ಶುಭಾ ಪೂಂಜಾಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ಆಗ್ತಾ ಇರೋ ಹುಡುಗ ಯಾರು?

in ಮನರಂಜನೆ/ಸಿನಿಮಾ 91 views

ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿ ಬಾಲ್ಯದ ಗೆಳೆಯನ ಜೊತೆ ಮಧ್ಯರಾತ್ರಿ ಸಿಂಪಲ್ ಆಗಿ ಹಸೆಮಣೆ ಏರಿದ ಸುದ್ದಿ ಕೇಳಿದ್ದೀರಿ. ಇದೀಗ ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ ನಟಿ ಶುಭಾ ಪೂಂಜಾ ಕೂಡ ಹಸೆಮಣೆ ಏರಲು ಸಿದ್ದತೆ ನಡೆಸಿದ್ದಾರೆ.
ಹೌದು, ಶುಭಾ ಪೂಂಜಾ ಮದುವೆಯಾಗುತ್ತಿರುವ ಹುಡುಗನ ಹೆಸರು ಸುಮಂತ್ ಮಹಾಬಲ. ಇವರು ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅಲ್ಲದೇ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ. ಈ ಇಬ್ಬರ ವಿವಾಹ ಮಂಗಳೂರಿನಲ್ಲಿ ನೆರವೇರಿದರೆ, ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯುವ ನಿರೀಕ್ಷೆ ಇದೆ. ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅವರಿಬ್ಬರ ಫೋಟೋ ಶೂಟ್ ಸಹ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದನ್ನು ನೀವು ನೋಡಬಹುದು.

Advertisement

 

Advertisement

Advertisement

ಈಗಾಗಲೇ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದರು ಇದೀಗ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. “ತ್ರಿದೇವಿ” ಚಿತ್ರದ ಮೂಲಕ ನಿರ್ಮಾಪಕಿಯಾಗಿ ಭಡ್ತಿ ಪಡೆದಿರುವ ಶುಭಾ ಸದ್ಯ “ರೈಮ್ಸ್” ಚಿತ್ರದಲ್ಲಿ ಟಿವಿ ವಾಹಿನಿಯೊಂದರ ನಿರೂಪಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶುಭ ಪೂಂಜಾ ಅವರು ಜನಿಸಿದ್ದು ಮಂಗಳೂರಿನಲ್ಲಿ, ಇವರ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. 2003 ರಲ್ಲಿ ಇವರು ಚೆನ್ನೈನ ರೂಪದರ್ಶಿಯಾಗಿ ಹೊರ ಹೊಮ್ಮಿದರು. ನಂತರ ಇವರಿಗೆ ತಮಿಳು ಚಿತ್ರ ರಂಗದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.

Advertisement

 

ಚಿತ್ರವೂ ಯಶಸ್ವಿ ಆಗದಿದ್ದರೂ, ನಾಯಕಿಯಾಗಿ ಹೊರ ಹೊಮ್ಮಿದರು. 2006 ರಲ್ಲಿ ಬಿಡುಗಡೆಗೊಂಡ “ಜಾಕ್ಪಾಟ್” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಚಿತ್ರದ ಯಶಸ್ವಿ ನಂತರ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶಗಳು ಸಿಕ್ಕಿದವು. ಕೆಲವು ಐಟಂ ಹಾಡುಗಳಲ್ಲೂ ಶುಭಾ ಸೊಂಟ ಬಳುಕಿಸಿದ್ದಾರೆ.

Advertisement
Share this on...