ಇವರೆಲ್ಲಾ ಇದೇ ಹಿನ್ನಲೆಯಿಂದ ಬಂದು ನಾಯಕನಟರಾದವರು !

in ಮನರಂಜನೆ 117 views

ರಂಗಭೂಮಿ ಮತ್ತು ಕಿರುತೆರೆ ಲೋಕವು ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭಾವಂತ ಕಲಾವಿದರುಗಳನ್ನು ಪರಿಚಯಿಸಿದ್ದು, ಇದೀಗ ಅವರು ಚಿತ್ರರಂಗವನ್ನು ಆಳುತ್ತಿದ್ದಾರೆ. ಒಂದು ರೀತಿ ಹೇಳುವುದಾದರೆ ಈ ಕಿರುತೆರೆ ಪ್ರಪಂಚ ಎಂಬುವುದು ಕಲಾವಿದರುಗಳಿಗೆ ಪೂರ್ವಸಿದ್ಧಾತಾ ವೇದಿಕೆ ಇದ್ದ ಹಾಗೆ. ಇನ್ನು ಕಿರುತೆರೆಯ ಮೂಲಕ ತಮ್ಮ ನಟನಾ ಜೀವನವನ್ನು ಪ್ರಾರಂಬಿಸಿ ನಂತರ ಬೆಳ್ಳಿ ಪರದೆಯಲ್ಲಿ ಬದುಕು ಕಟ್ಟಿಕೊಂಡವರ ಪಟ್ಟಿ ಇಲ್ಲಿದೆ.ಸಾಕಷ್ಟು ಕಿರುತೆರೆ ಕಲಾವಿದರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಇಲ್ಲಿ ಕಿರುತೆರೆ ಹಿನ್ನಲೆಯಿಂದ ಬಂದು ನಾಯಕನಟರಾಗಿ ಮಿಂಚುತ್ತಿರುವ ಸಿನಿತಾರೆಯರನ್ನು ಈ ಪಟ್ಟಿಯಲ್ಲಿ ನೀವು ನೋಡಬಹುದು.

Advertisement

ರಮೇಶ್ ಅರವಿಂದ್ : ೯೦ ರ ದಶಕದಲ್ಲಿ ಕನ್ನಡ ಚಿತ್ರರಂಗದ ಬಹು ಸುಂದರ ನಟ ಹಾಗೂ ರೋಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾಗಿದ್ದವರು ರಮೇಶ್ ಅರವಿಂದ್. ಕನ್ನಡ ಸೇರಿದಂತೆ ತಮಿಳು ಚಿತ್ರರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಇವರು ಮೊದಮೊದಲು ಪರಿಚಯ ಎಂಬ ಧಾರವಾಹಿಯಲ್ಲಿ ಬಣ್ಣ ಹಚ್ಚಿದ್ದರು.

Advertisement

 

Advertisement

Advertisement

ಪ್ರಕಾಶ್ ರಾಜ್ : ದಕ್ಷಿಣ ಭಾರತ ಚಿತ್ರರಂಗ ಕಂಡ ಹೆಮ್ಮೆಯ ನಟ ಹಾಗೂ ಗ್ರೇಟ್ ವಿಲನ್ ಎಂದರೇ ಅದು ಪ್ರಕಾಶ್ ರಾಜ್. ಬಹುಬಾಷೆಯಲ್ಲಿ ಬೇಡಿಕೆಯ ನಟನಾಗಿರುವ ಇವರು, ‘ಗುಡ್ಡದ ಭೂತ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದ್ದರು.

ಕಿಚ್ಚ ಸುದೀಪ್ :ಕನ್ನಡ ಚಿತ್ರರಂಗದ ಹೆಮ್ಮೆಯ ಅಭಿನಯ ಚಕ್ರವರ್ತಿ , ಅಭಿಮಾನಿಗಳ ಪ್ರೀತಿಯ ಕಿಚ್ಚ, ಸುದೀಪ್ ಅವರು ಸದ್ಯ ಭಾರತದ ಚಿತ್ರರಂಗದ ಬೇಡಿಕೆಯ ನಟ. ಇನ್ನು ಸುದೀಪ್ ಅವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆ ಪ್ರಪಂಚಕ್ಕೆ ಸುದೀಪ್ ಪದಾರ್ಪಣೆ ಮಾಡಿದರು.

ಡಿ ಬಾಸ್ ದರ್ಶನ್ : ಸದ್ಯ ಕನ್ನಡ ಚಿತ್ರರಂಗದಲ್ಲಿ, ಕನ್ನಡ ಸಿನಿ ರಸಿಕರಲ್ಲಿ ಜೋರಾಗಿ ಕೇಳುತ್ತಿರುವ ಹೆಸರು ಎಂದರೆ ಡಿಬಾಸ್ ದರ್ಶನ್ ಅವರು ಹೆಸರು. ಇನ್ನು ಈ ಡಿ ಬ್ರಾಂಡ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಎಸ್ ನಾರಾಯಣ್ ನಿರ್ದೇಶನದ ‘ಅಂಬಿಕಾ’ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದರು.

 

ಶ್ರೀ ನಗರ ಕಿಟ್ಟಿ : ಚಂದ್ರ ಚಕೋರಿ ಎಂಬ ಸಿನಿಮಾದ ಮೂಲಕ ಸಿನಿಪಯಣವನ್ನು ಪ್ರಾರಂಭಿಸಿದ ನಟ ಕಿಟ್ಟಿ ಅವರು ನಂತರ ಕನ್ನಡದ ಭರವಸೆಯ ನಟರಾದರು. ಇನ್ನು ಮೊದಮೊದಲು ಶ್ರೀನಗರ ಕಿಟ್ಟಿ, `ಚಂದ್ರಿಕಾ’ ಧಾರಾವಾಹಿಯಲ್ಲಿ ನಟಿಸಿದ್ದರು.

ಗಣೇಶ್ ರೊಮ್ಯಾಂಟಿಕ್ ಹೀರೋ ಆಗಿ, ಗೋಲ್ಡನ್ ಸ್ಟಾರ್ ಆಗಿ ಮಿಂಚುತ್ತಿರುವ ಈ ಮಳೆ ಹುಡುಗ, ಮೊದಮೊದಲು ಕಾಮಿಡಿ ಟೈಮ್ ಮೂಲಕ ಖ್ಯಾತಿ ಪಡೆದು, ನಂತರ ಸಿಹಿಕಹಿ ಚಂದ್ರು ನಿರ್ದೇಶನದ `ಪಾಪ ಪಾಂಡು’ ಧಾರಾವಾಹಿಯಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ್ದರು.

ದುನಿಯಾ ವಿಜಯ್ ದುನಿಯಾ ಚಿತ್ರದ ಮೂಲಕ ಸಿಕ್ಕಾಪಟ್ಟೆ ಹೆಸರು ಮಾಡಿದ ದುನಿಯಾ ವಿಜಯ್ ಅವರು,ಚಿತ್ರರಂಗಕ್ಕೆ ಖಳನಾಯಕನಾಗಿ ಎಂಟ್ರಿ ಕೊಡುವ ಮುನ್ನ ದುನಿಯಾ ವಿಜಯ್ ಸಿಹಿಕಹಿ ಚಂದ್ರು ನಿರ್ದೇಶನದ `ಪಾಪ ಪಾಂಡು’ ಧಾರಾವಾಹಿಯಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ್ದರು.

 

ರಾಕಿಂಗ್ ಸ್ಟಾರ್ ಯಶ್: ಇದೀಗ ನ್ಯಾಶನಲ್ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರು ಚಿತ್ರರಂಗಕ್ಕೂ ಪ್ರವೇಶಿಸುವ ಮುನ್ನ `ನಂದಗೋಕುಲ’ ಮತ್ತು `ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲಿ ನಟಿಸಿದ್ದರು.ನಂತರ ಬಿಂದಾಸ್ ಹುಡುಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು.

ಡಾರ್ಲಿಂಗ್ ಕೃಷ್ಣ: ಇದೀಗ ಪ್ರೇಮಿಗಳಿಗೆ ಬಹಳ ಇಷ್ಟವಾದ ನಟನೆಂದರೆ ಅವರು ಡಾರ್ಲಿಂಗ್ ಕೃಷ್ಣ.ಇನ್ನು ಡಾರ್ಲಿಂಗ್ ಕೃಷ್ಣ `ಕೃ‍ಷ್ಣ ರುಕ್ಮಿಣಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದ್ದರು.

ಚಂದನ್ : ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿಯ ಮೂಲಕ ಕನ್ನಡಿಗರ ಮನೆ ಮಗನಾದವರು ನಟ ಚಂದನ್ ಅವರು.ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಂದು ಪಾತ್ರ ಮತ್ತು ರಾಧಾ ಕಲ್ಯಾಣ ಸೀರಿಯಲ್ ಮೂಲಕ ಖ್ಯಾತಿ ಪಡೆದಿದ್ದ ಚಂದನ್ ಪರಿಣಯ ಚಿತ್ರದಿಂದ ಸಿನಿಪಯಣ ಆರಂಭಿಸಿದರು.

ವಿಜಯ್ ಸೂರ್ಯ :ಹೆಂಗಳೆಯರ ನಿದ್ದೆ ಕದ್ದ ಪೋರ ಎಂದರೆ ಅವರು ವಿಜಯ್ ಸೂರ್ಯ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆಮಾತಾಗಿರುವ ವಿಜಯ ಸೂರ್ಯ ಇಷ್ಟಕಾಮ್ಯ, ಸ, ಕದ್ದುಮುಚ್ಚಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ರಿಷಿ :ಅಪರೇಷನ್ ಅಲಮೇಲಮ್ಮ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ ರಿಷಿ ಅವರು ಮೊದಲು ಅನೂರೂಪ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಸಕ್ರಿಯವಾಗಿದ್ದರು

Advertisement
Share this on...