ಹಣ ಖಾಲಿಯಾಗಿ ಸಂಕಷ್ಟದಲ್ಲಿದ್ದ ಈ ಖ್ಯಾತ ನಟಿಗೆ ಸಹಾಯ ಮಾಡಿದ್ಯಾರು ಗೊತ್ತಾ..?

in ಮನರಂಜನೆ 68 views

ಕೊರೋನಾ ಲಾಕ್ ಡೌನ್ ಸಾಮಾನ್ಯ ವ್ಯಕ್ತಿಗಳಿಗೆ ಹಾಗೂ ಸೆಲೆಬ್ರಿಟಿಗಳಿಗೆ ಒಂದೇ ರೀತಿಯ ಸಮಸ್ಯೆಯನ್ನು ಕೊಟ್ಟಿದೆ. ಅದರಲ್ಲೂ ದಿನದ ಲೆಕ್ಕದಲ್ಲಿ, ಷೋ ಲೆಕ್ಕದಲ್ಲಿ ಕೆಲಸ ಮಾಡುವ ನಟ-ನಟಿಯರಿಗಂತೂ ತುಂಬಾ ತೊಂದರೆಯಾಗಿದೆ. ಮುಂದೆ ಬೇರೆ ಷೋ ಗಳಿರುವ ಕಾರಣ ಹಣ ಬರುತ್ತೆ ಎನ್ನುವ ನಂಬಿಕೆಯಿಂದ ಇರುವ ಹಣವನ್ನು ಬಳಸುತ್ತಾರೆ. ಆದರೆ ಏಕಾಏಕಿ ಬಂದ ಕೋರೊನಾ ಎಲ್ಲಾರ ಪ್ಲಾನ್ ಗಳನ್ನು ತಲೆ ಕೆಳಗೆ ಮಾಡಿದೆ. ಹೀಗೆ ಇರುವ ಹಣ ಖಾಲಿಯಾಗಿ ಬರಿ ಕೈಯಲ್ಲಿದ್ದ ಖ್ಯಾತ ನಟಿಗೆ ಒಬ್ಬ ಮೇಕಪ್ ಮಾಡಿದ್ದೇನು ಗೊತ್ತಾ..? ನಟಿ ಸೋನಲ್ ಹಿಂದಿ ಕಿರುತೆರೆಯಲ್ಲಿ ಖ್ಯಾತ ನಟಿ. ಹಲವಾರು ಶೋಗಳನ್ನು ಮಾಡಿರುವ ಇವರು ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಆದರೆ ಕೋರೊನಾ ಲಾಕ್ ಡೌನ್ ನಿಂದಾಗಿ ಈ ನಟಿ ತುಂಬಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ತನ್ನ ಬಳಿ ಇರುವ ಎಲ್ಲಾ ಹಣ ಖಾಲಿಯಾದ ಕಾರಣ ಮುಂದಿನ ತಿಂಗಳು ಹೇಗೆ ಜೀವನ ನಡೆಸುವುದು ಎಂದು ಭಾವಿಸಿದ ನಟಿ ಸೋನಲ್ ತನಗೆ ಲಕ್ಷ-ಲಕ್ಷ ಕೊಡಬೇಕಾಗಿದ್ದ ನಿರ್ಮಾಪಕರಿಗೆ ಕರೆಮಾಡಿ ತನ್ನ ಬಾಕಿ ಹಣ ಕೊಡುವಂತೆ ಕೇಳಿದ್ದಾರೆ. ಆದರೆ ಹಣ ಕೊಡುವ ಬದಲು ನಟಿ ಸೋನಲ್ ಕಾಲ್ ಅನ್ನು ಬ್ಲಾಕ್ ಮಾಡಿದ್ದಾರೆ ನಿರ್ಮಾಪಕರು.

Advertisement

 

Advertisement


ಇದರಿಂದ ಇನ್ನಷ್ಟು ಕಂಗಾಲಾದ ನಟಿ ಸೋನಲ್ ತನ್ನ ಸ್ಥಿತಿಯನ್ನು ತನ್ನ ಮೇಕಪ್ ಮ್ಯಾನ್ ಬಳಿ ಹೇಳಿಕೊಂಡಿದ್ದಾರೆ. ಹಾಗೆ ನಿನ್ನ ಹೆಂಡತಿ ಈಗ ಪ್ರೆಗ್ನೆಂಟ್ ಆಗಿದ್ದರೂ ನೀನು ಹೇಗೆ ಇಂತಹ ಸಂಕಷ್ಟದ ಸ್ಥಿತಿಯನ್ನು ಫೇಸ್ ಮಾಡುತ್ತಿದ್ದೀಯಾ ಎಂದು ತನ್ನ ಮೇಕಪ್ ಮ್ಯಾನ್ ಬಳಿ ಕೇಳಿದ್ದಾರೆ. ಕೆಲ ಹೊತ್ತಿನ ನಂತರ ಮೇಕಪ್ ಮ್ಯಾನ್ ಒಂದು ಮೆಸೇಜ್ ಕಳುಹಿಸಿದ. ಅದನ್ನು ನೋಡಿ ನಟಿ ಸೋನಲ್ ಕಣ್ಣಲ್ಲಿ ನೀರು ಬಂತು. ಮೇಡಂ ನನ್ನ ಬಳಿ 15 ಸಾವಿರ ಇದೆ. ಇದನ್ನು ದಯವಿಟ್ಟು ತೆಗೆದುಕೊಳ್ಳಿ ನನ್ನ ಹೆಂಡತಿ ಡೆಲಿವರಿಯ ಸಮಯದಲ್ಲಿ ಕೊಡಿ ಪರವಾಗಿಲ್ಲ ಎಂದು ಮೇಕಪ್ ಮ್ಯಾನ್ ಮೆಸೇಜ್ ಕಳುಹಿಸಿದ.

Advertisement

 

Advertisement


ನನಗೆ ಲಕ್ಷ-ಲಕ್ಷ ಹಣವನ್ನು ಕೊಡಬೇಕಾಗಿರುವವರು ನನ್ನ ಫೋನ್ ತೆಗೆಯುತ್ತಿಲ್ಲ. ಆದರೆ ತಾನು ಕಷ್ಟದಲ್ಲಿದ್ದರೂ ನನಗೆ ಸಹಾಯ ಮಾಡುವ ಹೃದಯವಂತಿಕೆ ತೋರಿದ ಮೇಕಪ್ ಮ್ಯಾನ್ ನ ಒಳ್ಳೆಯತನ ನನ್ನನ್ನು ವಿಸ್ಮಯಗೊಳಿಸಿದ್ದೆ ಎಂದು ನಟಿ ಸೋನಲ್ ಬರೆದುಕೊಂಡಿದ್ದರು. ಹೆಚ್ಚು ಜನ ಶ್ರೀಮಂತರ ಹೃದಯ ಶ್ರೀಮಂತಿಕೆಯಿಂದ ಕೂಡಿರುವುದಿಲ್ಲ ಅನ್ನುವುದಕ್ಕೆ ಉದಾಹರಣೆ ಈ ಘಟನೆ. ಕಷ್ಟದಲ್ಲಿರುವವರಿಗೆ ಬೇರೆಯವರ ಕಷ್ಟ ಬೇಗನೆ ಅರ್ಥವಾಗುತ್ತದೆ ಅಲ್ಲವೇ..? ತಾನು ಸಂಕಷ್ಟದಲ್ಲಿದ್ದರೂ ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ ಮೇಕಪ್ ಮ್ಯಾನ್ ನ ಒಳ್ಳೆಯತನ ಮೆಚ್ಚುವಂತಹದು.

– ಸುಷ್ಮಿತಾ

Advertisement
Share this on...