ತಮ್ಮ ಮನೆಯ ವಿದ್ಯುತ್ ಬಿಲ್ ನೋಡಿ ಶಾಕ್ ಆದ ನಟಿ ಸ್ನೇಹಾ !

in Uncategorized/ಮನರಂಜನೆ 110 views

ಲಾಕ್ ಡೌನ್ ಆದ ಮೇಲೆ ವಿದ್ಯುತ್ ಇಲಾಖೆಯು ಕಳೆದ ಎರಡು ಮೂರು ತಿಂಗಳುಗಳಿಂದ ಮೀಟರ್ ರೀಡಿಂಗ್ ಮಾಡಿಲ್ಲ. ಆದರೆ ಲಾಕ್ ಡೌನ್ ಸಡಿಲಿಕೆಯ ನಂತರ ವಿದ್ಯುತ್ ಇಲಾಖೆ ಮೀಟರ್ ರೀಡಿಂಗ್ ಪುನರಾರಂಭಿಸಿತು. ಆದರೆ ಇದೀಗ ಜನರು ತಮ್ಮ ವಿದ್ಯುತ್ ಬಿಲ್’ಗಳನ್ನು ನೋಡಿ ಶಾಕ್ ಆಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಜನರು ಎಲ್ಲಿಗೂ ಹೋಗದೆ ತಮ್ಮ ತಮ್ಮ ಮನೆಗಳಲ್ಲೇ ಇದ್ದುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿರುವುದು ಒಂದು ಕಡೆಯಾದರೆ, ವಿದ್ಯುತ್ ಬಿಲ್’ಗಳು ಊಹೆಗೂ ಮೀರಿ ಬಂದಿವೆ. ಇದುವರೆಗೂ ಅತಿ ಹೆಚ್ಚು ಬಿಲ್ ಪಡೆಯುವ ಜನರು ಕಡಿಮೆ ಸಂಖ್ಯೆಯಲ್ಲಿದ್ದರು. ಆದರೆ ಲಾಕ್ ಡೌನ್ ನಂತರ ಸಾವಿರಾರು ಸಂಖ್ಯೆಯಲ್ಲಿ ಜನರು ಹೆಚ್ಚು ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ. ಜನಸಾಮಾನ್ಯರಷ್ಟೇ ಅಲ್ಲ, ವಿದ್ಯುತ್ ಮಂಡಳಿಯು ಸೆಲೆಬ್ರಿಟಿಗಳಿಗೂ ಶಾಕ್ ನೀಡಿದೆ. ಹೌದು ಹಿರಿಯ ನಟಿ ಸ್ನೇಹಾ ಅವರಿಗೂ ಇದೀಗ 70,000 ರೂ. ವಿದ್ಯುತ್ ಬಿಲ್ ಬಂದಿದೆ. ಇದನ್ನು ನೋಡಿ ಶಾಕ್ ಆದ ಸ್ನೇಹಾ, ಹಿಂದಿನ ದಿನಗಳಿಗೆ ಹೋಲಿಸಿದರೆ ಈ ಬಾರಿಯ ಬಿಲ್ ಹೆಚ್ಚು ಬಂದಿದೆ ಎಂದು ತಿಳಿಸಿದ್ದಾರೆ.

Advertisement

 

Advertisement

Advertisement

ಅಷ್ಟೇ ಅಲ್ಲ, ಈ ಘಟನೆಯ ಬಗ್ಗೆ ಸ್ನೇಹಾ ಗಲಾಟೆ ಮಾಡುತ್ತಿದ್ದಂತೆ, ಅಧಿಕಾರಿಗಳು ಪ್ರತಿಕ್ರಿಯಿಸಿ ಮೀಟರ್’ನಲ್ಲಿನ ದೋಷದಿಂದಾಗಿ ಇದು ಸಂಭವಿಸಿದೆ. ಮೀಟರ್ ರೀಡಿಂಗ್ ಮರುಪರಿಶೀಲಿಸಲು ತಮ್ಮ ತಂಡವನ್ನು ಕಳುಹಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅನಿಲ್ ಬಾಬು ನಿರ್ದೇಶನದ ಮಲಯಾಳಂ ಚಿತ್ರ ಇಂಗಾನೆ ಒರು ನೀಲಪಕ್ಷಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ನೇಹಾ, ನಂತರ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿ, ವೀಕ್ಷಕರ ಮನ ಗೆದ್ದಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ರವಿಶಾಸ್ತ್ರೀ ಚಿತ್ರದಲ್ಲಿಯೂ ನಟಿಸಿರುವ ಸ್ನೇಹಾ, ಉನ್ನೈ ನೈನೈತು ಚಿತ್ರದ ಪಾತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ, ಅತ್ಯುತ್ತಮ ನಟಿಗಾಗಿ ವಿಜಯ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ರಾಧಾ ಗೋಪಾಲಂ ಚಿತ್ರದ ಅಭಿನಯಕ್ಕಾಗಿ ನಂದಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

Advertisement

 

ಪ್ರಸ್ತುತ ತಮ್ಮ ಪತಿ ಪ್ರಸನ್ನ ಅವರ ಜೊತೆ ಚೆನ್ನೈನಲ್ಲಿ ವಾಸಿಸುತ್ತಿರುವ ಸ್ನೇಹಾ, ಆಗಸ್ಟ್ 10, 2015 ರಂದು ತಮ್ಮ ಮಗ ವಿಹಾನ್’ಗೆ ಜನ್ಮ ನೀಡಿದರೆ, ಎರಡನೇ ಮಗು ಆದ್ಯಾಂತ ಜನವರಿ 24, 2020 ರಂದು ಜನಿಸಿದಳು.

Advertisement
Share this on...