ಕನ್ನಡಿಗರ ನೆಚ್ಚಿನ ಸಿಂಧೂ ಮೆನನ್ ಏನು ಮಾಡುತ್ತಿದ್ದಾರೆ ಗೊತ್ತಾ?

in ಕನ್ನಡ ಮಾಹಿತಿ 199 views

ಬಹು ಭಾಷಾ ನಟಿಯಾಗಿ ಸಾಕಷ್ಟು ಹೆಸರು ಮಾಡಿದವರು ಸಿಂಧೂ ಮೆನನ್. ಕನ್ನಡತಿಯೇ ಆಗಿದ್ದರೂ, ಹೆಚ್ಚು ನಟಿಸಿದ್ದು ಮಾತ್ರ ಮಲಯಾಳಂ , ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಸಾಲು ಸಾಲು ಸಿನಿಮಾಗಳನ್ನು ಮಾಡಿ ಅಪಾರ ಜನಮನ್ನಣೆ ಪಡೆದುಕೊಂಡಿದ್ದ ನಟಿ ಸಿಂಧೂ ಮನೆನ್ , ಕಳೆದ ಕೆಲವು ವರುಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆಶ್ಚರ್ಯ ಪಡುವ ಸಂಗತಿ ಏನೆಂದರೆ ಅವರು ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹೆಚ್ಚಾಗಿ ಸಕ್ರಿಯರಾಗಿಲ್ಲ. ವಿಶೇಷವೇನೆಂದರೆ ಅವರು ಸಾಮಾಜಿಕ ಜಾಲತಾಣ ಹಾಗೂ ಚಿತ್ರರಂಗದಿಂದ ದೂರ ಉಳಿದಿದ್ದರು ಅವರ ಅಭಿಮಾನಿಗಳು ಮಾತ್ರ ಜನ್ಮ ದಿನದಂದು ಶುಭಾಶಯ ಕೋರುವುದನ್ನು ಮಾತ್ರ ನಿಲ್ಲಿಸಿಲ್ಲ.ನಟಿ ಸಿಂಧು ಮೆನನ್ ಅವರು ಮೂಲ ಮಲೆಯಾಳಿ ಕುಟುಂಬಕ್ಕೆ ಸೇರಿದವರು. ರಶ್ಮಿ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. . ಇನ್ನು ಚಂದನವನದಲ್ಲಿ , ಸಾಹಸಸಿಂಹ ಡಾಾ ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರಂತಹ ಸ್ಟಾರ್ ನಟರ ಜೊತೆ ನಟಿಸಿ, ಅಪಾರ ಕೀರ್ತಿಯನ್ನು ಗಳಿಸಿದ್ದಾರೆ.

Advertisement

Advertisement

ತೆಲುಗು, ತಮಿಳು ಮತ್ತು ಮಲೆಯಾಳಂ ನಲ್ಲೂ ಕೂಡಾ ಸ್ಟಾರ್ ನಟರ ಜೊತೆ ನಟಿಸಿ ತನ್ನದೇ ಆದ ಛಾಪು ಮೂಡಿಸಿರುವ ಇವರ ಸಿನಿಮಾಗಳು ಸಾಕಷ್ಟು ಯಶಸ್ಸನ್ನು ಕೂಡ ಪಡೆದಿದ್ದವು. ಭರತ ನಾಟ್ಯಂ ಕಲಾವಿದೆಯಾಗಿದ್ದ ಸಿಂಧು ಮೆನನ್ ಅವರನ್ನು  ಭರತ ನಾಟ್ಯ  ಸ್ಪರ್ಧೆಯಲ್ಲಿ ನೋಡಿದ ಭಾಸ್ಕರ್ ಹೆಗ್ಗಡೆ ಅವರು ನಿರ್ದೇಶಕ ಕೆ.ವಿ‌. ಜಯರಾಮ್ ಅವರಿಗೆ ಪರಿಚಯಿಸುತ್ತಾರೆ.ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾವೇ ರಶ್ಮಿ. ಈ ಮೂಲಕ ಸಿಂಧು ಮೆನನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇನ್ನು ತದನಂತರ ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಇವರು ಹುಲಿಯಾ, ಜೇಷ್ಠ, ಪ್ರೇಮ ಪ್ರೇಮ ಪ್ರೇಮ, ಖುಷಿ, ವಿಕ್ರಂ ನಂತಹ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದುಕೊಳ್ಳುತ್ತಾರೆ.

Advertisement

 

Advertisement

ಭದ್ರಾಚಲಂ, ಶ್ರೀರಾಮಚಂದ್ರುಲು, ತ್ರಿನೇತ್ರಂ, ಇನ್ಸ್ಪೆಕ್ಟರ್ ನಂತಹ ತೆಲುಗು ಸಿನಿಮಾಗಳು ಚಿತ್ರರಂಗದಲ್ಲಿ ಬೇರೂರಲು ಸುಗಮ ದಾರಿ ಮಾಡಿಕೊತ್ತವೆ. ನಂತರ ಸಮುತ್ತರಂ, ಕಾದಲ್ ಪೂಕ್ಕಳ್, ಯೂತ್ ನಂತಹ ತಮಿಳು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಅನೇಕ ಮಲೆಯಾಳಂ ಸಿನಿಮಾಗಳಲ್ಲಿ ಸಿಂಧೂ ಮೆನನ್ ನಿರತರಾಗುತ್ತಾರೆ. ಆದರೆ ಇದೀಗ ಸಿಂಧೂ ಅವರು ಸಿನಿಮಾ ರಂಗದಲ್ಲಿ ಇಲ್ಲ, ಹಾಗಾದರೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಮೂಡುತ್ತಿರುವ ಯಕ್ಷ ಪ್ರಶ್ನೆ..

ಸಿಂಧು ಅವರು 2010 ರಲ್ಲಿ ಡೊಮೆನಿಕ್ ಪ್ರಭು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ದಂಪತಿಗಳಿಗೆ ಎರಡು ಮಕ್ಕಳಿವೆ. ಇನ್ನು ಸಿಂಧೂ ಅವರು ಸಂಸಾರದ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಆದರೆ ಕೆಲವರು ಇವರು ಇಂಗ್ಲೆಂಡ್ ನಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಇಷ್ಟು ಮಾತ್ರಲ್ಲದೇ ಸಿಂಧು ಮನೆನ್ ಅವರ ಸಹೋದರ ಬ್ಯಾಂಕ್ ವೊಂದಕ್ಕೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ ಮತ್ತು ಅದರಲ್ಲಿ ಸಿಂಧು ಹಾಗೂ ಅವರ ಸೋದರಿ ಕೂಡಾ ಸೇರಿದ್ದಾರೆ ಎಂಬ ವಿವಾದ ಜೋರಾಗುಿ ಹರಿದಾಡುತ್ತಿತ್ತು. ಆದರೆ ಸಿಂಧು ಮೆನನ್ ವಿದೇಶದಲ್ಲಿ ಇರುವುದರಿಂದ ಬ್ಯಾಂಕ್ ವಂಚನೆ ಪ್ರಕರಣಕ್ಕೂ ಆಕೆಗೂ ಸಂಬಂಧವಿಲ್ಲ ಎಂದು ಮೂಲಗಳ ಪ್ರಕಾರ ಹೇಳಲಾಗುತ್ತದೆ.

ಹೀಗೆಲ್ಲಾ ನಡೆಯುತ್ತಿದ್ದರೂ ಕೂಡಾ ಸಿಂಧು ಮೆನನ್ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಅಷ್ಟೇನೂ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಆಕೆ ಚಿತ್ರರಂಗದಿಂದ ದೂರ ಉಳಿದು ಸುಮಾರು ಆರೇಳು ವರುಷ ಕಳೆದಿದ್ದರು ಅವರ ಅಭಿಮಾನಿಗಳ ಮನಸಲ್ಲಿ ಈಗಲೂ ಕೂಡ ಉಳಿದ್ದಾರೆ..

Advertisement
Share this on...