ಟಾಲಿವುಡ್’ನಲ್ಲಿ ಮಿಂಚಲು ರೆಡಿಯಾದ್ರಾ ಶ್ರದ್ಧಾ ಶ್ರೀನಾಥ್?

in ಸಿನಿಮಾ 59 views

ಸ್ಯಾಂಡಲ್’ವುಡ್ ಬೆಡಗಿ ಶ್ರದ್ಧಾ ಶ್ರೀನಾಥ್ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ಜರ್ಸಿ’ಯಲ್ಲಿ ನಟಿಸಿದ್ದರು. ಕ್ರಿಕೆಟ್ ಹಿನ್ನೆಲೆಯನ್ನು ಆಧರಿಸಿದ ಈ ಚಿತ್ರವು ಉತ್ತಮ ಯಶಸ್ಸನ್ನು ಕಂಡಿತು. ಗೌತಮ್ ತಿನ್ನನುರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು. ಇಷ್ಟೆಲ್ಲಾ ಆದರೂ ಟಾಲಿವುಡ್’ನಲ್ಲಿ ಆಫರ್ಗಳು ಪಡೆಯಲು ಶ್ರದ್ಧಾ ವಿಫಲರಾಗಿದ್ದರು. ಆದರೆ ಶ್ರದ್ಧಾ ನಟನೆಯ ‘ಕೃಷ್ಣ ಆಂಡ್ ಹಿಸ್ ಲೀಲಾ’ ಚಿತ್ರವು ಕೆಲವು ದಿನಗಳ ಹಿಂದೆ ದೈತ್ಯ ಒಟಿಟಿ ನೆಟ್ ಫ್ಲಿಕ್ಸ್ ಟುಡೇನಲ್ಲಿ ಬಿಡುಗಡೆಯಾಗಿದ್ದು, ಇದೀಗ ಅತ್ಯುತ್ತಮ ಯಶಸ್ಸನ್ನು ಕಾಣುತ್ತಿದೆ. ಹೌದು, ಸಿದ್ದು ಜೊನ್ನಲಗಡ್ಡ, ಶಾಲಿನಿ ವಡ್ನಿಕಟ್ಟಿ ಮತ್ತು ಸೀರತ್ ಕಪೂರ್ ಅಭಿನಯದ ‘ಕ್ಷಣಂ’ ಖ್ಯಾತಿಯ ರವಿಕಾಂತ್ ಪೆರೆಪು ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಗಳಿಸುತ್ತಿದೆ.

Advertisement

 

Advertisement


ಒಟಿಟಿಯಲ್ಲಿ ಚಿತ್ರ ನೇರವಾಗಿ ಬಿಡುಗಡೆಯಾದ ನಂತರ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣ ಖಾತೆಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಶ್ರದ್ಧಾ ಕೂಡ “ಕೃಷ್ಣ ಆಂಡ್ ಹಿಸ್ ಲೀಲಾ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ ಅನ್ನಿಸುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಥಿಯೇಟರ್ ಗೆ ಹೋದಾಗ ಆಗುವ ಥ್ರಿಲ್ಲಿಂಗ್ ಕಳೆದುಕೊಂಡಿದ್ದೇನೆ. ಆದರೆ, ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಗಳಲ್ಲಿ ಚಿತ್ರ ವೀಕ್ಷಣೆ ತನ್ನದೇ ಆದ ಮೋಡಿ ಮಾಡಿದೆ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವಿಶಾಲ್ ಶ್ರೀನಾಥ್ ಅವರ ‘ಚಕ್ರ’ದಲ್ಲೂ ಶ್ರದ್ಧಾ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಚಕ್ರ’ ಚಿತ್ರವನ್ನು ಎಂಎಸ್ ಆನಂದನ್ ನಿರ್ದೇಶಿಸಿದ್ದು, ಇದರಲ್ಲಿ ವಿಶಾಲ್ ಮತ್ತು ರೆಜಿನಾ ಕಸ್ಸಂದ್ರ ಕೂಡಾ ಅಭಿನಯಿಸಿದ್ದಾರೆ.

Advertisement

Advertisement

ಆದರೆ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ‘ಚಕ್ರ’ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೈಲರ್’ನಲ್ಲಿನ ಶ್ರದ್ಧಾ ಪಾತ್ರ ನೋಡಿದವರು ಮನಸಾರೆ ಹೊಗಳುತ್ತಿದ್ದಾರೆ. ಅಲ್ಲಿಗೆ ಟಾಲಿವುಡ್’ನಲ್ಲಿ ಒಳ್ಳೊಳ್ಳೆಯ ಆಫರ್’ಗಳನ್ನು ಪಡೆಯಲು ಶ್ರದ್ಧಾ ಶ್ರೀನಾಥ್ ಹೆಚ್ಚಿನ ಭರವಸೆಯನ್ನು ತೋರುತ್ತಿರುವಂತೆ ಕಾಣುತ್ತಿದೆ. ಮೂಲಗಳ ಪ್ರಕಾರ ‘ಚಕ್ರ’ ಯಶಸ್ಸು ಟಾಲಿವುಡ್ನಲ್ಲಿ ಶ್ರದ್ಧಾ ವೃತ್ತಿಜೀವನವನ್ನು ನಿರ್ಧರಿಸುತ್ತದೆ.

Advertisement
Share this on...