ನಿರ್ದೇಶಕನ ಜೊತೆ ನಟ ಲಿಪ್ ಲಾಕ್, ಶಾಕ್ ಆದ ಪ್ರೇಕ್ಷಕರು !

in ಮನರಂಜನೆ/ಸಿನಿಮಾ 30 views

ಸಿದ್ದು ಜೊನ್ನಲಗಡ್ಡ, ಶ್ರದ್ಧಾ ಶ್ರೀನಾಥ್, ಶಾಲಿನಿ ವಡ್ನಿಕಟ್ಟಿ ಮತ್ತು ಸೀರತ್ ಕಪೂರ್ ಅಭಿನಯದ ‘ಕ್ಷಣಂ’ ಖ್ಯಾತಿಯ ರವಿಕಾಂತ್ ಪೆರೆಪು ಅವರ ‘ಕೃಷ್ಣ ಆಂಡ್ ಹಿಸ್ ಲೀಲಾ’ ದೈತ್ಯ ಒಟಿಟಿ ನೆಟ್ಫ್ಲಿಕ್ಸ್ ಟುಡೇನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಆದರೆ ಇದೀಗ ಚಿತ್ರಕ್ಕಿಂತ ಚಿತ್ರ ನಿರ್ದೇಶಕರು ಮತ್ತು ಚಿತ್ರದ ನಾಯಕ ಭಾರೀ ಸುದ್ದಿಯಲ್ಲಿದ್ದಾರೆ.  ಹೌದು, ಈ ಚಿತ್ರದ ನಿರ್ದೇಶಕ ರವಿಕಾಂತ್ ಪೆರೆಪು ಮತ್ತು ನಾಯಕ ಸಿದ್ದು ಜೊನ್ನಲಗಡ್ಡ ಅವರ ಶಾಕಿಂಗ್ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಂಥದ್ದೇನಿದೆ ಆ ಫೋಟೋದಲ್ಲಿ ಅಂತೀರಾ?, ವಿಷಯವಿಷ್ಟೇ. ಈ ಫೋಟೋದಲ್ಲಿ ಇಬ್ಬರೂ ಪರಸ್ಪರ ಲಿಪ್ ಲಾಕ್ ಮಾಡುತ್ತಿರುವುದನ್ನು ನಾವು ನೋಡಬಹುದು. ರವಿಕಾಂತ್ ಪೆರೆಪು ಮತ್ತು ಸಿದ್ದು ಜೊನ್ನಲಗಡ್ಡ ಇಬ್ಬರೂ ಹೀಗೆ ಲಿಪ್ ಲಾಕ್ ಮಾಡಿರುವುದನ್ನು ನೋಡಿದ ತೆಲುಗು ಪ್ರೇಕ್ಷಕರಿಗೆ ಈಗ ನಿಜಕ್ಕೂ ಆಘಾತವಾಗಿದೆ.

Advertisement

Advertisement

ಬಹಳಷ್ಟು ದಿನಗಳ ನಂತರ ಚಿತ್ರವನ್ನು ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿರುವುದಕ್ಕೆ ಅವರು ಹೀಗೆ ಸಂತೋಷವಾಗಿದ್ದಾರೆಂದು ಎಂದು ಹೇಳಲಾಗಿದೆ.  ಕೃಷ್ಣ (ಸಿದ್ದು ಜೊನ್ನಲಗಡ್ಡ) ತನ್ನ ಗೆಳತಿ ಸತ್ಯ (ಶ್ರದ್ಧಾ ಶ್ರೀನಾಥ್) ಜೊತೆ ಬ್ರೇಕ್ ಅಪ್ ಆಗುತ್ತಿದ್ದಂತೆ ‘ಕೃಷ್ಣ ಆಂಡ್ ಹಿಸ್ ಲೀಲಾ’ ಚಿತ್ರ ಪ್ರಾರಂಭವಾಗುತ್ತದೆ. ತನ್ನ ಜೀವನದ ಬಗ್ಗೆ ಅಸಮಾಧಾನಗೊಂಡ ಕೃಷ್ಣ ಮಾಮೂಲಿಯಂತೆ ಜೀವನ ಸಾಗಿಸಲು ನಿರ್ಧರಿಸುತ್ತಾನೆ. ಆ ನಂತರ ರಾಧಾಳನ್ನು (ಶಾಲಿನಿ ವಡ್ನಿಕಟ್ಟಿ) ಪ್ರೀತಿಸುತ್ತಾನೆ. ಆದರೆ ಅವನ ಕೆಲಸದ ಸಲುವಾಗಿ ಬೆಂಗಳೂರಿಗೆ ಬರಬೇಕಾಗುತ್ತದೆ. ಬೆಂಗಳೂರಲ್ಲಿ ಅವನು ಮತ್ತೊಮ್ಮೆ ಸತ್ಯಳನ್ನು ಭೇಟಿಯಾಗುತ್ತಾನೆ. ಮತ್ತೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಕೊನೆಗೆ ಕೃಷ್ಣ ಇಬ್ಬರೂ ಹುಡುಗಿಯರ ಜೊತೆ ಡೇಟಿಂಗ್ ಜೊತೆ ಮಾಡಲು ಪ್ರಾರಂಭಿಸುತ್ತಾನೆ. ಉಳಿದ ಕಥೆಯು ಕೃಷ್ಣನು ಯಾರನ್ನು ಆರಿಸಿಕೊಳ್ಳುತ್ತಾನೆ ಎಂಬುದು.

Advertisement

Advertisement

ಒಟ್ಟಾರೆಯಾಗಿ, ‘ಕೃಷ್ಣ ಆಂಡ್ ಹಿಸ್ ಲೀಲಾ’ ಒಂದು ವಿಶಿಷ್ಟ ರೋಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು, ಇದು ಇಂದಿನ ಯುವಕರ ಪ್ರೀತಿಯಲ್ಲಿ ಸ್ಥಿರತೆ ಬಂದಾಗ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಡೀಸೆಂಟ್ ರೋಮ್ಯಾನ್ಸ್, ಒಳ್ಳೆಯ ಪರ್ ಫಾರ್ಮೆನ್ಸ್ ಮತ್ತು ಸಂಗೀತವು ಚಿತ್ರದ ಆಕರ್ಷಕ ಅಂಶಗಳಾಗಿವೆ. ಕಥೆಯ ವೇಗವು ನಿಧಾನವಾಗಿದೆ. ಆದರೆ ನಿರ್ದೇಶಕ ರವಿಕಾಂತ್ ಪೆರೆಪು ಈ ಚಿತ್ರವನ್ನು ತೆಲುಗು ನೇಟಿವಿಟಿಯಲ್ಲಿ ಚೆನ್ನಾಗಿ ಹೊಂದಿಸಿದ್ದಾರೆ.

Advertisement
Share this on...