ಗಾಯಕಿ ಚಿತ್ರ ಮಗಳು ಹೇಗೆ ಸಾವನ್ನಪ್ಪಿದಳು ನಿಮಗೆ ಗೊತ್ತಾ…!

in ಕನ್ನಡ ಮಾಹಿತಿ 48 views

ತಮ್ಮ ಸುಮಧುರ ಕಂಠದಿಂದ ಎಲ್ಲರ ಮನೆ ಮಾತಾದವರು ಗಾಯಕಿ ಕೆ.ಎಸ್. ಚಿತ್ರ. ಎಂತಹ ಕ್ಲಿಷ್ಟಕರ ಹಾಡನ್ನು ಲೀಲಾಜಾಲವಾಗಿ ಹಾಡುವಷ್ಟು ಸಂಗೀತ ಶಕ್ತಿ ಅವರಿಗೆ ಒಳಿದಿದೆ. ಕೇರಳದಲ್ಲಿ ಹುಟ್ಟಿದ್ದ ಅವರು ಅನೇಕ ಭಾಷೆಗಳಲ್ಲಿ ಹಾಡಿದರೂ ಕನ್ನಡಿಗರ ಪಾಲಿಗೆ ಅವರು ಕನ್ನಡದ ಕೋಗಿಲೆ. ಅವರ ಕಂಠ, ಕನ್ನಡ ಉಚ್ಚಾರಣೆ ಅವರು ಕನ್ನಡದವರು ಎನ್ನುವಷ್ಟು ಅವರನ್ನು ಜನರಿಗೆ ಹತ್ತಿರವಾಗಿಸಿದೆ. 1986ರಿಂದ ಕನ್ನಡದಲ್ಲಿ ಹಾಡುತ್ತಿರುವ ಅವರು ನೂರಾರು ಹಾಡುಗಳನ್ನ ಹಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇಲ್ಲಿಯವರೆಗೆ ವಿವಿಧ ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧನಿಯಾಗಿದ್ದಾರೆ. ಆದರೆ ಅವರ ವೈಯಕ್ತಿಕ ಬದುಕು ಅವರ ಸಂಗೀತದಷ್ಟೇನ್ನೂ ನಾದ ಮಯವಾಗಿರಲಿಲ್ಲ. ಎಲ್ಲವೂ ಚೆನ್ನಾಗಿದೆ ಎಂದು ಕೊಂಡು ಖುಷಿಯಾಗಿದ್ದಾಗಳೇ ಅವರ ಜೀವನದಲ್ಲಿ ದುರಂತವೊಂದು ಸಂಭವಿಸಿತು.

Advertisement

 

Advertisement

 

Advertisement
View this post on Instagram

 

Advertisement

Today all the sweet and wonderful memories are flashing in our mind as we celebrate your birthday. We love and miss you so much. May you have a wonderful BIRTHDAY in heaven our dearest NANDANA.

A post shared by K S Chithra (@kschithra) on

ಚಿತ್ರರವರು ಇತ್ತೀಚೆಗೆ ಫೇಸ್ಬುಕ್ ನ ತಮ್ಮ ಪುಟದಲ್ಲಿ ಮಗಳ ಫೋಟೋವನ್ನು ಹಾಕಿಕೊಂಡು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದರು.
ಸದಾ ನಗುಮೊಗದ ಅಚ್ಚುಮೆಚ್ಚಿನ ಗಾಯಕಿಯ ಬದುಕಿನಲ್ಲಿ ಇಂತಹದೊಂದು ಕಹಿ ಘಟನೆ ನಡೆಯಿತು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಚಿತ್ರರವರ ಬರಹ ಓದಿದವರನ್ನು ಭಾವುಕರನ್ನಾಗಿಸಿದೆ. ಚಿತ್ರರವರು ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಮಗಳು ನಂದನಾ ಚಿತ್ರ ಅವರನ್ನು ಅಗಲಿದಾಗ ಆ ಪುಟಾನಿಗೆ ಕೇವಲ 9 ವರ್ಷ. ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮನೆಯ ತುಂಬಾ ನಲಿದಾಡಿಕೊಂಡಿದ್ದ ನಂದನಾರನ್ನು ತನ್ನಂತೆಯೇ ಬೆಳೆಸುವ ಆಸೆಯನ್ನು ಹೊಂದಿದ್ದರು ಚಿತ್ರ. ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಚಿತ್ರ ಅವರ ಮಗಳು ಬದುಕಿದ್ದರೆ ಮತ್ತೊಬ್ಬ ಗಾಯಕಿ ಸಂಗೀತ ಲೋಕಕ್ಕೆ ಸಿಗುತ್ತಿದ್ದಳು. ಆದರೆ ವಿಧಿಬರಹ ಬೇರೆಯೇ ಇತ್ತು. ಈ ಕಹಿ ಘಟನೆ ನಡೆದು ಒಂಬತ್ತು ವರ್ಷಗಳೇ ಕಳೆದಿವೆ.

 

2011ರ ಏಪ್ರಿಲ್ 14ರಂದು ದುಬೈನಲ್ಲಿ ನಡೆಯುತ್ತಿದ್ದ ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಚಿತ್ರ ಭಾಗವಹಿಸಿದ್ದರು. ಅಲ್ಲಿ ಹಾಡುತ್ತಿರುವಾಗ ಊರಲ್ಲಿ ಮಗಳು ನಂದನಾ ಆಕಸ್ಮಿಕವಾಗಿ ಈಜುಕೊಳದಲ್ಲಿ ಬಿದ್ದು ಮುಳುಗಿ ಮೃತಪಟ್ಟ ಘಟನೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಏಪ್ರಿಲ್ 14ರಂದು ಮಗಳ ಪುಣ್ಯಸ್ಮರಣೆಯ ದಿನದಂದು ಚಿತ್ರ ಮಗಳನ್ನು ನೆನೆದು ಭಾವುಕರಾಗಿದ್ದರು. ಎಂತಹವರ ಕಣ್ಣಲ್ಲೂ ನೀರು ತರಿಸುವಂತಹ ಹೃದಯಸ್ಪರ್ಶಿ ಬರಹವೊಂದನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಹೀಗೆ ತಮ್ಮ ಎದೆಯೆತ್ತರಕ್ಕೆ ಬೆಳೆದು ನಿಲ್ಲಬೇಕಿದ್ದ ಮಗಳು ತನ್ನೊಂದಿಗೆ ಇಲ್ಲ ಎಂಬ ಅವರ ನೋವು ಹೇಗಿರಬಹುದು ಎಂಬುದನ್ನು ಆ ಬರಹ ವಿಷಾದದ ಭಾವನೆಯೊಂದಿಗೆ ವಿವರಿಸುತ್ತದೆ.

 


ಪ್ರತಿಯೊಂದು ಜನನಕ್ಕೂ ಒಂದು ಉದ್ದೇಶವಿರುತ್ತದೆ ಮತ್ತು ಆ ಉದ್ದೇಶ ಪೂರ್ಣಗೊಂಡ ಬಳಿಕ ಅವರು ಶಾಶ್ವತವಾದ ಜಗತ್ತಿಗೆ ಹೊರಡುತ್ತಾರೆ ಎಂದು ಜನರು ಹೇಳುವುದನ್ನ ನಾನು ಕೇಳಿದ್ದೇನೆ ಹಾಗೆ ಕಾಲವು ಎಲ್ಲವನ್ನು ಗುಣಪಡಿಸುತ್ತದೆ ಎಂದು ಸಹ ಹೇಳುತ್ತಾರೆ. ಆದರೆ ಅಂತಹ ಸನ್ನಿವೇಶದಲ್ಲಿ ಸಾಗಿರುವ ಜನರಿಗೆ ಗೊತ್ತು ಅದು ಸತ್ಯ ಅಲ್ಲ ಎಂದು. ಆದರೆ ನೋವು ಈಗಲೂ ಹಸಿಯಾಗಿದೆ ಮತ್ತು ಅತೀವ ನೋವು ನೀಡುತ್ತಿದೆ ಮಿಸ್ ಯು ನಂದನಾ ಎಂದು ಭಾವುಕರಾಗಿ ಬರೆದಿದ್ದರು. ತಂದೆ-ತಾಯಿಗಳಿಗೆ ತಮ್ಮ ಕಣ್ಣುಮುಂದೆಯೇ ತಮ್ಮ ಮಕ್ಕಳು ಈ ಪ್ರಪಂಚವನ್ನು ಬಿಟ್ಟು ಅಗಲಿದಾಗ ಉಂಟಾಗುವ ದುಃಖವೆಂಬ ಕೆಂಡ ಅವರ ಬದುಕಿನ ಕೊನೆಯವರೆಗೂ ಆರುವುದಿಲ್ಲ.

– ಸುಷ್ಮಿತಾ

Advertisement
Share this on...