ಶಿವಣ್ಣನ ಜೊತೆ ನಟಿಸಿದ್ದ ಸಿಮ್ರಾನ್​ ಆ್ಯಕ್ಟಿಂಗ್​ನಿಂದ ದೂರ ಉಳಿದು ಏನು ಮಾಡ್ತಿದ್ದಾರೆ….?

in ಸಿನಿಮಾ 49 views

ಸುಮಾರು 15-20 ವರ್ಷಗಳ ಹಿಂದೆ ಭಾರೀ ಬೇಡಿಕೆಯಲ್ಲಿದ್ದ ಸಾಕಷ್ಟು ನಟಿಯರು ಇಂದು ಮದುವೆಯಾಗಿ ಪತಿ, ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೆಲವು ನಟಿಯರು ಅಂದಿನಿಂದ ಇಂದಿನವರೆಗೂ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಮತ್ತೆ ಕೆಲವು ನಟಿಯರು ಅಲ್ಲೋ ಇಲ್ಲೋ ಎಂಬಂತೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ಕೆಲವರು ಜನರು ತಮ್ಮನ್ನು ಮರೆಯಬಾರದು ಎಂಬ ಕಾರಣಕ್ಕೆ ಟಿಕ್​​ಟಾಕ್​​​ನಲ್ಲಿ ಆ್ಯಕ್ಟಿವ್ ಇದ್ದಾರೆ.

Advertisement

 

Advertisement

Advertisement

 

Advertisement

 

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಈಗ ಹೆಚ್ಚಿಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ತಮ್ಮ ಟಿಕ್​​ಟಾಕ್​​, ಯೋಗ ವಿಡಿಯೋಗಳ ಮೂಲಕ ಜನರಿಗೆ ಇನ್ನೂ ಹತ್ತಿರವಾಗಿದ್ದಾರೆ. ಅದೇ ರೀತಿ ಕಾಲಿವುಡ್​ ಚಿತ್ರರಂಗದಲ್ಲಿ ಖ್ಯಾತಿ ಪಡೆದು ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲೂ ನಟಿಸಿರುವ ಚೆಂದದ ನಟಿ ಸಿಮ್ರಾನ್​​​​ ಕೂಡಾ ಇದೀಗ ಅಷ್ಟೇನೂ ಆ್ಯಕ್ಟಿಂಗ್ ಕಡೆ ಆಸಕ್ತಿ ತೋರದಿದ್ದರೂ ಟಿಕ್​​ಟಾಕ್​​​​​​ನಲ್ಲಿ ಆ್ಯಕ್ಟಿವ್ ಇದ್ದಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಟಿಕ್​​ಟಾಕ್​ ಮೂಲಕ ಸಿಮ್ರಾನ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ತಮ್ಮ ಟಿಕ್​​​​ಟಾಕ್​ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಸಿಮ್ರಾನ್​.

 

ಸಿಮ್ರಾನ್ ಮೂಲತ: ಪಂಜಾಬಿ ಕುಟುಂಬಕ್ಕೆ ಸೇರಿದವರು. ಅವರ ಮೂಲಕ ಹೆಸರು ರಿಷಿಬಾಲಾ ನವಲ್, ತಂದೆ ಅಶೋಕ್ ನವಲ್ ಹಾಗೂ ತಾಯಿ ಶಾರದಾ. ಪಂಜಾಬಿ, ಹಿಂದಿ, ಇಂಗ್ಲೀಷ್, ತಮಿಳು, ತೆಲುಗು ಭಾಷೆಗಳನ್ನು ಸರಾಗವಾಗಿ ಮಾತನಾಡುವ ಸಿಮ್ರಾನ್​ ಭರತನಾಟ್ಯಂ ಹಾಗೂ ಸಾಲ್ಸಾ ನೃತ್ಯ ಕಲಾವಿದೆ. ಶಿವರಾಜ್​ಕುಮಾರ್ ಅಭಿನಯದ ‘ಸಿಂಹದ ಮರಿ ಸೈನ್ಯ’ ಚಿತ್ರದಲ್ಲಿ ಸಿಮ್ರಾನ್ ಅಭಿನಯಿಸಿದ್ಧಾರೆ. ಈ ಚಿತ್ರದ ‘ನನ್ನ ಕಣ್ಣು ನಿನ್ನ ಕಣ್ಣು’ ಹಾಡು ಯುವಜನತೆಗಂತೂ ಮೋಸ್ಟ್ ಫೇವರೆಟ್​​. ‘ಅಲೋನ್’ ಚಿತ್ರದಲ್ಲಿ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಸಿಮ್ರಾನ್​​​.

 

ತಮ್ಮ ಕುಟುಂಬಕ್ಕೆ ಬಹಳ ಹತ್ತಿರವಿದ್ದ ದೀಪಕ್ ಎಂಬುವರ ಕೈ ಹಿಡಿದ ಸಿಮ್ರಾನ್​​ಗೆ ಈಗ ಅದೀಪ್​ ಹಾಗು ಅದಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ಧಾರೆ. ಇತ್ತೀಚೆಗೆ ಬಿಡುಗಡೆಯಾದ ‘ಪೆಟ್ಟಾ’ ಚಿತ್ರದಲ್ಲಿ ಸಿಮ್ರಾನ್ ರಜನೀಕಾಂತ್ ಜೊತೆ ನಟಿಸಿದ್ಧಾರೆ. ಕುಟುಂಬದ ಕಡೆಗೆ ಹೆಚ್ಚು ಗಮನ ನೀಡುತ್ತಿರುವ ಸಿಮ್ರಾನ್​ ಅಪರೂಪಕ್ಕೆ ಎಂಬಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ವಯಸ್ಸಿಗೆ ತಕ್ಕಂತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸಿಮ್ರಾನ್, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರ ಬಯೋಪಿಕ್ ‘ರಾಕೆಟರಿ’ ಎಂಬ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ.

Advertisement
Share this on...