ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು, ನನ್ನ ಮಗ ಆಗಲಿಲ್ಲಾ: ಹೆಚ್ ಡಿ ದೇವೇಗೌಡ - Namma Kannada Suddi

ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು, ನನ್ನ ಮಗ ಆಗಲಿಲ್ಲಾ: ಹೆಚ್ ಡಿ ದೇವೇಗೌಡ

in ರಾಜಕೀಯ 210 views

ದೇವೇಗೌಡರು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆದ್ರು ನನ್ನ ಮಗ ಆಗಲಿಲ್ಲಾ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಾಜಿ ಸಿಎಂ ಸಿದ್ದರಾಮಯ್ಯ ಅವ್ರುಗೆ ಚಾಟಿ ಬೀಸಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಕಣ್ಣೀರಿಗೆ ಕರಗಬೇಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಶಿರಾ ಉಪ ಚುನಾವಣೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ ನವ್ರು ರಾಜಕೀಯಕ್ಕೆ ಯಾವಾಗ ಬಂದ್ರು..ದೇವೇಗೌಡ್ರು ಹಿಂದಿನಿಂದಲೂ ಕೆಲಸ ಮಾಡ್ತಿದ್ದಾರೆ..20 ವರ್ಷ ಆದ್ಮೇಲೆ ಅವ್ರು ನಮ್ ಜೊತೆ ಬಂದರು ಎಂದು ಹೆಚ್ ಡಿ ದೇವೇಗೌಡ ಹೇಳಿದರು.

Advertisement

ಸಮರ್ಥವಾಗಿ ಉತ್ತರ ಕೊಡೋಕೆ ಈಗಲೂ ಶಕ್ತಿ ಇದೆ

Advertisement

ಮುಂದುವರೆದು ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡ್ತಿವೆ. ಅವ್ರ ದಾಳಿಗೆ ಪ್ರತ್ಯುತ್ತರವಾಗಿ ಎಲ್ಲ ವಿಷಯವನ್ನ ಹೊರಹೊಮ್ಮಿಸಿ ಮಾತನಾಡೋಕೆ ಸಿದ್ದನಿದ್ದೇನೆ. ಇವತ್ತು ಒಂದೇ ದಿನ ಅಲ್ಲಾ, ಹತ್ತು ದಿನ ಇಲ್ಲೇ ಇರ್ತೀನಿ. ಯಾರ್ಯಾರು ಏನೇನು ದಾಳಿ ಮಾಡ್ತಾರೆ. ಅವ್ರಿಗೆ ಉತ್ತರ ಕೊಡೋಕೆ ನಾನಿಲ್ಲೇ ಇರ್ತೀನಿ.. ನಾನು ದಾರಿ ತಪ್ಪಿ ಮಾತಾಡೋದಿಲ್ಲಾ. ನಡೆದ ಘಟನಾವಳಿಗಳನ್ನ ಹೇಳೋಕೆ ನನಗ್ಯಾವ ಭಯನೂ ಇಲ್ಲಾ. ಸಮರ್ಥವಾಗಿ ಉತ್ತರ ಕೊಡೋಕೆ ಈಗ್ಲೂ ಶಕ್ತಿ ಇದೆ, ಆ ಕೆಲ್ಸ ಮಾಡ್ತೀನಿ ಎಂದರು.

Advertisement

Advertisement

ನಮ್ಮಲ್ಲಿ ಕೆಲವರನ್ನ ಸೆಳೆಕೊಂಡು ಹೋಗಿರಬಹುದು, ನಾನು ದೃತಿಗೆಡಲ್ಲಾ

ಶಿರಾ ಉಪಚುನಾವಣೆ ಪ್ರಚಾರಕ್ಕೆ ಮೊದಲ ಬಾರಿ ಬಂದಿದ್ದೇನೆ..
ನವೆಂಬರ್ 1 ರವರೆಗೂ ಉಪಚುನಾವಣೆ ಕೆಲಸ ಮಾಡೋಕೆ ಟೊಂಕಕಟ್ಟಿ ಬಂದಿದ್ದೇನೆ. ನಾಳೆಯಿಂದ ನಾನು ಇಲ್ಲೇ‌ ಇರ್ತೀನಿ..
ನಾನು ಮುಖ್ಯಂಮತ್ರಿ ಆಗಿದ್ದಾಗ ತುಮಕೂರಲ್ಲಿ 9 ಜೆಡಿಎಸ್ ಶಾಸಕರು ಗೆದ್ದಿದ್ದರು. ಈತ್ತೀಚೆಗೆ 4 ಜನ ಗೆದ್ದಿದ್ದಾರೆ. ಅದರಲ್ಲಿ ಸತ್ಯನಾರಾಯಣ್ ಅಗಲಿದ್ದಾರೆ.. ಹೀಗಾಗಿ ಅವರ ಶ್ರೀಮತಿ ಅವ್ರನ್ನೇ ನಿಲ್ಲಿಸಿದ್ದೇವೆ. ಎರಡೂ ರಾಷ್ರ್ಟೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡ್ತಿವೆ. ನಮ್ಮಲ್ಲಿ ಕೆಲವರನ್ನ ಸೆಳೆಕೊಂಡು ಹೋಗಿರಬಹುದು,ನಾನು ದೃತಿಗೆಡಲ್ಲಾ ಎಂದು ಸವಾಲು ಹಾಕಿದರು.

ಮಹಾಜನತೆ ಎಲ್ಲವನ್ನೂ ಎದುರಿಸಿ‌ ನಿಂತು ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಪ್ರಾದೇಶಿಕ ಪಕ್ಷವನ್ನ ಸಂಪೂರ್ಣವಾಗಿ ನಾಶ ಮಾಡ್ತೀನಿ ಅನ್ನೋ ಪಣತೊಟಿದ್ದಾರೆ.ಆದರೆ ಮಹಾಜನತೆ ಈ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನ ಅರ್ಥ ಮಾಡಿಕೊಂಡಿದ್ದಾರೆ. ಹಣದ ಹೊಡೆತ ಆದರೂ ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡ್ತಿದ್ದಾರೆ ಎಂದರು.

ಪ್ರಚಾರದ ಸಭೆಗೆ ಗುಬ್ಬಿ ಶಾಸಕ ಗೈರು: ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದ ಹೆಚ್ ಡಿಡಿ

ಪ್ರಚಾರದ ಸಭೆ ವೇಳೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ ಗೈರಾಗಿದ್ದರು. ಅಸಮಾಧಾನ ಹಿನ್ನಲೆಯಲ್ಲಿ ಸಭೆಗೂ ಬಂದಿಲ್ಲ ಎಂಬ ವಿಚಾರವೂ ಇತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಪ್ರಧಾನಿ ಹೆಚ್ ಡಿಡಿ, ಎಸ್ ಆರ್ ಶ್ರೀನಿವಾಸ ಅವರಿಗೆ ಕೊರೋನಾ ಅಂತಾ ಹೇಳಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದು ಸ್ಪಷ್ಟನೆ ನೀಡಿದರು.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top