ಮೃದುವಾದ ಚಪಾತಿ ಮಾಡಲು ಮೂರು ತರಹದ ಸುಲಭ ವಿಧಾನ ಇಲ್ಲಿದೆ ನೋಡಿ !

in ಕನ್ನಡ ಮಾಹಿತಿ 171 views

ಚಪಾತಿ ಎಂದರೆ  ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಡುವಂತಹ ತಿಂಡಿ. ಗೋಧಿ ಹಿಟ್ಟಿನಿಂದ ಈ ಚಪಾತಿಯನ್ನು ತಯಾರು ಮಾಡಲಾಗುತ್ತದೆ.  ಇದು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೆ ತುಂಬಾ ರುಚಿಯಾಗಿ ಇರುತ್ತದೆ . ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ  ಜನರು ಚಪಾತಿಯನ್ನು ಬೆಳಗಿನ ತಿಂಡಿಗೆ ತಿನ್ನುವುದರ ಜೊತೆಗೆ ರಾತ್ರಿಯ ಊಟಕ್ಕೆ ಕೂಡ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಸಕ್ಕರೆ ಕಾಯಿಲೆ ಇರುವವರಂತೂ ಚಪಾತಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ.

Advertisement

 

Advertisement

Advertisement

ಆದರೆ ಈ ಚಪಾತಿಗಳು ಕೆಲವೊಮ್ಮೆ ನಾರಿನಂತೆ ಮತ್ತು ತಣ್ಣಗಾದ ಮೇಲೆ ಒಣಗಿದಂತೆ ಆಗುತ್ತದೆ, ಮೃದುವಾಗಿ ಇರುವುದಿಲ್ಲ .ಇಂತಹ ಚಪಾತಿಗಳನ್ನು ಚಿಕ್ಕಮಕ್ಕಳು ವಯಸ್ಸಾದ  ವೃದ್ಧರು ತಿನ್ನಲು ಕಷ್ಟವಾಗುತ್ತದೆ.  ಅಲ್ಲದೆ ಲಂಚ್ ಬಾಕ್ಸ್ ಗಳಿಗೆ ತೆಗೆದುಕೊಂಡು  ಹೋಗಲು ಕಷ್ಟ . ಆದ್ದರಿಂದ ಮೃದುವಾದ ಚಪಾತಿಗಳನ್ನು ಹೇಗೆ ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಳ್ಳಬಹುದು ಎಂಬುದಕ್ಕೆ ಹಲವು ರೀತಿಯ ವಿಧಾನಗಳಿದೆ.

Advertisement

 

ಮೊದಲನೆಯ ವಿಧಾನ: ಗೋಧಿಹಿಟ್ಟು , ನೀರು,  ಉಪ್ಪು,  ಒಂದು  ಚಮಚದಷ್ಟು ಸಕ್ಕರೆ , ಸ್ವಲ್ಪ ಎಣ್ಣೆ,  ಇವುಗಳನ್ನು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.  ನಂತರ ಚೆನ್ನಾಗಿ ನಾದಿ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ . ನೆನೆಸಿದ ನಂತರ ಮತ್ತೆ ಐದು ನಿಮಿಷಗಳ ಕಾಲ ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ . ಈ ಉಂಡೆಗಳನ್ನು ಚಿಕ್ಕದಾಗಿ ಲಟ್ಟಿಸಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ತ್ರಿಕೋನಾಕಾರದಲ್ಲಿ ಮಡಚಿ ಆ ನಂತರ ದೊಡ್ಡದಾಗಿ ಒತ್ತಿ ಕಾದ ತವಾ ಮೇಲೆ ಎರಡೂ ಕಡೆ ಹೊಂಬಣ್ಣ ಬರುವಂತೆ ಎಣ್ಣೆ ಹಾಕಿ ಬೇಯಿಸಿ. ಆಗ ಮೃದುವಾದ ಚಪಾತಿ ತಿನ್ನಲು ರೆಡಿಯಾಗುತ್ತದೆ .

 

ಎರಡನೆಯ ವಿಧಾನ : ಚಪಾತಿ ಮತ್ತಷ್ಟು ಮೃದುವಾಗಲು ಮೊದಲು ಪೂರಿಗಿಂತ ಸ್ವಲ್ಪ ದೊಡ್ಡದಾಗಿ ಲಟ್ಟಿಸಿ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಚೌಕಾಕಾರದಲ್ಲಿ  ಮಡಚಿ  ಆ ನಂತರ ದೊಡ್ಡದಾಗಿ ಲಟ್ಟಿಸಿ ಕಾದ ತವಾ ಮೇಲೆ ಎಣ್ಣೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿ .  ಇಂದು ಚಪಾತಿಯನ್ನು ಕಲಸಿ ಮಾರನೆಯ ದಿನ ಚಪಾತಿಯನ್ನು ಮಾಡಲು ಬಯಸುವವರಿಗೆ ಈ ವಿಧಾನದಿಂದ ಚಪಾತಿಗಳು ಮೃದುವಾಗಿ ಬರುತ್ತದೆ.

ಮೂರನೆಯ ವಿಧಾನ: ಚಪಾತಿಯನ್ನು ದೊಡ್ಡದಾಗಿ ಲಟ್ಟಿಸಿ ಅದರ ಮೇಲೆ ಎಣ್ಣೆಯನ್ನು ಹಚ್ಚಿ ರೋಲ್ ಮಾಡಿ  ಒಂದು ನಿಂಬೆ ಹಣ್ಣಿನ ಗಾತ್ರಕ್ಕೆ  ಚಾಕುವಿನ ಸಹಾಯದಿಂದ ಕತ್ತರಿಸಿ ಆ ಉಂಡೆಗಳನ್ನು  ದೊಡ್ಡದಾಗಿ ಲಟ್ಟಿಸಿ ಕಾದ ತವಾ ಮೇಲೆ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ ನಂತರ ಮೃದುವಾದ ಚಪಾತಿ ರೆಡಿಯಾಗುತ್ತದೆ.
ಈ ಮೂರು ವಿಧಾನಗಳನ್ನು ಬಳಸಿ ನೀವು ಮನೆಯಲ್ಲಿ ಮೃದುವಾದ ಚಪಾತಿಗಳನ್ನು ಮಾಡಿ ಸವಿಯಬಹುದು.

Advertisement
Share this on...