ತಾನು 14 ವರ್ಷವಿದ್ದಾಗ ಮಾಡಿದ ಅತಾಚುರ್ಯವನ್ನು ಬಿಚ್ಚಿಟ್ಟ ಶ್ರದ್ಧಾಶ್ರೀನಾಥ್ !

in ಮನರಂಜನೆ 20 views

ಮಲಯಾಳಂ ಚಿತ್ರರಂಗದ ಮೂಲಕ ತಮ್ಮನ್ನು ತಾವು ಸ್ಥಾಪಿಸಿಕೊಂಡು ಇದೀಗ ಕನ್ನಡ, ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವವರು ಶ್ರದ್ಧಾ ಶ್ರೀನಾಥ್. ಅಲ್ಲದೇ ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಈ ಬ್ಯೂಟಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮೂಲತಃ ಮಿಲಿಟಿರಿ ಫ್ಯಾಮಿಲಿಯಲ್ಲಿ ಜನಿಸಿದ ಈ ನಟಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾವೆಂದರೆ ಕನ್ನಡದ ಹೆಮ್ಮೆಯ ನಿರ್ದೇಶಕ ಪವನ್ ಕುಮಾರ್ ಅವರ ಯೂಟರ್ನ್ ಸಿನಿಮಾ. ಈ ಚಿತ್ರದ ಅಭಿನಯಕ್ಕೆ ಶ್ರದ್ಧಾ, ಸಾಲು ಸಾಲು ಪ್ರಶಸ್ತಿಗಳನ್ನು ಕೂಡ ಗೆದ್ದುಕೊಂಡರು. ನಂತರ ಅಪರೇಷನ್ ಅಲಮೇಲಮ್ಮ ಎಂಬ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಭದ್ರಬುನಾದಿ ಕಂಡುಕೊಂಡರು.

Advertisement

 

Advertisement

Advertisement

ಇನ್ನು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ತಮಿಳು ಚಿತ್ರರಂಗದಲ್ಲಿ ನಿರತರಾಗಿರುವ ಶ್ರದ್ಧಾ, ಬಹು ಬೇಡಿಕೆಯ ನಟಿಯಾಗಿದ್ದಾರೆ. ಇನ್ನು ಸಿನಿಮಾಗಳಲ್ಲಿ ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ತಮ್ಮ ನೇರ ಮಾತುಗಳಿಂದಲೂ ಕೂಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದು, ೧೪ ನೇ ವಯಸ್ಸಿನಲ್ಲಿ ಸ್ತ್ರೀವಾದಿಯಾದ ಕಥೆಯನ್ನು ಬಹಿರಂಗ ಪಡಿಸಿದ್ದಾರೆ.ಇನ್ನು ಮಹಿಳೆಯರು ಸಾಮಾನ್ಯವಾಗಿ ಋತುಚಕ್ರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಶ್ರದ್ಧಾ ತಾನು ಮುಟ್ಟಾದ ಸಂದರ್ಭದಲ್ಲಿ ಪೂಜೆಗೆ ಭಾಗಿಯಾಗಿದ್ದೆ ಎಂಬ ಸತ್ಯವನ್ನು ಬೋಲ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಗೂತಿ ಸುಂದರಿಯ ಹೇಳಿಕೆಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ..

Advertisement

 


‘ನನಗೆ ಆಗ 14 ವರ್ಷ, ಕುಟುಂಬದ ಪೂಜೆಯಲ್ಲಿ ಭಾಗಿಯಾಗಿದ್ದೆ. ನನಗಾಗ ಪೀರಿಯಡ್ಸ್ ಆಯಿತು. ಆಗ ಅಮ್ಮ ಜೊತೆಯಲ್ಲಿ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತಿದ್ದ ಚಿಕ್ಕಮ್ಮನಿಗೆ ಈ ವಿಚಾರ ತಿಳಿಸಿದೆ. ನಾನು ಆಗ ಸ್ಯಾನಿಟರಿ ಪ್ಯಾಡ್ ಧರಿಸಿರಲಿಲ್ಲ. ಋತುಚಕ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪಕ್ಕದಲ್ಲಿಯೆ ಮತ್ತೋರ್ವ ಒಳ್ಳೆಯ ಆಂಟಿ ಕುಳಿತ್ತಿದ್ದರು. ನಾನು ಚಿಂತೆಯಲ್ಲಿ ಚಿಕ್ಕಮ್ಮನಿಗೆ ಹೇಳಿದ ಮಾತನ್ನು ಕೇಳಿಸಿಕೊಂಡರು. ಮತ್ತು ಅವರು ನನಗೆ ಪರ್ವಾಗಿಲ್ಲ ಚಿನ್ನ ಎಂದು ನಗುತ್ತ ಹೇಳಿದರು. ದೇವರು ಕ್ಷಮಿಸುತ್ತಾನೆ, ಚಿಂತಿಸಬೇಡ ಮಗು ಎಂದರು. ಆ ದಿನದಿಂದ ನಾನು ಮಹಿಳಾವಾದಿಯಾದೆ. ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಯನ್ನು ತೆಗೆದು ಹಾಕಿದೆ’ ಎಂದು ದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.

 

ಸದ್ಯ ಶ್ರದ್ಧಾ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿ. ಅವರ ಬಳಿ ಸಾಕಷ್ಟು ಸಿನಿಮಾಗಳಿವೆ. ಕನ್ನಡದಲ್ಲಿ ನೀನಾಸಂ ಸತೀಶ್ ಅವರ ಜೊತೆ ಅಭಿನಯಿಸಿರುವ ಗೋದ್ರಾ ಬಿಡುಗಡೆಗೆ ರೆಡಿಯಾಗಿದ್ದಾರೆ, ಸುದೀಪ್ ಅವರ ಜೊತೆ ಫ್ಯಾಂಟಮ್ ಮತ್ತು ರಿಷಬ್ ಶೆಟ್ಟಿ ಅವರ ಜೊತೆ ರುದ್ರಪಯಾಗ ಸಿನಿಮಾಗಳಿಗೆ ಆಯ್ಕೆಯಾಗಿದ್ದಾರೆ

Advertisement
Share this on...