ವೈರಲ್ ಆದ ಶ್ರುತಿ ಹಾಸನ್ ಅಂಡರ್ ವಾಟರ್ ಫೋಟೋಶೂಟ್

in ಮನರಂಜನೆ/ಸಿನಿಮಾ 89 views

ಲಾಕ್ ಡೌನ್ ನಂತರ ನಟಿಯರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಬಹುತೇಕ ನಟಿಯರು ಹೆಚ್ಚಾಗಿ ಮನೆಯಲ್ಲಿ ಯೋಗ, ವ್ಯಾಯಾಮ ಮಾಡುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಶ್ರುತಿ ಹಾಸನ್ ವಿಭಿನ್ನ ಪ್ರಯತ್ನದ ಮೂಲಕ ಗಮನಸೆಳೆದಿದ್ದಾರೆ. ಹೌದು, ಅವರು ಸ್ವಿಮ್ಮಿಂಗ್ ಪೂಲ್ ಒಳಗಿರುವ ವಾಟರ್ ಫೋಟೋಶೂಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇವುಗಳನ್ನು ಥ್ರೋಬ್ಯಾಕ್ ಫೋಟೋಗಳೆಂದು ಹೇಳಿದ್ದಾರೆ.  ಶ್ರುತಿ ಹಾಸನ್ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರುತಿ ಹೆತ್ತವರ ಪ್ರತ್ಯೇಕತೆಯ ವಿಷಯದ ಬಗ್ಗೆ ಮಾತನಾಡುತ್ತಾ, ತನ್ನ ಪರಿಪಕ್ವತೆಯ ಮಟ್ಟವನ್ನು ತೋರಿಸಿದರು. “ಅವರ ಸಿದ್ಧಾಂತವು ಭಿನ್ನವಾದಾಗ ಜನರು ಅಥವಾ ದಂಪತಿಗಳು ಒಟ್ಟಿಗೆ ಇರುವುದು ಒಳ್ಳೆಯದಲ್ಲ” ಎಂದು ಸರಳವಾಗಿ ಹೇಳಿದ್ದರು ಶ್ರುತಿ.

Advertisement

Advertisement

ಇದಲ್ಲದೆ ನಟಿ ತಮನ್ನಾ ಭಾಟಿಯಾ ಜೊತೆಗಿನ ಸ್ನೇಹ ಸಂಬಂಧದ ಬಗ್ಗೆ ಹಂಚಿಕೊಂಡಿದ್ದು, ಎಲ್ಲಾ ಅಭಿಮಾನಿಗಳನ್ನು ಮತ್ತು ಚಿತ್ರರಂಗವನ್ನು ಅಚ್ಚರಿಗೊಳಿಸಿದರು. ಇನ್ನು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ‘ವಕೀಲ್ ಸಾಬ್’ ಚಿತ್ರದ ಒಪ್ಪಂದದಿಂದ ಶ್ರುತಿ ಹಾಸನ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆದರೆ ಶ್ರುತಿ ಈ ಹಿಂದೆ ಪವನ್ ಕಲ್ಯಾಣ್ ಅವರೊಂದಿಗೆ ‘ಗಬ್ಬರ್ ಸಿಂಗ್’ ಮತ್ತು ‘ಕಟ್ಮ ರಾಯುಡು’ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ರವಿ ತೇಜಾ ಅಭಿನಯದ ‘ಕ್ರಾಕ್’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಇದುವರೆಗೂ ತೆಲುಗು, ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿರುವ ಶ್ರುತಿ, ತಮಿಳಿನ ಖ್ಯಾತ ನಟರಾದ ಕಮಲ್ ಹಾಸನ್ ಮತ್ತು ಸಾರಿಕಾ ಅವರ ಪುತ್ರಿ.

Advertisement

 

Advertisement
View this post on Instagram

 

Reaching for tomorrow ?

A post shared by @ shrutzhaasan on

1992 ರ ತಮಿಳು ಚಿತ್ರ ಥೇವರ್ ಮಗನ್ ನಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರುತಿ ಹಾಸನ್ ನಂತರ, ತಮ್ಮ ತಂದೆಯ ತಮಿಳು-ಹಿಂದಿ ದ್ವಿಭಾಷಾ ನಿರ್ದೇಶನದ ಹೇ ರಾಮ್ (2000) ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಶ್ರುತಿ ಅವರ ಮೊದಲ ಪ್ರಮುಖ ಪಾತ್ರವೆಂದರೆ ಹಿಂದಿ ಚಲನಚಿತ್ರ ಲಕ್ (2009). ಆ ನಂತರ ಅನಗನಾಗ ಒ ಧೀರುಡು ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ; ರೇಸ್ ಗುರ್ರಂ. (2014) ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಎಂದು ಮೊದಲ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿರುವ ಶ್ರುತಿ, ಇದುವರೆಗೂ 4 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

Advertisement
Share this on...