ನಿದ್ರಾಹೀನತೆಯಿಂದ ಬಳಲುವವರು ಈ ಉಪಾಯಗಳನ್ನು ಅಳವಡಿಸಿಕೊಂಡರೆ ಗಾಢ ನಿದ್ರೆಯ ಸವಿಯಬಹುದು

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 326 views

ನಿದ್ರೆ ಎಲ್ಲರೂ ಬಲ್ಲರು. ಆದರೆ ನಿದ್ರೆ ಹೇಗೆ ಮಾಡಬೇಕು ಎಂಬುದನ್ನು ಬಲ್ಲವರು ಬಹುಜನರಿಲ್ಲ . ಹಾಸಿಗೆಯಲ್ಲಿ ಮಲಗಿ ಬಿಟ್ಟರೆ ಅದು ನಿದ್ರೆ ಎನಿಸಿಕೊಳ್ಳುವುದು. ನಿದ್ರೆ ದೇಹಕ್ಕೆ ವಿರಾಮ ನೀಡುವ ಸ್ಥಿತಿ. ಈ ಸ್ಥಿತಿ ಗಾಢವಾಗಿದ್ದಷ್ಟ ಮನುಷ್ಯ ಆರೋಗ್ಯವಾಗಿರುತ್ತಾನೆ .

Advertisement

:-ನಿಮಗೆಮಲಗಿದ 30 ನಿಮಿಷಗಳ ನಂತರವೂ ನಿದ್ರೆ ಬಾರದಿದ್ದರೆ

Advertisement

:-ಮಲಗಿದ ನಂತರ ಇಡೀ ರಾತ್ರಿ ಆಗಾಗ ಎಚ್ಚರಗೊಳ್ಳುತ್ತಿದ್ದರೆ

Advertisement

:-ಮಲಗಿದಾಗ ಉಸಿರಾಟದ ವೇಗ ,ನಿಯಮಿತತೆ ಏರುಪೇರಾಗುತ್ತಲಿದ್ದರೆ

Advertisement

:-ಬೆಳಗಿನ ಜಾವ ನಿದ್ರೆ ಬಾರದೆ ನರಳುತ್ತಿದ್ದರೆ

:-ಮಲಗಿದ ತಕ್ಷಣ ನಿದ್ದೆ ಆವರಿಸಿ ಸ್ವಲ್ಪ ಸಮಯದ ನಂತರ ಎಚ್ಚರವಾಗಿ ಪುನಃ ನಿದ್ರೆ ಬರದಿದ್ದರೆ

:-ನಿದ್ರೆಯಲ್ಲಿ ವಿಪರೀತ ಗೊರಕೆ ಹೊಡೆಯುತ್ತಿದ್ದರೆ

:-ನಿದ್ರೆಯಿಂದೆದ್ದ ಮೇಲೆ ಉಲ್ಲಸಿತ , ಪ್ರಫುಲ್ಲ ಮನಸ್ಕರಾಗಿರದಿದ್ದರೆ

:-ರಾತ್ರಿಯ ನಿದ್ರೆಯ ನಂತರವೂ ಹಗಲು ತೂಕಡಿಕೆ , ಆಲಸ್ಯಗಳುಂಟಾಗುತ್ತಿದ್ದರೆ

:-ಹಗಲು ವಿಪರೀತ ಆಕಳಿಕೆ ಬರುತ್ತಿದ್ದರೆ

:-ನಿದ್ರಾಹೀನತೆಗೆ ಮಾತ್ರೆ ಸೇವಿಸಿ ನಿದ್ರಿಸುವಂತಿದ್ದರೆ

ನಿಮ್ಮ ಆರೋಗ್ಯದಲ್ಲಿ ಎಲ್ಲವೂ ಸರಿಯಿಲ್ಲವೆಂದೆ ಅರ್ಥ . ಈ ಲಕ್ಷಣಗಳಲ್ಲಿ ಒಂದಾದರೂ ನಿಮ್ಮನ್ನು ಹಿಡಿದುಕೊಂಡಿದ್ದಲ್ಲಿ ನಿಮಗೆ ಗಾಢ ನಿದ್ರೆಯ ಪರಿಚಯವಾಗಿಲ್ಲವೆನ್ನಬಹುದು . ಯಾವಾಗ ಗಾಢ ನಿದ್ರೆಯಿಂದ ಮನಸ್ಸು ವಿಶ್ರಾಂತಿ ಪಡೆಯಲಾಗದೋ ಆತನ ಮನೋದೈಹಿಕ ಪರಿಸ್ಥಿತಿಯ ಬಗ್ಗೆ ಪರಿಶೀಲಿಸುವ ಅವಶ್ಯಕತೆ ಇರುತ್ತದೆ . ನಿದ್ರೆ ಎಷ್ಟು ಬೇಕು ? ಸಾಮಾನ್ಯವಾಗಿ 6 ರಿಂದ 8 ಗಂಟೆಗಳ ಕಾಲ ರಾತ್ರಿಯ ಸರಿಯಾದ ನಿದ್ರೆ ಬೇಕು .

ಇತ್ತೀಚಿನ ದಿನಗಳಲ್ಲಿ ದುಡಿಮೆಯ ಧಾವಂತದಲ್ಲಿ ದಿನ – ರಾತ್ರಿಗಳೆರಡು ಏಕಪ್ರಕಾರವಾಗಿರುವುದರಿಂದ ರಾತ್ರಿ ನಿದ್ರೆ ಸಾಧ್ಯವಿಲ್ಲದವರು ಕನಿಷ್ಟ ಹಗಲು ಅಷ್ಟೆ ಸಮಯ ನಿಶ್ಚಿಂತೆಯಿಂದ ನಿದ್ರಿಸಲು ಪ್ರಯತ್ನಿಸಬೇಕು. ಸಮಿಕ್ಷೆಯೊಂದರನುಸಾರ ಶೇಕಡಾ 60 ಕಿಂತ ಹೆಚ್ಚಿನ ಜನರು ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ .
ನಿದ್ರಾಹೀನರಲ್ಲಿ ಸ್ಮರಣಶಕ್ತಿ ಕಡಿಮೆಯಾಗುತ್ತದೆ , ಕಲಿಯುವ ಪ್ರವೃತ್ತಿಯಲ್ಲಿ ಅನಾಸಕ್ತಿ ಉಂಟಾಗುತ್ತದೆ .ತಾರ್ಕಿಕ ವಾದಮಂಡನೆ , ಭಾವೀ ಪರಿಸ್ಥಿತಿಯ ಪರಿಕಲ್ಪನಾ ಶಕ್ತಿಗಳಲ್ಲಿ ಕುಂದು ಕಂಡು ಬರುತ್ತದೆ . ಇವೆಲ್ಲದರ ಪರಣಾಮವಾಗಿ ಮಕ್ಕಳಲ್ಲಿ ಶಾಲಾಚಟುವಟಿಕೆಲ್ಲಿ ಹಿನ್ನಡೆ ಕಂಡು ಬಂದರೆ, ಉದ್ಯೋಗವಂತರಲ್ಲಿ ತಪ್ಪುಗಳು ಮರುಕಳಿಸುವುದು ,ಖಿನ್ನತೆ , ಒತ್ತಡ , ಅಸಹನೆ , ಸಿಡುಕುಸ್ವಭಾವ ಹೆಚ್ಚುತ್ತದೆ .

ನಿದ್ರಾಹೀನತೆಯಿಂದ ಬಳಲುವವರು ಈ ಕೆಳಗಿನ ಕೆಲವು ಉಪಾಯಗಳನ್ನು ಅಳವಡಿಸಿಕೊಂಡರೆ ಗಾಢ ನಿದ್ರೆಯ ಸವಿಯಬಹುದು

* ಹಗಲು ಯಾವ ಕಾರಣಕ್ಕೂ ನಿದ್ರಿಸಬೇಡಿ

* ರಾತ್ರಿ ಮಲಗುವುದಕ್ಕಿಂತ ಕನಿಷ್ಠ 3 ಘಂಟೆ ಮೊದಲು ಆಹಾರ ಸೇವಿಸಿರಿ.

* ರಾತ್ರಿ ಸಾಧ್ಯವಾದಷ್ಟು ಕಡಿಮೆ ದ್ರವ ಪದಾರ್ಥ ಸೇವಿಸಿ.

* ಮಲಗಲು ನಿದ್ರಾಮಾತ್ರೆ ,ಔಷಧಿ,ಮದ್ಯ ಬಳಸಬೇಡಿ.

* ಮಲಗಿದಾಗ ಆಕಾಶವೇ ಬೀಳಲಿ ಮೇಲೆ , ಭೂಮಿಯೇ ಬಾಯ್ಬಿಡಲಿ ನೀವು ಮಾತ್ರ ನಿಷ್ಚಿಂತರಾಗಿ ಮಲಗಿ ಬಿಡುವ ನಿರ್ಣಯ ಮಾಡಿ .

* ಅದು ಹೇಗೆ, ಇದು ಹೇಗೆ, ಅದನ್ನು ಏನು ಮಾಡುವುದು ಎಂದು ನೂರೆಂಟು ಯೊಚನೆಗಳನ್ನು ತಲೆಗೆ ಹಚ್ಚಿಕೊಂಡು ಮಲಗಿದರೆ ಸುತಾರಾಂ ನಿದ್ರೆ ಬರುವುದಿಲ್ಲ . ಅಂತವುಗಳನ್ನ ಯೋಚಿಸಲೆಂದೇ ದಿನದಲ್ಲಿ ಬೇರೆ ಸಮಯ ನಿಗದಿಯಾಗಿರುತ್ತದೆ . ನಿದ್ರೆಯ ಸಮಯ ನಿಗದಿಯಾಗಿರುವಾಗ ಅಲ್ಲಿ ಆಲೋಚನೆಗಳಿಗೆ ಅವಕಾಶ ನೀಡಬಾರದು.

* ನಿದ್ರೆ ಮಾಡಲು ಆರಂಭಿಸಿದೊಡನೆ ಸಮಸ್ತಲೋಕದ ಸಕಲ ಯೋಚನೆ, ಚಿಂತೆಗಳನ್ನು ತ್ಯಜಿಸಿ ಶ್ರದ್ದೆಯಿಂದ ‘ ಈಗ ನಾನು ಮಲಗಿ ಸುಖ ನಿದ್ರೆ ಮಾಡುವುದಷ್ಟನ್ನೇ ‘ ಮಾಡುವೆನೆಂಬ ಪ್ರತಿಜ್ಞೆ ಮಾಡಿ.

* ಆದರೂ ನಿದ್ದೆ ಬರಲಿಲ್ಲವಾದರೆ ಶಾಸ್ತ್ರೀಯ ಸಂಗೀತವನ್ನಾಲಿಸಿರಿ. ಭಾವಗೀತೆಗಳ ಕೇಳಿ ,ಇಲ್ಲವೆ ದೇವಸ್ತೋತ್ರ ಪಠಿಸಿ.

* ಬೆಳಿಗ್ಗೆ ಮತ್ತು ಸಂಜೆ ವೇಗನಡಿಗೆ ಮಾಡಿರಿ. ಯೋಗಾಭ್ಯಾಸ, ಪ್ರಾಣಾಯಾಮಗಳು ಸಹ ಸುಖ ನಿದ್ರೆಗೆ ಪೂರಕವೆ.

* ಮನಸ್ಸಿನಲ್ಲಿಯ ದ್ವೇಷ , ಅಸೂಹೆ , ಕ್ರೋಧಗಳ ತೊಡೆದು ಹಾಕಿರಿ.

* ನನ್ನ ಪಾಲಿನದು ನನಗೆ ಎಂದಿದ್ದರು , ಹೇಗಿದ್ದರೂ ದೊರೆಯುತ್ತದೆ ಎಂಬ ಭಾವ ಬ ಬೆಳಸಿಕೊಳ್ಳಿ.

* ನಮಗರಿವಿಲ್ಲದೆ ನಾವು ಈ ಭುವಿಗೆ ಬಂದಿದ್ದೇವೆ. ನಮಗರಿವಿಲ್ಲದೆ ನಾವು ಈ ಬದುಕಿಗೆ ವಿದಾಯ ಹೇಳುತ್ತೇವೆ.ಇರುವಷ್ಟು ದಿನ ಈ ಬದುಕನ್ನು ಪ್ರೀತಿಯಿಂದ ಭರವಸೆಯಿಂದ ಅನುಭವಿಸುವ ಸಂಕಲ್ಪ ಗೈದರೆ ಋಣಾತ್ಮಕ ವಿಚಾರ, ವ್ಯಥೆಗಳು ಬಾಧಿಸವು.
ಶರತ್ ಕುಮಾರ್ ಟಿ
ಸಾರಗನ ಜೆಡ್ಡು
*****

Advertisement
Share this on...