ಶ್ರಿಯಾ ಹೀಗೆ ಮಾಡಿದ್ದು ತಪ್ಪಾಯ್ತಾ..! ರಾಜಮೌಳಿ ಕೋಪಗೊಳ್ಳಲು ಇದೇ ಕಾರಣಾನ.. ?

in ಮನರಂಜನೆ 42 views

ನಟಿ ಶ್ರಿಯಾ ಶರಣ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಚಾಟ್ ಮಾಡುತ್ತಾ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ನಾನು ನಟಿಸಲಿದ್ದೇನೆ ಎಂಬ ವಿಷಯವನ್ನು ರಿವೀಲ್ ಮಾಡಿದರು. ಶ್ರಿಯಾ ಈ ಚಿತ್ರದಲ್ಲಿ ನಟಿಸಲು ಬಹಳ ಉತ್ಸುಕರಾಗಿದ್ದು ಚಿತ್ರತಂಡ ಹೇಳುವ ಮುನ್ನವೇ ಸ್ವತಃ ಈ ಸುದ್ದಿಯನ್ನು ರಿವೀಲ್ ಮಾಡಿರುವುದರ ಬಗ್ಗೆ ಇದೀಗ ರಾಜಮೌಳಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ರಾಜಮೌಳಿ ತಮ್ಮ ಚಿತ್ರಗಳಲ್ಲಿ ಏನೇ ಮಾಡಿದರೂ ಪ್ಲಾನ್ ಮಾಡಿಯೇ ಮಾಡಿರುತ್ತಾರೆ. ಹಾಗೆಯೇ ಸಮಯ ಬಂದಾಗ ತಮ್ಮ ಚಿತ್ರಗಳ ಪಾತ್ರಧಾರಿಗಳನ್ನು ಸಹ ಬಹಿರಂಗಪಡಿಸಲು ಇಷ್ಟಪಡುತ್ತಾರೆ. ಆದರೆ ಶ್ರೀಯಾ ಹೀಗೆ ಧಿಡೀರನೆ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದನ್ನು ನೋಡಿ ರಾಜಮೌಳಿ ಅವರು ಅಸಮಾಧಾನವಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಶ್ರಿಯಾ ಈ ಚಿತ್ರದಲ್ಲಿ ಅಜಯ್ ದೇವಗನ್ ಅವರ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂಬ ರೂಮರ್ ಇದೆ.

Advertisement

 

Advertisement

Advertisement

ಪತಿ ಆಂಡ್ರೇ ಕೊಸ್ಚೀವ್ ಅವರೊಂದಿಗೆ ಸ್ಪೇನ್ನಲ್ಲಿರುವ ಶ್ರಿಯಾ ಅಂತರರಾಷ್ಟ್ರೀಯ ವಿಮಾನಗಳು ಪುನರಾರಂಭಗೊಂಡ ನಂತರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ವರದಿಗಳು ಹೇಳಿವೆ. ಎನ್ಟಿಆರ್ ಮತ್ತು ರಾಮ್ ಚರಣ್ ನಟನೆಯ ಮಲ್ಟಿಸ್ಟಾರರ್ ಚಿತ್ರ ಆರ್ ಆರ್ ಆರ್ 2021ರಲ್ಲಿ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾದ ನಂತರ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಸದ್ಯದ ವರದಿಗಳ ಪ್ರಕಾರ ಚಿತ್ರವನ್ನು ಜುಲೈ 30, 2021 ಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂಬ ವದಂತಿಗಳಿವೆ. ಅಂದರೆ ಚಿತ್ರ ಬಿಡುಗಡೆಯಾಗಲು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವಿದೆ .

Advertisement

 


ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಆರ್ ಆರ್ ಆರ್’ ಸಿನಿಮಾವನ್ನು ಚಿತ್ರರಸಿಕರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ರಾಮ್ ಚರಣ್, ಎನ್ಟಿಆರ್ ಜೊತೆಯಾಗಿ ಅಭಿನಯಿಸುತ್ತಿರುವ ಕಾರಣ ಆರ್ ಆರ್ ಆರ್ ಕುರಿತ ಪ್ರತಿ ಸಣ್ಣ ಸಂಗತಿಯೂ ಆಸಕ್ತಿ ಹುಟ್ಟಿಸುತ್ತಿದೆ

. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ರಾಜಮೌಳಿ. ನಟಿ ಆಲಿಯಾ ಭಟ್ ಆರ್ಆರ್ಆರ್ನಲ್ಲಿ ರಾಮ್ ಚರಣ್ಗೆ ಜೋಡಿಯಾಗಿದ್ದು, ಸೀತಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಹೈದರಾಬಾದ್, ಗುಜರಾತ್ ಮತ್ತು ಪುಣೆಯಲ್ಲಿ ನಡೆಯುತ್ತಿದೆ.

Advertisement
Share this on...