ಬಿಜೆಪಿ ಎಸೆದ ೫ ಸವಾಲುಗಳಿಗೆ ಸಿದ್ದು ಫುಲ್ ಸೈಲೆಂಟ್...! - Namma Kannada Suddi

ಬಿಜೆಪಿ ಎಸೆದ ೫ ಸವಾಲುಗಳಿಗೆ ಸಿದ್ದು ಫುಲ್ ಸೈಲೆಂಟ್…!

in ರಾಜಕೀಯ 79 views

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಆಡಳಿತರೂಢ ಬಿಜೆಪಿ ನಡುವೆ ಟ್ವೀಟ್ ವಾರ್ ತೀವ್ರ ಸ್ವರೂಪ ಪಡೆದುಕೊಂಡಿದೆ. ಉಪಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಎರಡು ಪಕ್ಷಗಳು ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುತ್ತಿವೆ. ಮುಖ್ಯವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಇದೀಗ ಬಿಜೆಪಿ ಸಿದ್ದರಾಮಯ್ಯನವರಿಗೆ ಐದು ಪ್ರಶ್ನೆಗಳನ್ನು ಕೇಳುವ ಮೂಲಕ ಭರ್ಜರಿ ತಿರುಗೇಟು ನೀಡಿದೆ. ಈ ಸಂಬAಧ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯಗೆ ಐದು ಟ್ವೀಟ್ಗಳನ್ನು ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ. ಬಿಜೆಪಿ ಎಸೆದಿರುವ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಫುಲ್ ಸೈಲೆಂಟ್ ಆಗಿದ್ದಾರೆ. ಅಷ್ಟಕ್ಕೂ ಬಿಜೆಪಿ ಕೇಳಿರುವ ಪ್ರಶ್ನೆಗಳು ಹೀಗಿವೆ ನೋಡಿ…

Advertisement

Advertisement

೧. ೨೦೧೩ ರಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್ ಅಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಿಳಿದ ನೀವು, ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕು ಎಂಬ ಕಾರಣಕ್ಕೆ ಸೋಲಿಸಿದಿರಿ. ಇದು ನ್ಯಾಯವೇ?

Advertisement

೨. ನಿಮ್ಮ ಆಡಳಿತದಲ್ಲಿ ಪ್ರತಿ ೪ ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಪ್ರತಿ ೫ ದಿನಕ್ಕೆ ಒಬ್ಬ ದಲಿತನ ಕೊಲೆ ಇಷ್ಟೆಲ್ಲಾ ಆಗುತ್ತಿದ್ದರೂ, ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ ! ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ..?

Advertisement

೩. ನಿಮ್ಮ ತುಘಲಕ್ ದರ್ಬಾರ್‌ನಲ್ಲಿ ೩೫೦ ಕ್ಕೂ ಹೆಚ್ಚು ದಲಿತರ ಕೊಲೆಗಳಾದವು. ೮೦೦ ಕ್ಕೂ ಅಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. ೯೦೦೦ ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದವು. ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ?

೪. ನೀವು ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಕಾರಕ್ಕೇರಲು ಶ್ರಮಿಸಿದ ನಿಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ.ಒಮ್ಮೆ ಸೋಲಿಸಿದಿರಿ, ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ, ಇದೇ ದಲಿತ ಪ್ರೇಮವೇ?

೫. ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರು. ನೀವು ಮಾಡಿದ್ದಾದರೂ ಏನು? ದಲಿತ ಶಾಸಕನನ್ನು ರಕ್ಷಿಸುವುದನ್ನು ಬಿಟ್ಟು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ಸಿದ್ದರಾಮಯ್ಯ?

ಬಿಜೆಪಿ ಎಸೆದಿರುವ ಈ ಪ್ರಶ್ನೆಗಳಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾವುದೇ ಉತ್ತರ ನೀಡಿಲ್ಲ. ಅದೇ ರೀತಿ ಪ್ರಧಾನಿ ಮೋದಿಯವರ ಬಳಿ ತೆರಳಿ ಪ್ರವಾಹ ಪರಿಹಾರ ತೆಗೆದುಕೊಂಡು ಬನ್ನಿ ಎಂದು ಸಿದ್ದರಾಮಯ್ಯ ಎಸೆದಿರುವ ಸವಾಲನ್ನು ರಾಜ್ಯ ಬಿಜೆಪಿ ನಾಯಕರು ಸ್ವೀಕರಿಸಿಲ್ಲ ಮತ್ತು ಯಾವುದೇ ಉತ್ತರವನ್ನು ನೀಡಿಲ್ಲ.

Advertisement
Share this on...

Latest from ರಾಜಕೀಯ

ಅಭಿಮಾನಿ ತಮ್ಮನ್ನು ಬೀಳಿಸಿದರೂ ಕೋಪಗೊಳ್ಳದ ಪವನ್ ಕಲ್ಯಾಣ್…ನಿಮ್ಮ ಸಹನೆಗೆ ಹ್ಯಾಟ್ಸಾಫ್ ಎಂದ ನೆಟಿಜನ್ಸ್​​​​​​..ವಿಡಿಯೋ

ಪವನ್ ಕಲ್ಯಾಣ್, ಆಂಧ್ರ ಹಾಗೂ ತೆಲಂಗಾಣದಲ್ಲಿ ಪವರ್ ಸ್ಟಾರ್ ಎಂದೇ ಫೇಮಸ್. ನಟನಾಗಿ, ರಾಜಕೀಯ ನಾಯಕನಾಗಿ…

ತಮಿಳುನಾಡು ಸಿಎಂ ಭೇಟಿ ಮಾಡಿದ ಶಿವರಾಜ್​​ ಕುಮಾರ್ ದಂಪತಿ….ಭೇಟಿ ಬಗ್ಗೆ ಶಿವಣ್ಣ ಹೇಳಿದ್ದೇನು..?

ಬ್ಯುಸಿ ಶೆಡ್ಯೂಲ್ ನಡುವೆಯೂ ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರಿನಿಂದ ಶಕ್ತಿಧಾಮದ ಮಕ್ಕಳನ್ನು ಬೆಂಗಳೂರಿಗೆ ಕರೆತಂದು…

ನನ್ನ ಕೆನ್ನೆಗಳನ್ನು ಇನ್ಮುಂದೆ ಜೋಪಾನವಾಗಿರಿಸಿಕೊಳ್ಳಬೇಕು…ಸಂಸದೆ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ…?

ರಾಜಕೀಯ ಮುಖಂಡರು ಕೆಲವೊಮ್ಮೆ ತಿಳಿದೋ, ತಿಳಿಯದೆಯೋ ನೀಡುವ ಕೆಲವೊಂದು ಹೇಳಿಕೆಗಳು ಇತರರ ಬೇಸರಕ್ಕೆ ಕಾರಣವಾಗುತ್ತದೆ. ಈ…

ಪಾಲಿಟಿಕ್ಸ್​​​​ ಬೇಡ ಎನ್ನುತ್ತಿದ್ದ ರಿಯಲ್ ಹೀರೋ, ಪ್ರಕಾಶ್ ರಾಜ್​ ವಿರುದ್ಧ ಮಾ ಚುನಾವಣೆಗೆ ಸ್ಪರ್ಧಿಸ್ತಾರಾ…?

ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅವರು…

Go to Top