ಅಷ್ಟಕ್ಕೂ ಸಿಂಧೂ ಲೋಕನಾಥ್ ಈ ರೀತಿಯಾಗಿ ಹೇಳಿಕೆ ನೀಡಿರುವುದು ಯಾಕೆ ?

in ಮನರಂಜನೆ/ಸಿನಿಮಾ 130 views

ಬಾಲಿವುಡ್ ಚಿತ್ರರಂಗದ ಉದಯೋನ್ಮುಕ ನಟ  ವಿಧಿವಶರಾದ ಹಿನ್ನಲೆ ಹಲವು ನಟ-ನಟಿಯರು ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಹಲವರು ತಮ್ಮ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ನಟಿ ಸಿಂಧು ಲೋಕನಾಥ್ ಅವರು ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದು, ನಾನು ‘ಸಿನಿಮಾದಲ್ಲಷ್ಟೆ ನಟಿ, ನಾನೂ ಸಹ ಮನುಷ್ಯಳೇ’ ಎಂದು ಹೇಳಿದ್ದಾರೆ. ‘ನಾನು ತೆರೆಯ ಮೇಲಷ್ಟೆ ನಟಿ, ನಾನು ಮಾಡುವುದೆಲ್ಲವೂ ನಟನೆ ಅಲ್ಲ, ನಾನೂ ಸಹ ಎಲ್ಲರಂತೆ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಸುಳ್ಳು ಭಾವುಕತೆ ಪ್ರದರ್ಶಿಸಲಾಗದು.ನನಗೂ ಭಯವಾಗುತ್ತದೆ, ನಾನೂ ಕಷ್ಟಪಡುತ್ತೇನೆ, ನಾನೂ ನಗುತ್ತೇನೆ, ಅಳುತ್ತೇನೆ, ನನಗೆ ನೋವಾಗುತ್ತದೆ, ಆಗಾಗ್ಗೆ ಸಂತೋಷವೂ ಆಗುತ್ತದೆ, ಇವೆಲ್ಲವನ್ನೂ ನಿಮ್ಮಂತೆಯೇ ನನಗೂ ಆಗುತ್ತದೆ, ಇವೆಲ್ಲವನ್ನೂ ನಾನೂ ಅನುಭವಿಸುತ್ತೇನೆ.

Advertisement

Advertisement

ಸಿನಿಮಾ ನಟಿ ಆಗಿರುವುದರಿಂದ ನಾನು ಸಾಮಾನ್ಯಳಲ್ಲವೆಂದು ನಿಮಗೆ ಅನ್ನಿಸಬಹುದು, ಆದರೆ ಆಳದಲ್ಲಿ ನಾನು ಸಾಮಾನ್ಯಳು, ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಂತೆ ನಾನೂ ಸಹ ಒಬ್ಬ ಸಾಮಾನ್ಯ ಮನುಷ್ಯಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಇದ್ದಕ್ಕಿದ್ದಂತೆ ಹೀಗೆ ಏಕೆ ಮಾತನಾಡುತ್ತಿದ್ದಾರೆ ಸಿಂಧೂ ಎಂಬ ಅನುಮಾನ ಅವರ ಪೋಸ್ಟ್‌ ನೋಡಿದವರಿಗೆ ಬರುತ್ತಿದೆ.ಆದರೆ ಯಾರನ್ನು ಉದ್ದೇಶಿಸಿ ಸಿಂಧೂ ಹೀಗೊಂದು ಪೋಸ್ಟ್ ಹಾಕಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಇನ್ನೂ 2017 ರಲ್ಲಿ ಸಿಂಧು ಲೋಕನಾಥ್‌ ಮಂಗಳೂರು ಮೂಲದ ಶ್ರೇಯಸ್ ಕೋಡಿಯಾಲ್ ಎಂಬುವರನ್ನು ವಿವಾಹವಾಗಿದ್ದರು.

Advertisement

 

Advertisement

ಆದರೆ ಕಳೆದ ವರ್ಷ ಇವರಿಬ್ಬರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತು ಎನ್ನಲಾಗಿದ್ದು, ಸಿಂಧೂ ಗಂಡನಿಂದ ಪ್ರತ್ಯೇಕವಾಗಿ, ಒಂಟಿಯಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement
Share this on...