ಈ ರಾಶಿಯವರು ಸಿಂಹ ದ್ವಾರ ಇಟ್ಟುಕೊಂಡರೆ ಅತ್ಯುತ್ತಮ ಬಲ

in ಜ್ಯೋತಿಷ್ಯ 3,392 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ದಶಮಿ ತಿಥಿ,  ಆಶ್ಲೇಷ ನಕ್ಷತ್ರ,  ಸಾಧ್ಯ ಯೋಗ,  ವಿಷ್ಕುಂಬಾ  ಕರಣ ಅಕ್ಟೋಬರ್12  ಸೋಮವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ  ಉಲ್ಲೇಖ ಮಾಡಿಲ್ಲ.

Advertisement

ದ್ವಾರಗಳಲ್ಲಿ ಅತಿ ಶ್ರೇಷ್ಠವಾದ ದ್ವಾರ ಸಿಂಹ ದ್ವಾರ.  ಆದ್ದರಿಂದ ಸಿಂಹ ದ್ವಾರಕ್ಕೆ ಹೆಚ್ಚು ಪ್ರಾಶಸ್ತ್ಯ  ನೀಡುತ್ತಾರೆ. ಈ ದ್ವಾರದಲ್ಲಿ ಎಲ್ಲರೂ ಇರಲು ಆಗುವುದಿಲ್ಲ. ಕುಜನ ಭಾವಕ್ಕೆ ಸಿಂಹ ದ್ವಾರ ಎಂದು ಕರೆಯಲಾಗುತ್ತದೆ. ಸಾಮಾನ್ಯರು ಸಿಂಹ ದ್ವಾರವನ್ನು ಇಟ್ಟರೆ ಅಲ್ಲಿ ಅನೇಕ ರೀತಿಯ ಸಮಸ್ಯೆಗಳುಂಟಾಗುತ್ತವೆ. ನಿಮ್ಮ ಜಾತಕದಲ್ಲಿ ಕುಜ ಉಚ್ಚನಾಗಿದ್ದು ಸಿಂಹ ಲಗ್ನವಾಗಿದ್ದರೆ , ನಿಮ್ಮ ಜಾತಕದಲ್ಲಿ ಕನ್ಯಾ ಲಗ್ನ ಕುಜ ಉಚ್ಚಂಗತನಾಗಿದ್ದರೆ,  ಮೇಷ ರಾಶಿ ಇಲ್ಲವೇ ಮೇಷ ಲಗ್ನವಾಗಿದ್ದು ಕುಜ ಉಚ್ಚಂಗತನಾಗಿದ್ದರೆ,  ವೃಷಭ ರಾಶಿ ವೃಷಭ ಲಗ್ನವಾಗಿದ್ದು ಕುಜ ಅಲ್ಲಿ ಉಚ್ಚನಾಗಿದ್ದರೆ, ಅತಿ ಮುಖ್ಯವಾಗಿ ಕಟಕ ರಾಶಿ ಕಟಕ ಲಗ್ನದಲ್ಲಿ ಕುಜ ಉಚ್ಚನಾಗಿದ್ದರೆ, ಮೀನ ರಾಶಿ ಮೀನ ಲಗ್ನದಲ್ಲಿ ಕುಜ ಉಚ್ಚನಾಗಿದ್ದರೆ, ಮಾತ್ರ ನೀವು ಸಿಂಹ ದ್ವಾರವನ್ನು ಇಟ್ಟುಕೊಳ್ಳಬಹುದು. ಆಗ ಅತ್ಯುತ್ತಮವಾದ ಬಲ ಬರುತ್ತದೆ ನಿಮ್ಮನ್ನು ಸೊಲಿಸುವವರು ಯಾರೂ ಇರುವುದಿಲ್ಲ.

Advertisement

 

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಚೆನ್ನಾಗಿದೆ ಅಡ್ಡದಾರಿಯಲ್ಲಿ ಹಣ ಸಂಪಾದಿಸಲು ಪ್ರಚೋದನೆಯಾಗುತ್ತದೆ, ಸಣ್ಣ ಸಣ್ಣ ವಿಚಾರಗಳಿಗೆ ಆತಂಕ ಕಟ್ಟಿಕೊಳ್ಳುತ್ತೀರಿ. ಒಂದು ಬೊಗಸೆಯಷ್ಟು ಹಸಿರು ಕಾಳನ್ನು  ಬಾಲಾಜಿ ದೇವಸ್ಥಾನಕ್ಕೆ ಹೋಗಿ ಅರ್ಚನೆಯನ್ನು ಮಾಡಿಸಿ ಅದರಿಂದ ಪಾಯಸವನ್ನು ಮಾಡಿ ಚಿಕ್ಕ ಹೆಣ್ಣು ಮಕ್ಕಳಿಗೆ ಅದನ್ನು ಹಂಚಿ ಒಳ್ಳೆಯದಾಗುತ್ತದೆ.

ವೃಷಭ ರಾಶಿ : ಬುದ್ಧಿ ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ,  ಶತ್ರು ನಿರ್ನಾಮವಾಗುತ್ತದೆ.

ಮಿಥುನ ರಾಶಿ : ಸಣ್ಣಪುಟ್ಟ ಲೇವಾದೇವಿ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ವಿಶೇಷವಾದ ಪ್ರಗತಿ.

ಕರ್ಕಾಟಕ ರಾಶಿ : ಸಣ್ಣ ಸಣ್ಣ ವಿಚಾರಗಳಿಗೆ ಗಾಬರಿ ಪಡುತ್ತೀರಾ. ಆತ್ಮೀಯ ಸ್ನೇಹಿತರ ಸಲಹೆ ಪಡೆದುಕೊಳ್ಳಿ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಸಣ್ಣ ಸಣ್ಣ ವಿಚಾರಗಳಿಗೆ ಖರ್ಚು ಮಾಡಲು ಲೆಕ್ಕಾಚಾರ ಹಾಕುತ್ತೀರಿ.  ಅವಶ್ಯಕತೆ ಇದ್ದರೆ ಖರ್ಚು ಮಾಡಲು ಲೆಕ್ಕಾಚಾರ ಹಾಕಬೇಡಿ.

ಕನ್ಯಾ ರಾಶಿ :  ಕನ್ಯಾ ರಾಶಿ :  ಹಣವನ್ನು  ಸೇರಿಸಿಟ್ಟು ಕೊಳ್ಳಲು ಹೋಗಬೇಡಿ. ಒಳ್ಳೆಯ ಕಾರ್ಯಕ್ಕೆ  ಸದುಪಯೋಗ ಮಾಡಿ ಕೊಳ್ಳಿ.

ತುಲಾ ರಾಶಿ : ಕಸ್ಟಮರ್ ಸರ್ವಿಸ್,  ಅಡ್ವೈಸರ್,  ಕನ್ಸಲ್ಟೆಂಟ್, ಇಂತಹ ವ್ಯವಹಾರಗಳಲ್ಲಿರುವವರಿಗೆ ಅದ್ಭುತವಾದಂತಹ ದಿನ

ವೃಶ್ಚಿಕ ರಾಶಿ : ತುಂಬಾ ದಿನದ ನಂತರ ಬುದ್ಧಿ ಓಡುತ್ತಿದೆ, ಲೆಕ್ಕಾಚಾರ ಮಾಡಿ ವ್ಯವಹಾರವನ್ನು ಮಾಡುತ್ತೀರಿ.

ಧನಸ್ಸು ರಾಶಿ : ನಿಮ್ಮ ಬುದ್ಧಿ ಮಾತು ಬೇರೆಯವರಿಗೆ ಉಪಯೋಗಕರ,  ನಿಮಗೆ ಅಷ್ಟಕ್ಕಷ್ಟೇ,  ಆದರೆ ನಷ್ಟವಂತೂ ಆಗುವುದಿಲ್ಲ.

ಮಕರ ರಾಶಿ : ತುಂಬಾ ಲೆಕ್ಕಾಚಾರ ಮಾಡಲು ಹೋಗಿ ಅಡ್ಡದಾರಿಯಲ್ಲಿ ಸಂಪಾದನೆ ಮಾಡಲು ಹೋಗಿ ತುಂಬಾ ದೊಡ್ಡ ಪೆಟ್ಟು ತಿನ್ನುತ್ತೀರ ಎಚ್ಚರಿಕೆ.

ಕುಂಭ ರಾಶಿ : ಚಂದ್ರ ಪ್ರಭಾವ ಚೆನ್ನಾಗಿದೆ ತುಂಬಾ ಲೆಕ್ಕಾಚಾರವನ್ನು ನಿಮ್ಮ ತಲೆಗೆ ತುಂಬಿಸುತ್ತಾರೆ. ಬೇರೆಯವರ ಸಲಹೆಯನ್ನು ತೆಗೆದುಕೊಳ್ಳದೇ ನಿಮಗೆ ಅನ್ನಿಸುತ್ತದೋ ಅದರಂತೆಯೇ ನಡೆದುಕೊಳ್ಳಿ.

ಮೀನ ರಾಶಿ : ಚೆನ್ನಾಗಿದೆ ತುಂಬಾ ದಿನದಿಂದ ತಟಸ್ಥರಾಗಿದ್ದೀರ, ಮೀನ ರಾಶಿ ಎಂದರೆ ಕೊಡುವುದು ಕುಜ ಚಂದ್ರ ರಾಹು ಇರುವುದರಿಂದ ತಾಯಿಯ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಅಪ್ಪ ಅಮ್ಮನ ಜೊತೆ ಚೆನ್ನಾಗಿ ಅಪವಾದ ಅಪರಾಧವನ್ನು ತಂದಿಟ್ಟು ಕೊಳ್ಳಬೇಡಿ ಎಚ್ಚರಿಕೆ.

All Rights reserved Namma  Kannada Entertainment.

Advertisement
Share this on...