ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ವಿಜಯಲಕ್ಷ್ಮಿ ಅಲಿಯಾಸ್ ಸಿಲ್ಕ್ ಸ್ಮಿತಾ..!

in ಮನರಂಜನೆ/ಸಿನಿಮಾ 195 views

ಹಳ್ಳಿಮೇಷ್ಟ್ರೇ..ಹಳ್ಳಿಮೇಷ್ಟ್ರೇ.. ಪಾಠ ಮಾಡಿ ಬನ್ನಿ.. ಹಾಡು ಯುವಕರ ಮೋಸ್ಟ್ ಫೇವರೆಟ್ . ಇದೊಂದೇ ಹಾಡು ಮಾತ್ರವಲ್ಲ. ‘ಅಳಿಮಯ್ಯ’ ಚಿತ್ರದ ನನ್ನ ನಿನ್ನ ಅಂಟು ನಂಟು..ನಿನ್ನಳತೆ ಮೂರು ಮೊಳಾನಾ ..’ಚಿನ್ನ’ ಚಿತ್ರದ ಆಂಟಿ ಬಂದ್ಲು ಆಂಟಿ..’ಲಾಕಪ್ ಡೆತ್’ ಚಿತ್ರದ ಬಂತು ಬಂತು ಕರೆಂಟು ಬಂತು..ಈ ಹಾಡುಗಳು ಸಿಲ್ಕ್ ಸ್ಮಿತಾ ಅವರನ್ನು ನೆನಪಿಸುತ್ತದೆ. ತಮ್ಮ ಗ್ಲ್ಯಾಮರ್ ಹಾಗೂ ಕಣ್ಣೋಟದಿಂದಲೇ ಹುಡುಗರ ಎದೆಬಡಿತ ಹೆಚ್ಚಾಗುವಂತೆ ಮಾಡಿದ್ದ ವಿಜಯಲಕ್ಷ್ಮಿ ವಡ್ಲಪಟ್ಲ ಅಲಿಯಾಸ್ ಸಿಲ್ಕ್ ಸ್ಮಿತಾ ಇಂದು ಬದುಕಿಲ್ಲ. ಆದರೆ ಅವರನ್ನು ಅಭಿಮಾನಿಗಳು ಮಾತ್ರ ಮರೆಯುವುದಿಲ್ಲ. 2011 ರಲ್ಲಿ ಬಿಡುಗಡೆಯಾದ ಹಿಂದಿಯ ‘ಡರ್ಟಿ ಪಿಕ್ಚರ್’ ಚಿತ್ರ ಸಿಲ್ಕ್​ ಸ್ಮಿತಾ ಅವರ ಬಯೋಪಿಕ್ ಎಂದು ಹೇಳಲಾಗಿತ್ತು. ಆದರೆ ಚಿತ್ರದ ನಿರ್ದೇಶಕ ಮಿಲನ್ ಲುಥ್ರಿಯ ಇದು ಸ್ಮಿತಾ ಬಯೋಪಿಕ್ ಅಲ್ಲ, ಅವರ ಜೀವನದಿಂದ ಸ್ಪೂರ್ತಿ ಪಡೆದು ತಯಾರಿಸಲಾದ ಚಿತ್ರ ಎಂದು ಹೇಳಿದ್ದರು. ಈ ಚಿತ್ರಕ್ಕಾಗಿ ವಿದ್ಯಾ ಬಾಲನ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಕೂಡಾ ಲಭಿಸಿತ್ತು. ಇದೀಗ ತಮಿಳು ನಿರ್ದೇಶಕರೊಬ್ಬರು ಸಿಲ್ಕ್ ಸ್ಮಿತಾ ಬಯೋಪಿಕ್ ತಯಾರಿಸುತ್ತಿದ್ದಾರೆ ಎನ್ನಲಾಗಿದೆ. ‘ಅವಳ್​​ ಅಪ್ಪಡಿತಾನ್’ ಹೆಸರಿನ ಈ ಚಿತ್ರವನ್ನು ಕೆ.ಎಸ್. ಮಣಿಕಂಠನ್ ಎಂಬುವವರು ತಯಾರಿಸುತ್ತಿದ್ದಾರೆ.

Advertisement

Advertisement

ಗಾಯತ್ರಿ ಫಿಲ್ಮ್ಸ್​​​​​ ಬ್ಯಾನರ್, ಮುರಳಿ ಸಿನಿ ಆರ್ಟ್ಸ್ ಬ್ಯಾನರ್​​​ ಅಡಿಯಲ್ಲಿ ಲಕ್ಷ್ಮಣನ್ ಹಾಗೂ ಮುರಳಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿಲ್ಕ್ ಸ್ಮಿತಾ ಕೆಲವೊಂದು ಹಿಂದಿ ಸಿನಿಮಾಗಳು ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವುದರಿಂದ ಕನ್ನಡ, ತೆಲುಗು ,ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವನ್ನು ತಯಾರಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ನವೆಂಬರ್​ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಚಿತ್ರತಂಡ ಸಿಲ್ಕ್​ಸ್ಮಿತಾ ಪಾತ್ರಕ್ಕೆ ಸರಿಹೊಂದುವ ನಾಯಕಿಯ ಹುಟುಕಾಟದಲ್ಲಿದೆ. ನಾಯಕಿ ಹಾಗೂ ಇತರ ಪಾತ್ರಗಳ ವಿವರವನ್ನು ಚಿತ್ರತಂಡ ಶೀಘ್ರವೇ ತಿಳಿಸಲಿದೆ.

Advertisement

ವಿಜಯಲಕ್ಷ್ಮಿ ವಡ್ಲಪಟ್ಲ ಜನಿಸಿದ್ದು 2 ಡಿಸೆಂಬರ್ 1960. ಆಂಧ್ರಪ್ರದೇಶದ ಎಲ್ಲೂರಿನ ಪುಟ್ಟ ಗ್ರಾಮದಲ್ಲಿ ಜನಿಸಿದ ವಿಜಯಲಕ್ಷ್ಮಿ ನಾಲ್ಕನೇ ವಯಸ್ಸಿಗೆ ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ನಿಲ್ಲಿಸಬೇಕಾಯ್ತು. ವಿಜಯಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದರು. ಬಹುಶ: ಆಕೆಗೆ ಅದೇ ಮುಳುವಾಯ್ತೇನೋ. ಮನೆಯವರೆಲ್ಲಾ ಸೇರಿ ಬಹಳ ಚಿಕ್ಕ ವಯಸ್ಸಿಗೆ ವಿಜಯಲಕ್ಷ್ಮಿಗೆ ಮದುವೆ ಮಾಡಿದರು. ಆದರೆ ಆಕೆಯ ವೈವಾಹಿಕ ಜೀವನ ಕೂಡಾ ಸಂತೋಷವಾಗಿರಲಿಲ್ಲ. ಆಕೆ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದ್ದರು. ಹಿಂಸೆ ಹೆಚ್ಚಾದಾಗ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಓಡಿ ಚೆನ್ನೈ ಸೇರಿದರು.

Advertisement

ಚೆನ್ನೈನಲ್ಲಿ ಟಚ್​​​​ ಅಪ್​ ಆರ್ಟಿಸ್ಟ್ ಆಗಿ ಕೆಲಸಕ್ಕೆ ಸೇರಿದ ವಿಜಯಲಕ್ಷ್ಮಿಗೆ ಸಣ್ಣ ಪುಟ್ಟ ಪಾತ್ರಗಳು ದೊರೆಯಲಾರಂಭಿಸಿತು. ವಿನು ಚಕ್ರವರ್ತಿ ಎಂಬ ನಿರ್ದೇಶಕರು ವಿಜಯಲಕ್ಷ್ಮಿ ಹೆಸರನ್ನು ಸ್ಮಿತಾ ಎಂದು ಬದಲಿಸಿದರು. ಡ್ಯಾನ್ಸ್ ಕಲಿತ ಸ್ಮಿತಾಗೆ ‘ವಂದಿಚಕ್ರಂ’ ಎಂಬ ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ಆ ಚಿತ್ರದಲ್ಲಿ ಸ್ಮಿತಾ ಹೆಸರು ಸಿಲ್ಕ್ ಆಗಿದ್ದರಿಂದ ಮುಂದೆ ಅದೇ ಹೆಸರಲ್ಲಿ ಅವರು ಫೇಮಸ್ ಆದರು. 1983 ರಲ್ಲಿ ‘ಗೆದ್ದ ಮಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಸಿಲ್ಕ್ ಸ್ಮಿತಾ ಕರ್ನಾಟಕದಲ್ಲಿ ಕೂಡಾ ಒಳ್ಳೆ ಹೆಸರು ಗಳಿಸಿದರು.

 

ಎಷ್ಟೇ ಹಣ, ಹೆಸರು ಗಳಿಸಿದರೂ ಸಿಲ್ಕ್ ಸ್ಮಿತಾ ನೆಮ್ಮದಿಯಾಗಿರಲಿಲ್ಲ. 23 ಸೆಪ್ಟೆಂಬರ್ 1996 ರಂದು ಬೆಳಗ್ಗೆ ಸಿಲ್ಕ್​ ಸ್ಮಿತಾ ತಮ್ಮ ಸ್ನೇಹಿತೆ, ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ಡ್ಯಾನ್ಸರ್ ಅನುರಾಧ ಅವರನ್ನು ಭೇಟಿ ಮಾಡಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ನಿನ್ನೊಂದಿಗೆ ಮಾತನಾಡಬೇಕು ಎಂದು ಕೇಳಿದ್ದರಂತೆ. ಮಗಳನ್ನು ಸ್ಕೂಲ್​ಗೆ ಡ್ರಾಪ್ ಮಾಡಿ ನಿನ್ನನ್ನು ಭೇಟಿಯಾಗುತ್ತೇನೆ ಎಂದು ಅನುರಾಧ ಹೇಳಿದ್ದಾರೆ. ಅವರು ಹೇಳಿದಂತೆ ಮಗಳನ್ನು ಸ್ಕೂಲ್​​ಗೆ ಡ್ರಾಪ್ ಮಾಡಿ ಸಿಲ್ಕ್​ ಸ್ಮಿತಾ ಮನೆಗೆ ಹೋಗಿ ನೋಡುವಷ್ಟರಲ್ಲಿ ಅವರು ಆಗಲೇ ಪ್ರಾ’ಣ ಕಳೆ’ದುಕೊಂಡಿದ್ದರು. ಆಕೆಗೆ ಅದ್ಯಾವ ನೋವು ಕಾಡುತ್ತಿತ್ತೋ ಯಾರಿಗೂ ಗೊತ್ತಿಲ್ಲ. ಆಕೆ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಎಕ್ಸ್​​ಪೋಸ್​​​ನಿಂದ ಹೆಸರಾಗಿದ್ದರೂ ವೈಯಕ್ತಿಕವಾಗಿ ಆಕೆ ಬಹಳ ಮಿತ ಭಾಷಿ. ಅನಾವಶ್ಯಕವಾಗಿ ಆಕೆ ಯಾರಿಗೂ ನೋಯಿಸಿದವರಲ್ಲ. ಶೂಟಿಂಗ್​​ಗೆ ಒಂದು ದಿನ ಕೂಡಾ ತಡ ಮಾಡಿದವರಲ್ಲ. ಆಕೆಯ ಮೇಕಪನ್ನು ಆಕೆಯೇ ಮಾಡಿಕೊಳ್ಳುತ್ತಿದ್ದರು ಎಂದು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...