ನವರಾತ್ರಿಯ ಆರನೆಯ ದಿನ : ಜಗನ್ಮಾತೆಯ ಕಾತ್ಯಾಯಿನಿ ರೂಪ

in ಜ್ಯೋತಿಷ್ಯ 791 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು,  ಆಶ್ವಯುಜ ಮಾಸೆ,  ಶುಕ್ಲ ಪಕ್ಷದ ಷಷ್ಠಿ ತಿಥಿ, ಮೂಲಾ ನಕ್ಷತ್ರ,  ಅತಿಗಂಡ ಯೋಗ, ತೈತುಲ ಕರಣ, ಅಕ್ಟೋಬರ್ 22  ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ರಾತ್ರಿ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ .
ಇಂದು ವಿಶೇಷವಾಗಿ ಜಗನ್ಮಾತೆಯು ಕಾತ್ಯಾಯಿನಿ ರೂಪದಲ್ಲಿ ಅವತಾರವೆತ್ತಿದ ದಿನ. ಹುಟ್ಟು ಸಾವು ಮದುವೆ ಎಲ್ಲವೂ ಜಗನ್ಮಾತೆಯ ಕೈಯಲ್ಲಿದೆ. ನಾವು ಯಾವಾಗ ಎಲ್ಲಿ ಯಾರ ಹೊಟ್ಟೆಯಲ್ಲಿ ಹುಟ್ಟಬೇಕು, ಯಾರಿಗೆ ಯಾರು ತಂದೆ ತಾಯಿಗಳಾಗ  ಬೇಕು ಎಲ್ಲವೂ ಪೂರ್ವ ನಿರ್ಧರಿತ. ಅಪರೂಪದಲ್ಲಿ ಅಪರೂಪ ಮಾನವನ ಜನ್ಮ. ಎಂಬತ್ತ್ನಾಲ್ಕು  ಲಕ್ಷ  ಜೀವರಾಶಿಗಳಲ್ಲಿ ನಾವು ಮಾತ್ರ ಮಾತನಾಡುವ ಆಲೋಚಿಸುವ ಶಕ್ತಿಯನ್ನು ಹೊಂದಿರುವುದು. ಕಾತ್ಯಾಯನ ಮಹರ್ಷಿಗಳ ತಪಸ್ಸಿಗೆ ಮೆಚ್ಚಿ ಅವರ ಮಗಳಾಗಿ ಜಗನ್ಮಾತೆಯು ಹುಟ್ಟುತ್ತಾರೆ. ಕಾತ್ಯಾಯಿನಿಯು ಮನುಷ್ಯರ ಭಕ್ತಿಗೆ ಒಲಿಯುತ್ತಾಳೆ. ತಪ್ಪದೆ 6 ಜನ ಗುರುಸಮಾನರಾದ  ಪುರೋಹಿತರಿಗೆ  ಶಲ್ಯ, ನವಧಾನ್ಯಗಳನ್ನು  ದೇವಾಲಯದ ಬಡ ಅರ್ಚಕರಿಗೆ ಕೊಟ್ಟು ಪಾದಪೂಜೆ ಮಾಡಿ ಆಶೀರ್ವಾದ ಪಡೆಯಿರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

Advertisement

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

Advertisement

ಮೇಷ ರಾಶಿ : ಚೆನ್ನಾಗಿದೆ ಚಂದ್ರ ಮೂಲನಕ್ಷತ್ರದ ಪ್ರಭಾವದಲ್ಲಿದ್ದಾನೆ, ಲಕ್ಷ್ಮಿ ಕೂಡ ಮೂಲಾ ನಕ್ಷತ್ರವೇ. ಬುದ್ಧಿ, ಮೇದಸ್ಸು, ಜ್ಞಾನ, ಅಪರಿಮಿತ. ಅಕೌಂಟೆಂಟ್, ಚಾಟರ್ಡ್ ಅಕೌಂಟೆಂಟ್, ಬ್ಯಾಂಕಿಂಗ್ ಅಡ್ವೈಸರ್, ಫೈನಾನ್ಶಿಯಲ್  ಅಡ್ವೈಸರ್ , ಅದ್ಭುತವಾದ ದಿನ.

Advertisement

ವೃಷಭ ರಾಶಿ : ತಪ್ಪು ದಾರಿಗೆ ಹೋಗಿ ಸಿಕ್ಕಿಹಾಕಿಕೊಳ್ಳುತೀರ. ತಪ್ಪು ದಾರಿಯಲ್ಲಿ ದುಡ್ಡು ಮಾಡಲು, ತಪ್ಪಾದ ಚಿಂತನೆ, ಆಲೋಚನೆ ಬೇಡ.

ಮಿಥುನ ರಾಶಿ :  ಬುದ್ಧಿಗೆ ತಕ್ಕಂತೆ ಕೆಲಸ,  ಕೆಲಸಕ್ಕೆ ತಕ್ಕಂತೆ ಸಂಭಾವನೆ ದೊರೆಯುವಂತಹ ದಿನ ಚೆನ್ನಾಗಿದೆ.

ಕರ್ಕಾಟಕ ರಾಶಿ : ಪರಿಶ್ರಮ ಸ್ವಲ್ಪ ಜಾಸ್ತಿ ಆದರೆ ಗುರುವಿನ ಆಶೀರ್ವಾದದಿಂದ ಎಲ್ಲವನ್ನೂ ಪಡೆಯುತ್ತೀರ ಗಣಪತಿಯ ಸೇವೆಯನ್ನ ಮಾಡಿಕೊಳ್ಳಿ.

ಸಿಂಹ ರಾಶಿ : ತಟಸ್ಥ ಭಾವ, ಜ್ಞಾನ, ವೈರಾಗ್ಯ ,ಚಿಂತನ, ಅವು ಭಾವವಿರುತ್ತದೆ ಏನೂ ಆಗುವುದಿಲ್ಲ ಸನ್ಯಾಸಿಯಾದವನು ಸಂಸಾರಿಯಾಗಬಾರದು, ಸಂಸಾರಿಯಾದವನು ಸನ್ಯಾಸಿಯಾಗಬಾರದು.

ಕನ್ಯಾ ರಾಶಿ :  ಚೆನ್ನಾಗಿದೆ ಗುರು ಚಂದ್ರಯೋಗ  ಚೆನ್ನಾಗಿದ್ದರೂ , ಚಂದ್ರ ಕೇತು ಸಾರದಲ್ಲಿ ಇರುವುದರಿಂದ ಗುರು ಶಾಪ ನಿಮಗೆ. ಗಂಡ ಹೆಂಡತಿ ಮಕ್ಕಳು ಕುಟುಂಬದ ಜೊತೆ ಇರಲು ನಿಮಗೆ ಬಿಡುವುದಿಲ್ಲ. ನಿಮ್ಮಿಂದ 1ತಪ್ಪು ನಡೆದೆ ನಡೆಯುತ್ತದೆ ಆದ್ದರಿಂದ ನವರಾತ್ರಿಯ ಸಮಯದಲ್ಲಿ ರಾಘವೇಂದ್ರ ಸ್ವಾಮಿಗಳ ದೇವಾಲಯದಲ್ಲಿ  ಗುರು ಪೂಜೆ  ಮಾಡಿಕೊಳ್ಳಿ.

ತುಲಾ ರಾಶಿ : ಚೆನ್ನಾಗಿದೆ ಒಡಹುಟ್ಟಿದವರ ಜತೆ ಸ್ವಲ್ಪ ತೊಳಲಾಟ ಏನೂ ಆಗುವುದಿಲ್ಲ ಒಳ್ಳೆಯದಾಗುತ್ತದೆ. ನೀವೇ ಅವರ ಸಹಾಯಕ್ಕೆ ನಿಲ್ಲುತ್ತೀರಾ.

ವೃಶ್ಚಿಕ ರಾಶಿ : ಧರ್ಮಕಾರ್ಯ ದೈವಕಾರ್ಯ ಪೂಜಾ ಕಾರ್ಯವನ್ನು ನಿಷ್ಠೆಯಿಂದ ಮಾಡಿಕೊಳ್ಳಿ ನಿಮಗೂ ಗುರು ನೀಚನಾಗಿರುವುದರಿಂದ ರಾಘವೇಂದ್ರ ಸ್ವಾಮಿಯ ದೇವಾಲಯದಲ್ಲಿ ಗುರುಪೂಜೆಯನ್ನು ಮಾಡಿಕೊಳ್ಳಿ. ಮೃತ್ಯುಂಜಯನಿಗೆ ಮೃತ್ಯುಂಜಯ ದಕ್ಷಿಣಮೂರ್ತಿ, ದಕ್ಷಿಣಮೂರ್ತಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಕೊಳ್ಳಿ.

ಧನಸ್ಸು ರಾಶಿ :  ಆರೋಗ್ಯ ಸಮಸ್ಯೆಯಿಂದ ಬಳಲುತ್ತೀರ ಎಚ್ಚರಿಕೆ,  ನಿಮ್ಮ ಮನೆಗೆ ನೀವೇ ಶಾಪವಾಗಿ ಬಿಡುತ್ತೀರಾ, ನವರಾತ್ರಿಯ ದಿನ ಗುರುಸೇವೆ ಮಾಡಿ ಮತ್ತು ಅಮ್ಮನವರ ಪೂಜೆ ಮಾಡಿಕೊಳ್ಳಿ.

ಮಕರ ರಾಶಿ : ಚೆನ್ನಾಗಿದೆ ನೀವು ದುಡಿದ ದುಡ್ಡಿನಲ್ಲಿ 1 ಪಾಲು ಧರ್ಮ ಕಾರ್ಯಕ್ಕೆ ವಿನಿಯೋಗಿಸುವ ಅದ್ಭುತವಾದ ದಿನ.

ಕುಂಭ ರಾಶಿ :  ದೇವಿ ದರ್ಶನ, ದೇವಿ ಪೂಜೆ, ದೇವಿಯ ಆರಾಧನೆ , ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಎನ್ನುವ ಹಾಗೆ ಇಂದು ನಿಮ್ಮಿಂದ ಯಾರಿಗಾದರೂ ಮಾಂಗಲ್ಯದಾನ, ಗೋದಾನ, ಕನ್ಯಾದಾನ, ಏನಾದರೊಂದು ಪೂಜೆಯನ್ನು ಮಾಡುತ್ತೀರಾ.

ಮೀನ ರಾಶಿ : ಚೆನ್ನಾಗಿದೆ ಆದರೆ ಬುದ್ಧಿ ಜ್ಞಾನಕ್ಕೆ ಸ್ವಲ್ಪ ಹುಳಿ, ಭೀತಿ ಏನೂ ಆಗುವುದಿಲ್ಲ  ಜ್ಞಾನಕಾರಕ ಗುರುವಿನ ದಿನ. ನವರಾತ್ರಿಯ ದಿನದಂದು ದೇವಿಯ ದೇವಾಲಯದಲ್ಲಿ ಯಜ್ಞಯಾಗಾದಿಗಳನ್ನು ಮಾಡುತ್ತಿರುತ್ತಾರೆ, ಪಾಲ್ಗೊಳ್ಳಿ ಒಳ್ಳೆಯದಾಗುತ್ತದೆ.

All Rights reserved Namma  Kannada Entertainment.

Advertisement
Share this on...