ಕಣ್ಮನ ಸೆಳೆಯುತ್ತಿದೆ ಪುತ್ರಿಯೊಂದಿಗಿನ ಶ್ವೇತಾ ಶ್ರೀವಾತ್ಸವ್ ವಿಶೇಷ ಫೋಟೋಶೂಟ್​​…!

in ಮನರಂಜನೆ/ಸಿನಿಮಾ 3,154 views

ಹಿಂದೂಗಳ ಹಬ್ಬಗಳಲ್ಲಿ ಪ್ರತಿ ಹಬ್ಬಕ್ಕೂ ಅದರದ್ದೇ ಆದ ವಿಶೇಷತೆ ಇದೆ. ಈಗ ನಾಡಿನಾದ್ಯಂತ ಜನರು ನವರಾತ್ರಿ ಸಂಭ್ರಮದಲ್ಲಿದ್ದಾರೆ. 9 ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವನ್ನು ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿ ಆಚರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ 9 ದಿನಗಳೂ ಕೂಡಾ ದೇವಿಯ ವಿವಿಧ ಅವತಾರಗಳನ್ನು ಆರಾಧಿಸಲಾಗುವುದು. ಆಂಧ್ರ, ತೆಲಂಗಾಣದಲ್ಲಿ ಬತುಕಮ್ಮ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸಿದರೆ, ಪಶ್ಚಿಮ ಬಂಗಾಳದಲ್ಲಿ ಕೂಡಾ ನವರಾತ್ರಿಯಲ್ಲಿ ದುರ್ಗಾ ಮಾತೆಯನ್ನು ಆರಾಧಿಸುತ್ತಾರೆ. ಬಹುತೇಕ ಕಡೆ ನವರಾತ್ರಿಯ 9 ದಿನಗಳು ಕೂಡಾ ವಿವಿಧ ಬಣ್ಣದ ವಸ್ತ್ರಗಳನ್ನು ಧರಿಸಿ ಖುಷಿ ಪಡುತ್ತಾರೆ. ಸಿನಿಮಾ ಸೆಲಬ್ರಿಟಿಗಳು ಸೇರಿದಂತೆ ಜನ ಸಾಮಾನ್ಯರು ಕೂಡಾ ಮೊದಲ ದಿನ ಕಿತ್ತಳೆ, ಎರಡನೇ ದಿನ ಬಿಳಿ, ಮೂರನೇ ದಿನ ಕೆಂಪು, ನಂತರ ನೀಲಿ, ಹಳದಿ, ಹಸಿರು, ಬೂದು ಬಣ್ಣ, ನೇರಳೆ ಹಾಗೂ ಒಂಬತ್ತನೇ ದಿನ ಕಡು ಹಸಿರು ಬಣ್ಣದ ವಸ್ತ್ರವನ್ನು ಧರಿಸಿ ಫೋಟೋ ತೆಗೆಸಿಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆ. ಪ್ರತಿ ಬಣ್ಣಕ್ಕೂ ಒಂದೊಂದು ಸಂಕೇತವಿದೆ.

Advertisement

Advertisement

ಸಿಂಪಲ್ಲಾಗ್ ಒಂದ್ ಲವ್​ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾ ಖ್ಯಾತಿಯ ಶ್ವೇತಾ ಶ್ರೀವಾತ್ಸವ್​​ ಕೂಡಾ ಈ ನವರಾತ್ರಿಯಂದು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಸೆಲಬ್ರಿಟಿಗಳು ಆಗ್ಗಾಗ್ಗೆ ಫೋಟೋಶೂಟ್ ಮಾಡಿಸುವುದು ಸಾಮಾನ್ಯ. ಅದೇ ರೀತಿ ಶ್ವೇತ ಕೂಡಾ ಇದುವರೆಗೂ ಅನೇಕ ಫೋಟೋಶೂಟ್​​​ ಮಾಡಿಸಿದ್ದಾರೆ. ಮಗಳು ಹುಟ್ಟಿದಾಗಿನಿಂದ ಮುದ್ದು ಅಶ್ಮಿತಾ ಜೊತೆ ಕೂಡಾ ಶ್ವೇತಾ ಸಖತ್ ಫೋಟೋಶೂಟ್ ಮಾಡಿಸಿದ್ದಾರೆ. ಆದರೆ ಈ ಬಾರಿ ಶ್ವೇತಾ ತಮ್ಮ ಪುತ್ರಿ ಅಶ್ಮಿತಾ ಜೊತೆ ವಿಭಿನ್ನ ಹಾಗೂ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ನವರಾತ್ರಿ ವಿಶೇಷವಾಗಿ ತೆಗೆಸಲಾಗಿರುವ ಈ ಫೋಟೋಗಳು ಬಹಳಷ್ಟು ಜನರಿಗೆ ಇಷ್ಟವಾಗಿದೆ. ಅಷ್ಟೇ ಅಲ್ಲ, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

Advertisement

ದುರ್ಗೆಯಂತೆ ಮೇಕಪ್ ಮಾಡಿಕೊಂಡಿರುವ ಶ್ವೇತಾ ಶ್ರೀವಾತ್ಸವ್, ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕೈಯ್ಯಲ್ಲಿ ಪುಸ್ತಕ ಹಿಡಿದಿದ್ದಾರೆ. ಫೋಟೋದಲ್ಲಿ ಒಟ್ಟು 8 ಕೈಗಳನ್ನು ಎಡಿಟ್ ಮಾಡಲಾಗಿದ್ದು, ಒಂದೊಂದು ಫೋಟೋಗಳನ್ನು ಒಂದೊಂದು ವಸ್ತುಗಳನ್ನು ಹಿಡಿದಿರುವ ಈ ಸುಂದರ ಫೋಟೋ ಎಲ್ಲರನ್ನು ಸೆಳೆಯುತ್ತಿದೆ. ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ವೇತಾ “ನಾನು ಒಬ್ಬ ಸಾಮಾನ್ಯ ಮಹಿಳೆ, ಆದರೆ ನನ್ನೊಳಗಿನ ಶಕ್ತಿಯನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ನಾನು ಅವಲಂಬಿಸಿರುವ ಮುಖ್ಯವಾದ ಅಸ್ತ್ರಗಳು ಇವು. ತಾಯಿ ದುರ್ಗೆಯ ಕಥೆಯೇ ನಮಗೆಲ್ಲಾ ಸ್ಪೂರ್ತಿ” ಎಂದು ಬರೆದುಕೊಂಡಿದ್ದಾರೆ.

Advertisement

ಮತ್ತೊಂದು ಫೋಟೋದಲ್ಲಿ, ದುರ್ಗೆಯಂತೆ ತ್ರಿಶೂಲ ಹಿಡಿದು, ಪುತ್ರಿ ಅಶ್ಮಿತಾಳನ್ನು ಮಡಿಲಲ್ಲಿ ಕೂರಿಸಿಕೊಂಡು ದುರ್ಗೆಯೇ ತನ್ನ ಕಂದನನ್ನು ಮಡಿಲಲ್ಲಿ ಕೂರಿಸಿಕೊಂಡಿರುವಂತೆ ಫೋಟೋಶೂಟ್ ಮಾಡಿಸಿದ್ದಾರೆ. ಶ್ವೇತಾ ಶ್ರೀವಾತ್ಸವ್​ ಕೆಂಪು ಬಣ್ಣದ ಸೀರೆಯಲ್ಲಿ ಹಾಗೂ ಪುತ್ರಿ ಅಶ್ಮಿತಾ ಬಿಳಿ ಹಾಗೂ ಕೆಂಪು ಬಣ್ಣದ ಝರಿ ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. ದುರ್ಗೆಯ ಕಾಸ್ಟ್ಯೂಮ್​​ನಲ್ಲಿ ಶ್ವೇತಾ ಹಾಗೂ ಪುತ್ರಿ ಇಬ್ಬರೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದು ಫೋಟೋಗಳನ್ನು ನೆಟಿಜನ್ಸ್ ಬಹಳ ಇಷ್ಟಪಟ್ಟಿದ್ದಾರೆ.

Advertisement
Share this on...