ಕರ್ಪೂರದ ಗೊಂಬೆ ಶ್ವೇತಾರವರು ಈಗ ಹೇಗಿದ್ದಾರೆ ಗೊತ್ತಾ..?

in ಮನರಂಜನೆ 336 views

ಅಕ್ಕ-ತಂಗಿಯ ಅನ್ಯೋನ್ಯತೆಯ ಸ್ವಾರ್ಥವಿಲ್ಲದ ಸಂಬಂಧದ ಬಗ್ಗೆ ಪ್ರೀತಿ ತ್ಯಾಗಗಳ ಬಗ್ಗೆ ಮಹತ್ವವನ್ನು ತಿಳಿಸುವಂತಹ ರಮೇಶ್ ಅರವಿಂದ್, ಶ್ರುತಿ ಹಾಗೂ ಶ್ವೇತರವರ ಮನೋಜ್ಞ ಅಭಿನಯದ ಚಿತ್ರ ಕರ್ಪೂರದ ಗೊಂಬೆ. ಕರ್ಪೂರದ ಗೊಂಬೆ ಸಿನಿಮಾದಲ್ಲಿ ನಟಿ ಶ್ವೇತಾ, ಶೃತಿಯವರ ಪ್ರೀತಿಯ ತಂಗಿಯಾಗಿ ಅಭಿನಯಿಸಿದ್ದರು.
ಸೆಂಟಿಮೆಂಟ್ ಅಂದರೆ ಹೀಗಿರುತ್ತೆ ಎಂದು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟಿದ್ದ ಎಸ್. ಮಹೇಂದರ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು.1996 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ನಟಿ ಶ್ರುತಿ ಹಾಗೂ ರಮೇಶ್ ಅರವಿಂದ್ ರವರ ಜೊತೆ ಸೆಂಟಿಮೆಂಟ್ ದೃಶ್ಯಗಳಲ್ಲಿ ನಟಿ ಶ್ವೇತಾರವರು ಕೂಡ ಅಮೋಘವಾಗಿ ಅಭಿನಯಿಸಿದ್ದರು.
ನಟಿ ಶ್ವೇತಾರವರ ಇನ್ನೊಂದು ಹೆಸರು ವಿನೋದಿನಿ. ಬಾಲನಟಿಯಾಗಿಯೂ ಕೂಡ ನಟಿಸುತ್ತಿದ್ದ ಈ ನಟಿ 1992 ರಲ್ಲಿ ಮೊದಲ ಬಾರಿಗೆ ತಮಿಳು ಚಿತ್ರವೊಂದರ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

Advertisement

Advertisement

ಕನ್ನಡದ ನಾಯಕ ನಟ ರಘುವೀರ್ ಅವರ ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದರು. ಚೈತ್ರದ ಪ್ರೇಮಾಂಜಲಿ ಸಿನಿಮಾ ಕನ್ನಡದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ರವರ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಚೈತ್ರದ ಪ್ರೇಮಾಂಜಲಿ ಸಿನಿಮಾ ನಿರ್ದೇಶಕ ಎಸ್. ನಾರಾಯಣ್ ನಾಯಕ ನಟ ರಘುವೀರ್ ಹಾಗೂ ನಟಿ ಶ್ವೇತಾರವರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿತು. ಚೈತ್ರದ ಪ್ರೇಮಾಂಜಲಿ ಸಿನಿಮಾದ ನಂತರ ನಟಿ ಶ್ವೇತಾರವರಿಗೆ ಕನ್ನಡದ ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ರಾಮ್ ಕುಮಾರ್ ರವರ ಜೊತೆ ಗೆಜ್ಜೆನಾದ, ಶಶಿಕುಮಾರ್ ಅವರ ಜೊತೆಯಲ್ಲಿ ಲಕ್ಷ್ಮಿ-ಮಹಾಲಕ್ಷ್ಮಿ ಸಿನಿಮಾಗಳಲ್ಲಿ ನಟಿ ಶ್ವೇತಾರವರು ಉತ್ತಮ ಅಭಿನಯ ತೋರಿದ್ದಾರೆ. ಮುದ್ದಿನ ಅಳಿಯ, ಮಾವನ ಮಗಳು, ಪಂಜಾಬಿ ಹೌಸ್, ಕುಟುಂಬ ಇನ್ನು ಮುಂತಾದ ಕನ್ನಡದ ಸಿನಿಮಾಗಳಲ್ಲಿ ನಟಿ ಶ್ವೇತಾರವರು ಅಭಿನಯಿಸಿದ್ದಾರೆ.

Advertisement

 

Advertisement


ನಟಿ ಶ್ವೇತಾರವರು 2002 ರ ನಂತರ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ ಹಾಗೂ ನಟಿ ಶ್ವೇತಾರವರಿಗೆ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಕೂಡ ಕಡಿಮೆಯಾದವು. ನಂತರ ತಮಿಳು ಕಿರುತೆರೆಯ ಲೋಕವನ್ನು ಪ್ರವೇಶಿಸಿದ ನಟಿ ಶ್ವೇತಾ ಹಲವಾರು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ನಟಿ ಶ್ವೇತಾರವರು ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ.

– ಸುಷ್ಮಿತಾ

Advertisement
Share this on...