ಶಿವಣ್ಣನಿಗೆ ಇದೊಂದು ವಿಷಯ ಬಹಳ ಕೋಪ ಬರಿಸುತ್ತದಂತೆ !

in ಮನರಂಜನೆ/ಸಿನಿಮಾ 83 views

ಅದು 1986…ಕನ್ನಡಿಗರ ಆರಾಧ್ಯ ದೈವ ಡಾ ರಾಜ್ ಕುಮಾರ್ ಅವರ ಕರುಳಿನ ಕುಡಿ, ಶಿವರಾಜ್ ಕುಮಾರ್ ಅವರು ಪರಿಪೂರ್ಣ ನಾಯಕನಾಗಿ ಕಾಣಿಸಿಕೊಂಡಿದ್ದ ಆನಂದ್ ಸಿನಿಮಾ ತೆರೆಕಂಡಿತ್ತು .  ಅಣ್ಣಾವ್ರ ಮಗನ ಸಿನಿಮಾ ಅಂದ ಮೇಲೆ ಸಿನಿಮಾ ಮೇಲಿನ ನಿರೀಕ್ಷೆಗಳು ಶಿಖರದಷ್ಟು ಎತ್ತರಕ್ಕೆ ಏರಿತ್ತು. ನಿರೀಕ್ಷೆಯಂತೆಯೇ ಆನಂದ್ ಸಿನಿಮಾ 38 ವಾರಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ಹೊಸ ದಾಖಲೆಯೊಂದು ಬರೆದಿತ್ತು. ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಾಯಕ ನಟ ಈ ಸಿನಿಮಾ ಮೂಲಕ ಬೆಳಕಿಗೆ ಬಂದಂತ್ತಾಯಿತು. ಶಿವಣ್ಣನ ಅಭಿನಯ, ಕಾಲೇಜು ಹುಡುಗನ ಪಾತ್ರ ಮತ್ತು ಅವರ ನೃತ್ಯಕ್ಕೆ ಕರುನಾಡ ಜನತೆ ಮಾರು ಹೋಗಿದ್ದರು. ಅಂದಿನ ಯುವ ಪೀಳಿಗೆಗಳ ಬಾಯಲ್ಲಿ ಗುನುಗುತ್ತಿದ್ದಿದು ಒಂದೇ ಹಾಡು ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ.. ಈ ಹಾಡಿನಲ್ಲಿ ಜಗಮೆಚ್ಚಿದ ಮಗನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.ಈ ಸಿನಿಮಾ ಬಳಿಕ ಶಿವಣ್ಣ ತಿರುಗಿ ನೋಡಲೆ ಇಲ್ಲ. ನಂತರ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ಹೀರೋ ಎಂದು ಬಿರುದು ಪಡೆದ ಶಿವಣ್ಣ, ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ, ಇದೀಗ  ೧೦೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕರುನಾಡ ಚಕ್ರವರ್ತಿಯಾಗಿದ್ದಾರೆ. ಆನಂದ್ ಸಿನಿಮಾದಲ್ಲಿ ಹೇಗೆ ನರ್ತನ ಮಾಡಿದ್ದರೋ, ಇದೀಗ  ೫೯ ವರುಷ ದಾಟಿದ್ದರು ಅದೇ ಎನರ್ಜಿ ಮತ್ತು ಅದೇ ಜೋಶ್ ನಲ್ಲಿ ಕುಣಿಯತ್ತಾರೆ. ಶಿವಣ್ಣನಿಗೆ ಶಿವಣ್ಣನೇ ಸಾಟಿ.

Advertisement

Advertisement

ಇನ್ನು ಶಿವಣ್ಣರವರು ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದ್ದು, ಇವರನ್ನು ಬಹಳ ಹತ್ತಿರದಿಂದ ನೋಡಿದವರು  ಅವರ ಬಗ್ಗೆ ವಿಶೇಷ ಅಭಿಮಾನ, ವಿಶೇಷವಾದ ಗೌರವವನ್ನು ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೇ, ಅವರ ವ್ಯಕ್ತಿತ್ವವನ್ನು ಅಪಾರವಾಗಿ ಅಭಿಮಾನಿಸಿ,ಅವರಿಗೆ ವಿಶೇಷ ಸ್ಥಾನವನ್ನು ತಮ್ಮ ಜೀವನದಲ್ಲಿ ನೀಡಿದ್ದಾರೆ. ಈ ಸಾಲಿನಲ್ಲಿ ಚಂದವನದ ಖ್ಯಾತ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ಕೂಡ ಒಬ್ಬರು.

Advertisement

ನಿರ್ಮಾಪಕ ಶ್ರೀಕಾಂತ್ ಅವರು ಮಾಧ್ಯಮಗಳ ಮುಂದೆ ಶಿವಣ್ಣನ ಕುರಿತು ಕೆಲವೊಂದು ಆಶ್ಚರ್ಯಕರ ವಿಚಾರವನ್ನು ಬಿಚ್ಚಿಟ್ಟಿದ್ದು,  ಶಿವರಾಜ್ ಕುಮಾರ್  ಅವರು ಯಾವುದೇ ಸಿನಿಮಾ ಒಪ್ಪಬೇಕಾದರೆ, ಅ ಚಿತ್ರದ ನಿರ್ದೇಶಕ ಈ ಹಿಂದೆ ಯಾವುದಾದರು ಫ್ಲಾಪ್ ಸಿನಿಮಾ ನೀಡಿದ್ದಾನಾ ಅಥವಾ  ದೊಡ್ಡ ಮಟ್ಟದ ಹಿಟ್ ಸಿನಿಮಾ ನೀಡಿದ್ದಾನಾ?  ಎಂದು ಖಂಡಿತವಾಗಿಯೂ ನೋಡುವುದಿಲ್ಲ, ಅವರು ಸಿನಿಮಾ ಮಾಡಿದರೆ, ಸಿನಿಮಾದಿಂದ ಆ ನಿರ್ದೇಶಕರಿಗೆ ಮತ್ತು ಅವರ ಕುಟುಂಬಕ್ಕೆ ಒಳ್ಳೇದಾಗುತ್ತ ಎಂಬುದನ್ನು ಮಾತ್ರ  ಆಲೋಚನೆ ಮಾಡಿ ಸಿನಿಮಾ ಮಾಡುತ್ತಾರೆ. ಶಿವಣ್ಣ ಏನಾದ್ರೂ ತಾನು ಇಂತದ್ದೇ ನಿರ್ದೇಶಕನ ಜೊತೆ ಸಿನಿಮಾ ಮಾಡ್ತೀನಿ ಅಂತ ನಿರ್ಧಾರ ಮಾಡಿ ಬಿಟ್ಟರೆ ಅವರ ಎಲ್ಲಾ ಸಿನಿಮಾ ಶತದಿನೋತ್ಸವವನ್ನು ಆಚರಿಸುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅವರು ಯೋಚನೆಯಲ್ಲಿ ಎಂದಿಗೂ ಕೂಡ ಈ ರೀತಿ ಬರಲು ಸಾಧ್ಯವೇ ಇಲ್ಲ ಎಂದು ಶಿವಣ್ಣರನ್ನು ಗುಣಗಾನ ಮಾಡಿದ್ದಾರೆ.

Advertisement

ಶಿವಣ್ಣ ಜೊತೆ ಅವರ  ಶ್ರೀಮತಿ ಗೀತಾ ಅವರನ್ನು ಕೂಡ ಗುಣಗಾನ ಮಾಡಿರುವ ಶ್ರೀಕಾಂತ್, ಶಿವಣ್ಣ ಅವರು  ಇಂದಿಗೂ ಕೂಡ ಇಷ್ಟು ಫಿಟ್  ಹಾಗೂ ಎನರ್ಜಿಟಿಕ್ ಆಗಿ ಇರಲು ಕಾರಣ ಗೀತಮ್ಮ ಎಂದು ಹೇಳಿದ್ದಾರೆ. ಗೀತಾ ಅವರು ಶಿವಣ್ಣರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದು, ಕಮರ್ಷಿಯಲ್ ವಿಷಯಗಳನ್ನು ಕೂಡ ಅವರೆ ಹೆಗಲ ಮೇಲೆ ಹಾಕಿಕೊಂಡು,  ಶಿವಣ್ಣ ಅವರು ಯಾವಾಗಲೂ ಆರಾಮವಾಗಿ ಇರುವತರ ನೋಡ್ಕೋತಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಅಲ್ಲದೇ  ಶಿವಣ್ಣ ಮತ್ತು ಗೀತಾ ಸಂಸಾರದ ಜೀವನ  ಹಾಲು ಜೇನು ರೀತಿಯಲ್ಲಿದೆ ಎಂದು ತಿಳಿಸಿದ್ದಾರೆ.ಇನ್ನು ಶಿವಣ್ಣನಿಗೆ ಬಹಳ ಕೋಪ ಬರಲು ಕಾರಣ  ನಿರ್ಮಾಪಕರೇ ಅಂತೆ. ಯಾಕೆಂದರೆ ಆರಂಭದಲ್ಲಿ ಉತ್ಸಾಹದಿಂದ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರು, ಬಿಡುಗಡೆ ಸಮಯದಲ್ಲಿ ಜನರಿಗೆ ತಲುಪಿಸಲು ಸೋತು ಹೋಗುತ್ತಾರೆ ಎಂಬ ವಿಚಾರ ಶಿವಣ್ಣನಿಗೆ ಕೋಪ ತರಿಸುತ್ತದೆ ಎಂಬುದಾಗಿ ನಿರ್ಮಾಪಕ ಶ್ರೀಕಾಂತ ಅವರು ತಿಳಿಸಿದ್ದಾರೆ

Advertisement
Share this on...