿದ್ಧವಾಯಿತು ಎಂದು ನಂಬಲಾಗಿದೆ. ಈ ಇಬ್ಬರೂ ರಾಜರು ಕಾಂಬೋಡಿಯಾವನ್ನು 11 ಮತ್ತು 12 ನೇ ಶತಮಾನದಲ್ಲಿ ಆಳಿದರು.

Advertisement
Share this on...