ಸಿನಿಮಾದಿಂದ ದೂರ ಉಳಿದಿದ್ದ ಸಿಂಪಲ್ ಹುಡ್ಗಿ, ತನ್ನ ಮಗಳ ಜೊತೆ ಸಿಕ್ಕಿಬಿದ್ದಿರುವುದು ಹೀಗೆ..

in ಮನರಂಜನೆ 75 views

ಮುಖಮುಖಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್,ಸಿಂಪಲ್ ಅಗಿ ಒಂದ್ ಲವ್ ಸ್ಟೋರಿ (2013) ಚಿತ್ರದಲ್ಲಿನ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಖ್ಯಾತಿಯನ್ನ ಗಳಿಸುತ್ತಾರೆ. ನಟನೆಯ ಜೊತೆ ಅವರು ಸಮಾಜಮುಖಿ ಕೆಲಸದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ಅವರು, ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಪ್ರಾಣಿ ಕಲ್ಯಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೂ ಅವರು ಹೆಸರುವಾಸಿಯಾಗಿದ್ದರೆ. ಹಲವಾರು ನಾಟಕಗಳು ಮತ್ತು ಟೆಲಿವಿಷನ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡ ನಂತರ ಶ್ವೇತಾ ಅವರು ಚಲನಚಿತ್ರ ಮುಖಾಮುಖಿ (2006) ಎಂಬ ಚಿತ್ರದ ಮೂಲಕ ತಮ್ಮ ಚಲನಚಿತ್ರ ನಟನೆಗೆ ಪಾದಾರ್ಪಣೆ ಮಾಡಿದರು. ಸೈಬರ್ ಯುಗದೋಲ್ ನವ ಯುವ ಪ್ರೇಮಾ ಕಾವ್ಯಂ (2012) ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುವ ಮೊದಲು ದರೋಡೆಕೋರ ಆಧಾರಿತ ಚಿತ್ರ ಆ ದಿನಗಳು (2007) ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಈ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಯನ್ನು ಕೂಡ ಗೆದ್ದಿಕೊಂಡರು

Advertisement

Advertisement

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಕೊಂಚ ದೂರ ಉಳಿದಿರುವ ಶ್ವೇತಾ ಶ್ರೀವಾತ್ಸವ್, ತಮ್ಮ ಮಗಳ ಜೊತೆ ಆಟವಾಡುತ್ತಾ, ಪಾಠ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ..!ಶ್ವೇತಾ ಶ್ರೀವಾತ್ಸವ್ ಅವರಿಗೆ ಮಗಳು ಅಶ್ಮಿತಾ ಶ್ರೀವಾಸ್ತವ್ ಎಂದರೆ ಬಹಳ ಅಚ್ಚುಮೆಚ್ಚು, ಆಕೆಯೂ ಕೂಡ ಬಹಳ ಚೂಟಿಯೇ. ನೋಡಲು ತನ್ನ ಅಮ್ಮನಂತೆಯೇ ಬಹಳ ಸುಂದರವಾಗಿರುವ ಅಶ್ಮಿತಾ, ಅಮ್ಮನ ಜೊತೆ ಟಿಕ್ ಟಾಕ್ ವಿಡಿಯೋಗಳು ಮತ್ತು ಮನೆಯೊಳಗಿನ ಆಟವಾಡುತ್ತಾ ಕಾಲ ಕಳೆಯತ್ತಿದ್ದಾರೆ. ಇದೀಗ ತನ್ನ ಅಮ್ಮನ ಜೊತೆ ಯೋಗ ಕಲೆಯುತ್ತಿರುವ ಅಶ್ಮಿತಾ, ಬಹಳ ಅಚ್ಚು ಕಟ್ಟಾಗಿ ಅಮ್ಮ ಹೇಳಿಕೊಡುತ್ತಿರುವುದನ್ನು ಮಾಡುತ್ತಿದ್ದಾಳೆ. ಈ ಫೋಟೋ ಮತ್ತು ವಿಡಿಯೋ ಗಳನ್ನು ನಟಿ ಶ್ವೇತಾ ಶ್ರೀವಾಸ್ತವ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇದನ್ನು ನೋಡಿ ಖುಷಿ ಪಡುತ್ತಿದ್ದಾರೆ.

Advertisement

Advertisement

ಇನ್ನು ಗಿರೀಶ್ ವೈರಮುಡಿ ಅವರು ಒಂದು ಕಥೆ ಹೇಳ್ಲಾ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಈಗ ತಮ್ಮ ಎರಡನೇ ಸಿನಿಮಾ ರಹದಾರಿ ಚಿತ್ರವನ್ನು ಆರಂಭಿಸಿದ್ದು ಈ ಚಿತ್ರದಲ್ಲಿ ಶ್ವೇತಾ ಅಭಿನಯಿಸುತ್ತಿದ್ದಾರೆ.ಇತಿಹಾಸ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು,ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ ‘ಬೆಂಗಳೂರು ಮತ್ತು ಪೂಣೆ ಹೈವೇಯಲ್ಲಿ ಲಾರಿಯೊಂದು ಚಲಿಸುವಾಗ ಕಳ್ಳತನವಾಗುತ್ತದೆ.ಆ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರದಿಂದ ನಿಯೋಜನೆಗೊಂಡ ಲೇಡಿ ಆಫೀಸರ್ ಒಬ್ಬರು ಬರುತ್ತಾರೆ”.

ಆ ಪೊಲೀಸ್ ಅಧಿಕಾರಿ ನಟಿ ಶ್ವೇತಾ ಶ್ರೀವಾತ್ಸವ್! ಲಾರಿಯನ್ನು ದೋಚುವ ರಾಬರಿ ತಂಡದ ಸದಸ್ಯರಾಗಿ ಬಾಲಾಜಿ ಮನೋಹರ್, ಕೀರ್ತೇಶ್ ಜಿ.ಎಂ. ಮತ್ತು ಸುಪ್ರಿತಾ ಸತ್ಯನಾರಾಯಣ್ ನಟಿಸುತ್ತಿದ್ದಾರೆ. ಒಂದು ಲಾರಿ ಕಳ್ಳತನವಾದರೆ ಅದಕ್ಕೆ ಯಾಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗುತ್ತದೆ? ಆ ಲಾರಿಯಲ್ಲಿ ಅಂಥದ್ದೇನಿರುತ್ತದೆ? ಅಸಲಿಗೆ ಲಾರಿ ಮತ್ತು ಅದನ್ನು ದರೋಡೆಕೋರರ ತಂಡ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾ? ಹೀಗೆ ಕ್ಷಣಕ್ಷಣಕ್ಕೂ ಕುತೂಹಲಗಳನ್ನು ತೆರೆದಿಡುವ ರೋಚಕ ಕಥೆಯೇ ರಹದಾರಿ!

Advertisement
Share this on...