ಮದ್ಯ ಬಿಟ್ಟ ಮೇಲೆ ಜೀವನ ಚೆನ್ನಾಗಿದೆ ಎಂದ ಶೃತಿಹಾಸನ್..!

in ಮನರಂಜನೆ 116 views

ನಟ ಕಮಲಹಾಸನ್ ರವರ ಮಗಳು ಶ್ರುತಿ ಹಾಸನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಬೋಲ್ಡ್ ಮಾತು ಮತ್ತು ಸೆಕ್ಸಿ ಲುಕ್ಕ್ ನಿಂದ ಹುಡುಗರ ಮನಸ್ಸನ್ನು ಛಿದ್ರಗೊಳಿಸುವ ಈ ಚೆಲುವೆ ಜಾತಿ ವಿವಾದಗಳನ್ನು ಮಾಡಿಕೊಂಡು ಸುದ್ದಿಯಾಗುತ್ತಿರುತ್ತಾರೆ.

Advertisement

 

Advertisement

Advertisement

 

Advertisement

ಮದ್ಯಪಾನ ಮಾಡುವುದನ್ನ ಬಿಟ್ಟ ಮೇಲೆ ಜೀವನ ತುಂಬಾ ಚೆನ್ನಾಗಿದೆಯೆಂದು ನಟಿ ಶ್ರುತಿ ಹಾಸನ್ ಹೇಳಿದ್ದಾರೆ. ಶೃತಿಹಾಸನ್ ರವರು ಭಾರತ ಚಿತ್ರರಂಗದ ಮೇರು ನಟ ಕಮಲಹಾಸನ್ ಮತ್ತು ಸಾರಿಕಾರವರ ಪುತ್ರಿ. ಈ ಮುಂಚೆ ಮದ್ಯಪಾನದ ಪ್ರಿಯೆ ಆಗಿದ್ದ ಶ್ರುತಿ ತನ್ನ ಕೆಲ ವಿವಾದಗಳಿಂದ ಹೆಚ್ಚು ಟ್ರೋಲ್ ಆದವರು. ಈಗ ಶ್ರುತಿ ಅವರು ಟ್ರೋಲ್ ಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಮತ್ತು ಮದ್ಯಪಾನದ ಬಗ್ಗೆ ಅವರ ಅಭಿಪ್ರಾಯವೇನು ಎಂಬುದನ್ನು ತಿಳಿಸಿದ್ದಾರೆ.

 

 

ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದರು ಶೃತಿಯವರು ಈ ಹಿಂದೆ ನಾನು ನನ್ನ ಸ್ನೇಹಿತರ ಜೊತೆ ಸೇರಿಕೊಂಡು ತುಂಬಾ ಡ್ರಿಂಕ್ಸ್ ಮಾಡುತ್ತಿದ್ದೆ, ಜೊತೆಗೆ ವೀಕೆಂಡ್ ಬಂತು ಎಂದರೆ ಶನಿವಾರ ರಾತ್ರಿ ತುಂಬಾ ಮದ್ಯವನ್ನು ಸೇವಿಸುತ್ತಿದ್ದೆ. ಈಗ ಜೀವನಕ್ಕೆ ಸಾಕಾಗುವಷ್ಟು ಮಧ್ಯಪಾನ ಮಾಡಿದ್ದೇನೆ. ಈಗ ಮತ್ತೆ ಯಾವತ್ತು ನಾನು ಮದ್ಯವನ್ನು ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ.

 

 

View this post on Instagram

 

Saturday night Feat. Faux bangs ?#stayhome #biglove

A post shared by @ shrutzhaasan on

 

ನಾನು ಹೇಳುತ್ತಿರುವುದು ಏನೆಂದರೆ ನಾನು ಮದ್ಯವನ್ನು ಬಿಟ್ಟಿದ್ದೇನೆ ಅದು ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ಬೇಡ ಎಂದು ತೀರ್ಮಾನಿಸಿದ್ದೇನೆ. ನಾನು ಇನ್ನು ಮುಂದೆ ಒಂದು ಗ್ಲಾಸ್ ವೈನ್ ಅಥವಾ ಬಿಯರ್ ಅನ್ನು ಕೂಡ ಮುಟ್ಟುವುದಿಲ್ಲ. ಆದ್ದರಿಂದ ಹೊರಗೆ ಬಂದು ಜೀವನವನ್ನು ಬದಲಾಯಿಸಿಕೊಳ್ಳಲು ಪ್ರಯತ್ನವನ್ನು ಮಾಡುತ್ತಿದ್ದೇನೆ ನಾನು ಕುಡಿಯುವುದನ್ನು ಬಿಟ್ಟ ಮೇಲೆ ನನಗೆ ಮದ್ಯ ಏನನ್ನು ಸಹಾಯ ಮಾಡಿಲ್ಲವೆಂದು ನನಗೆ ಮನವರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಸಮಾಜದಲ್ಲಿ ಪುರುಷರು ಮದ್ಯಪಾನ ಮಾಡಿದರೆ ಯಾಕೆ ಮದ್ಯಪಾನ ಮಾಡುತ್ತಿದ್ದೀಯಾ ಎಂದು ಯಾರೂ ಕೂಡ ಅವನನ್ನು ಪ್ರಶ್ನೆ ಮಾಡುವುದಿಲ್ಲ.

 

 

ಯಾವಾಗ ಮಹಿಳೆ ಮಧ್ಯಪಾನ ಮಾಡುತ್ತಾಳೆ ಆಗ ಸಮಾಜ ಅದರ ಬಗ್ಗೆ ಮಾತನಾಡಲು ಶುರು ಮಾಡುತ್ತೆ. ಗಂಡಂದಿರ ಹೊಡೆತವನ್ನು ತಡೆದುಕೊಳ್ಳಲು ಮಹಿಳೆಯರು ದಿನಾಲೂ ಹಳ್ಳಿಗಳಲ್ಲಿ ಮದ್ಯಪಾನ ಮಾಡುತ್ತಾರೆ. ಇದನ್ನ ಅರ್ಥಮಾಡಿಕೊಳ್ಳದೆ ಜನರು ವಿವಾದ ಮಾಡಲು ಬಯಸಿದರೆ ಅದು ಅವರ ಇಚ್ಛೆ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶ್ರುತಿ ಹೇಳಿದ್ದಾರೆ.

 

 

ಈ ಹಿಂದೆ ಇಟಲಿ ಮೂಲದ ಮೈಕಲ್ ಕೋರ್ಸೆಲ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದ ಶ್ರುತಿ ಇತ್ತೀಚೆಗಷ್ಟೇ ಬ್ರೇಕಪ್ ಮಾಡಿಕೊಂಡಿದ್ದರು. ಕ್ರಿಸ್ಮಸ್, ನ್ಯೂ ಇಯರ್ ಪಾರ್ಟಿಯೆಂದು ಜೊತೆಗೆ ಇರುತ್ತಿದ್ದ ಮೈಕಲ್ ಮತ್ತು ಶ್ರುತಿ ತಮ್ಮ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಜೊತೆಗೆ ಇವರಿಬ್ಬರು ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು.

– ಸುಷ್ಮಿತಾ

Advertisement
Share this on...