ಕಿಟಕಿ ಬಾಗಿಲುಗಳಿಲ್ಲದ ಮನೆಯಲ್ಲಿ ಓದಿ IAS ಆದ ಹುಡುಗಿ !

in ಕನ್ನಡ ಮಾಹಿತಿ 105 views

ಕಿಟಕಿ ಬಾಗಿಲುಗಳಿಲ್ಲದ, ಮಾಸಲು ಗೋಡೆಯ, ಮುರುಕಲು ಮನೆಯ ಹುಡುಗಿ, ಮನ್ ರೇಗಾದಲ್ಲಿ ದಿನಗೂಲಿ ಮಾಡಿ ಬದುಕುವ ಗೂನು ಬಾಗಿದ ಮೈಯ ಅಪ್ಪ ಅಮ್ಮನ ಮುದ್ದು ಮಗಳು, ಅತ್ಯಂತ ತಳಸ್ತರದ ಕುರಿಚಿಯ ಬುಡಕಟ್ಟಿನ ಮೊದಲ ಹುಡುಗಿ ಈಗಷ್ಟೇ ಕೋಝಿಕೋಡ್ ಜಿಲ್ಲೆಯ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದರು.ಶ್ರೀಧನ್ಯಾ ಸುರೇಶ್!!! 3ನೇ ಪ್ರಯತ್ನದಲ್ಲಿ IAS ಪೂರ್ಣಗೊಳಿಸಿದ್ದರು! ಈಗ ಮಸ್ಸೂರಿಯಲ್ಲಿ ತರಬೇತು ಮುಗಿಸಿ ಬಂದು ಅಧಿಕಾರ ಸ್ವೀಕರಿಸಿದರು.ವಯನಾಡ್ ಜಿಲ್ಲೆಯಲ್ಲಿರುವ ಕಾಡು ಮಧ್ಯದ ಅವರ ಮನೆಗೆ ರಸ್ತೆಯು ಇಲ್ಲ. ಈಗಲೂ ಅರ್ಧ ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಬೇಕು.

Advertisement

 

Advertisement

Advertisement

IAS ಮುಖ್ಯ ಸಂದರ್ಶನಕ್ಕೆ ದೆಹಲಿಗೆ ಹೊರಟಾಗ ಧನ್ಯಾರಲ್ಲಿ ದುಡ್ಡೇ ಇರಲಿಲ್ಲ, ಊರವರು, ಹಿತೈಷಿಗಳೆಲ್ಲ 40,000 ಒಟ್ಟು ಸೇರಿಸಿ ಕೊಟ್ಟಿದ್ದರು,ಅವರು ಓದಿದ್ದು ಮಲಯಾಳಂ ಮಾಧ್ಯಮ ಶಾಲೆಯಲ್ಲಿ. ಪ್ರಾಣಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಯಾಳಂನಲ್ಲೇ IAS ಬರೆದು ಪಾಸ್ ಆಗಿದ್ದಾರೆ.ಯೂಟ್ಯೂಬ್ ನಲ್ಲಿ ಅವರ ಸಂದರ್ಶನಗಳು ಕ್ಲಿಪ್ಪಿಂಗ್ ಗಳಿವೆ. ಒಮ್ಮೆ ಕೇಳಿ, ಅವರ ಮಲಯಾಳ, ಇಂಗ್ಲಿಷ್ ಪ್ರಭುತ್ವ ಹೇಗಿದೆ ಅಂತ.

Advertisement

 

ಪ್ರದೇಶ, ಜಾತಿ, ಇಂಗ್ಲಿಷ್ ಮೀಡಿಯಂ… ಎಂಬೆಲ್ಲ ಕೀಳರಿಮೆಯೋ, ಭ್ರಮೆಯೋ… ಬೇಡ, ಚಿಯರ್ ಅಪ್ ಕನ್ನಡದ IAS ಆಕಾಂಕ್ಷಿಗಳಿಗೆ

Advertisement
Share this on...