ಶೃತಿ ಅವರ ಮತ್ತೊಂದು ಇನ್ನಿಂಗ್ಸ್ ಪ್ರಾರಂಭ : ಭಂಗಿ ಹಿಡಿದು ಕುಳಿತರು ಶೃತಿ !

in ಮನರಂಜನೆ/ಸಿನಿಮಾ 450 views

ಒಂದು ಕಾಲದಲ್ಲಿ ಶೃತಿ ಅವರು ಅಳುಮುಂಜಿ ಪಾತ್ರದಲ್ಲಿ ಅಭಿನಯಿಸುತ್ತಾ, ಕನ್ನಡಗರ ಮನಸಲ್ಲಿ ವಿಶೇಷ ಭಾವನೆಯನ್ನು ಮೂಡಿಸಿ ಕನ್ನಡಿಗರ ಮನೆ ಮಗಳಾಗಿದ್ದರು. ಅವರು ಮಾಡಿದ ಒಂದೊಂದು ಪಾತ್ರಗಳು ಕೂಡ ಪ್ರೇಕ್ಷಕರ ಮನಸಲ್ಲಿ ವಿಶೇಷವಾದ ಭಾವನೆ ಮೂಡಿಸಿದ್ದರು. ನಂತರ ತಮ್ಮ ಸಂಸಾರ ಮುರಿದ ಮೇಲೆ ರಾಜಕೀಯ ಹಾಗೂ ಮಗಳ ಜೊತೆ ಜೀವನ ಕಳೆಯುತ್ತಿದ್ದ ಶೃತಿ ಅವರು ಇದೀಗ ಮತ್ತೊಮ್ಮೆ ಬೆಳ್ಳೆ ಪರೆದೆಗೆ ಕಮ್ ಬ್ಯಾಕ್ ಮಾಡಿದ್ದು, ಭಂಗಿ ಹಿಡಿದು ಕುಳಿತು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಇದೀಗ ಭಜರಂಗಿ ೨ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟ್ರೆಂಡ್ ಹುಟ್ಟು ಹಾಕಿದೆ. ಶಿವಣ್ಣ ಅವರ ಹುಟ್ಟು ಹಬ್ಬದಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಶಿವಣ್ಣನ ಹೊಸ ಅವತಾರ ನೋಡಿ ಅಭಿಮಾನಿಗಳೆಲ್ಲಾ ಖುಷಿಯಾಗಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ನಾಯಕ ನಟ ಶಿವಣ್ಣ ಅವರು ತುಂಬಾ ಉತ್ಸಾಹದಿಂದಲೇ ಮಾತನಾಡಿದ್ದು, ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎಂದು ಹೇಳುತ್ತಾರೆ. ಇದೇ ಭಾನುವಾರದಂದು ಶಿವಣ್ಣ ಅವರ 58ನೇ ಜನ್ಮದಿನ ಜರುಗಿದ್ದು, ಆ ವಿಶೇಷ ದಿನದಂದು ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. 2013ರಲ್ಲಿ ಬಿಡುಗಡೆಯಾದ ಭಜರಂಗಿ ಚಿತ್ರದ ಮುಂದುವರಿದ ಭಾಗವೇ ಈ ಭಜರಂಗಿ ಭಾಗ 2.

Advertisement

Advertisement

 

Advertisement

ಈ ಕುರಿತು ಮಾತನಾಡಿರುವ ಶಿವಣ್ಣ ಅವರು ‘ಭಜರಂಗಿ ಸಿನೆಮಾ ಹಿಟ್ ಆದ ಬಳಿಕ ಅದರ ಮುಂದುವರಿದ ಭಾಗವನ್ನು ಸಿನೆಮಾ ಮಾಡಲು ನಿರ್ಧರಿಸಿ ತಯಾರಿಸಿದೆವು. ಇದು ಈ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಬಹುದೊಡ್ಡ ಕೊಡುಗೆ ಇದಾಗಿದ್ದು, ಬೇರೆ ಭಾಷೆಗಳ ಚಿತ್ರೋದ್ಯಮಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ ಕರುನಾಡ ಚಕ್ರವರ್ತಿ. ಇನ್ನು ದೇಶದಲ್ಲಿ ಮಹಾಮಾರಿ ಕೊರೋನಾ ಸಂಕಷ್ಟ ಮುಗಿದ ಮೇಲೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇಗಾಗಲೇ ಚಿತ್ರದ ಹಕ್ಕುಗಳನ್ನು ಮತ್ತು ಡಬ್ಬಿಂಗ್ ರೈಟ್ಸ್ ಗಳಿಗೆ ಬೇರೆ ಭಾಷೆಗಳಿಂದಲೂ ಸಾಕಷ್ಟು ಬೇಡಿಕೆ ಬಂದಿದೆಯಂತೆ. ಎ ಹರ್ಷ ನಿರ್ದೇಶನದ ಚಿತ್ರದಲ್ಲಿ ಭಾವನಾ, ಶೃತಿ, ಲೋಕಿ, ಚೆಲುವರಾಜ್ ಮೊದಲಾದ ದೊಡ್ಡ ತಾರ ಬಳಗವೇ ಇದೆ.

Advertisement

ಇನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಭಜರಂಗಿ ಸಿನಿಮಾ ಟೀಸರ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದ ಅನ್ಯ ಭಾಷೆಗಳ ಕಲಾವಿದರು, ತಂತ್ರಜ್ಞರು, ಚಿತ್ರೋದ್ಯಮಿಗಳು ಸೇರಿದಂತೆ ಬಾಲಿವುಡ್ ಕಡೆಯಿಂದಲೂ ಪ್ರಶಂಸೆ ಸುರಿಮಳೆ ಹರಿದು ಬಂದಿದೆ. 2 ನಿಮಿಷಕ್ಕಿಂತ ಕಡಿಮೆ ಅವಧಿಯ ಟೀಸರ್ ನಲ್ಲಿ ಡ್ರಾಮಾ, ಆಕ್ಷನ್ ಗಳಿದೆ. ಶ್ಲೋಕದಿಂದ ಆರಂಭವಾಗಿ ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ತುಣುಕು ನೀಡುತ್ತದೆ.

Advertisement
Share this on...