ಸಿಂಹಾದ್ರಿಯ ಸಿಂಹ ಇದು ಬದಲಾಗಿದ್ದು ಹೇಗೆ ? ಓದಿ ಈ ಸ್ವಾರಸ್ಯಕರ ಸುದ್ದಿ…!

in ಸಿನಿಮಾ 539 views

2002ರಲ್ಲಿ ತೆರೆ ಕಂಡಿದ್ದ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅಭಿನಯದ ‘ಸಿಂಹಾದ್ರಿಯ ಸಿಂಹ’ ಚಿತ್ರವನ್ನು ಕನ್ನಡಿಗರು ಮರೆಯಲು ಸಾಧ್ಯವೇ? ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಕಂಡಿತ್ತು. ಇನ್ನು ಈ ಸಿನಿಮಾ ತಮಿಳಿನ ‘ನಟ್ಟಮೈ’ ಸಿನಿಮಾದ ರೀಮೇಕ್ ಆಗಿದ್ದರು, ಕನ್ನಡದ ನೇಟಿವಿಟಿಗೆ ತಕ್ಕಂತೆ ಮಾಡಿದ್ದರು ಕಲಾಸಾಮ್ರಾಟ್ ಎಸ್ ನಾರಾಯಣ್ ಅವರು. ಸಾಹಸ ಸಿಂಹ ವಿಷ್ಣುವರ್ಧನ್ ಅವರು ತ್ರಿಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಇನ್ನು ಕನ್ನಡಿಗರ ಕಣ್ಮಣಿ ಡಾ ರಾಜ್ ಅವರು 1992ರಲ್ಲಿಯೇ ಸಿನಿಮಾ ಮಾಡಬೇಕಿತ್ತು. ಆದರೆ ಇದು ವಿಷ್ಣು ಅಭಿನಯಿಸಿದ ಸಿಂಹಾದ್ರಿಯ ಸಿಂಹ ದ ಅದೇ ಕಥೆಯಲ್ಲ. ರಾಜ್ ಹಾಗೂ ಮಾಧವಿ ಅವರು ನಟಿಸಿ, ದೊರೆ-ಭಗವಾನ್ ಅವರು ನಿರ್ದೇಶಸಿದ್ದ ‘ಜೀವನ ಚೈತ್ರ’ ಸಿನಿಮಾ. ಈ ಸಿನಿಮಾ ಕನ್ನಡ ಚಿತ್ರರಂಗ ಕಂಡ ಅಪೂರ್ವ ಸಿನಿಮಾಗಳಲ್ಲಿ ಒಂದು. ವಿಶೇಷ ಏನೆಂದರೆ ಈ ಸಿನಿಮಾಗೆ ಮೊದಲು ‘ಸಿಂಹಾದ್ರಿಯ ಸಿಂಹ’ ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಈ ವಿಚಾರ ಅದೇಷ್ಟೋ ಜನರಿಗೆ ತಿಳಿದಿಲ್ಲ. ಹಾಗದರೆ ಈ ಶೀರ್ಷಿಕೆ ಬದಲಿಸಿ ‘ಜೀವನ ಚೈತ್ರ’ ಎಂದು ಮರು ನಾಮಕರಣ ಮಾಡಿದ್ದು ಏಕೆ? ಈ ಹೆಸರು ನೀಡಿದವರು ಯಾರು? ಈ ಕುತೂಹಲಗಳನ್ನು ತಿಳಿದು ಕೊಳ್ಳಲು ಮುಂದೇ ಓದಿ..

Advertisement

Advertisement

ರಾಜ್ ಕುಮಾರ್ ಅಭಿನಯದ ಕನ್ನಡಿಗರ ನೆಚ್ಚಿನ ಸಿನಿಮಾ ‘ಜೀವನ ಚೈತ್ರ’ಕ್ಕೆ ಮೊದಲು ‘ಸಿಂಹಾದ್ರಿಯ ಸಿಂಹ’ ಎಂಬ ಶೀರ್ಷಿಕೆಯನ್ನು ಅಳವಡಿಸಲಾಗಿತ್ತು. ಅಲ್ಲದೇ ಈ ಶೀರ್ಷಿಕೆಯನ್ನೇ ಮೊದಲು ಪ್ರಚಾರ ಮಾಡಲಾಗಿತ್ತು. ಸಿಂಹಾದ್ರಿಯ ಹಿನ್ನೆಲೆಯಲ್ಲಿ ಕಥೆ ನಡೆಯುವುದರಿಂದ ಅದಕ್ಕೆ ಈ ಶೀರ್ಷಿಕೆ ಇರಿಸಲಾಗಿತ್ತು.ಆದರೆ ಅದೇಕೋ ಏನೋ ರಾಜ್ ಅವರ ಮನಸಿಗೆ ಈ ಶೀರ್ಷಿಕೆ ಅಷ್ಟು ಹಿಡಿಸಲಿಲ್ಲ. ಯಾಕೆಂದರೆ ಅವರು ಮೊದಲೆ 1981ರಲ್ಲಿ ‘ಕೆರಳಿದ ಸಿಂಹ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈಗಾಗಲೇ ಸಿಂಹ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾಗ ಮತ್ತೊಮ್ಮೆ ಪುನರಾವರ್ತನೆ ಬೇಡ ಎಂಬ ಅನಿಸಿಕೆ ವ್ಯಕ್ತವಾಗಿತ್ತು.ಇನ್ನು ಜೀವನ ಚೈತ್ರ ಸಿನಿಮಾ ಸಾಮಾಜಿಕ ಕಥೆಯನ್ನು ಹೊಂದಿತ್ತು. ‘ಸಿಂಹಾದ್ರಿಯ ಸಿಂಹ’ ಎಂಬ ಶೀರ್ಷಿಕೆ ಕೇಳಿದರೆ ಇದೊಂದು ಆಕ್ಷನ್ ಸಿನಿಮಾವಾಗುತ್ತದೆ ಎಂಬುದು ರಾಜ್ ಅವರ ಅಭಿಪ್ರಾಯಾವಾಗಿತ್ತು.

Advertisement

Advertisement

ಇನ್ನು ಅಭಿಮಾನಿಗಳು ಇದೊಂದು ಆಕ್ಷನ್ ಚಿತ್ರ ಅಂದುಕೊಂಡು ಚಿತ್ರಮಂದಿರಕ್ಕೆ ಬಂದರೆ ಅವರಿಗೆ ನಿರಾಸೆಯಾಗುತ್ತದೆ. ಶೀರ್ಷಿಕೆಯಲ್ಲಿಯೇ ಇದು ಸಾಮಾಜಿಕ ಕಥಾಹಂದರ ಹೊಂದಿರುವ ಚಿತ್ರ ಎಂಬ ಭಾವನೆ ಮೂಡಬೇಕು ಎಂದು ರಾಜ್ , ದೊರೆ ಭಗವಾನ್ ಅವರಿಗೆ ತಿಳಿಸಿದ್ದರು. ಕೊನೆಗೆ ಸಿನಿಮಾದ ಕಥೆ ಮತ್ತು ಎಲ್ಲರಿಗೂ ಇಷ್ಟವಾಗುವ ಹೆಸರಾದ ‘ಜೀವನ ಚೈತ್ರ’ ಶೀರ್ಷಿಕೆಯನ್ನು ಸೂಚಿಸಿದವರು ಚಿ. ಉದಯಶಂಕರ್ ಅವರು. ಆ ಶೀರ್ಷಿಕೆ ಪಾರ್ವತಮ್ಮ, ರಾಜ್ ಕುಮಾರ್ ಸೇರಿದಂತೆ ಎಲ್ಲರಿಗೂ ಒಪ್ಪಿತವಾಯಿತು.. ಹೀಗೆ ಸಿಂಹಾದ್ರಿಯ ಸಿಂಹ ಆಗಿದ್ದ ದೊರೆ ಅವರ ಸಿನಿಮಾ ಜೀವನ ಚೈತ್ರ ವಾಗಿಬಿಟ್ಟಿತು.

Advertisement
Share this on...