ಮುಂಬೈನಲ್ಲಿರುವ ಕರ್ನಾಟಕದ ಕಾರ್ಮಿಕರಿಗೆ ಸೋನು ಸೂದ್ ಮಾಡಿದ ಸಹಾಯವೇನು ಗೊತ್ತಾ?

in ಕನ್ನಡ ಮಾಹಿತಿ 11 views

ಖ್ಯಾತ ಬಾಲಿವುಡ್ ನಟ ಸೋನು ಸೂದ್ ಲಾಕ್ ಡೌನ್ ಜಾರಿಯಾದಗಿನಿಂದಲೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅವರು ಈಗಾಗಲೇ ಕೊರೊನಾ ಚಾರಿಟಿಗೆ ದೇಣಿಗೆ ನೀಡಿದ್ದು, ಜುಹುದಲ್ಲಿನ ತಮ್ಮ ಹೋಟೆಲ್ ಅನ್ನು ವೈದ್ಯರು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಕೆಲಸಗಾರರಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂಬಯಿಯ ಅಂಧೇರಿ, ಬಾಂದ್ರಾ, ಜುಹು, ಮತ್ತು ಜೋಗೇಶ್ವರಿ ಪ್ರದೇಶಗಳಲ್ಲಿ ಸುಮಾರು ಮನೆಯಿಲ್ಲದ 45,000 ಜನರಿಗೆ ಪ್ರತಿದಿನ ಆಹಾರವನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಸುಮಾರು 1500 ಪಿಪಿಇ ಕಿಟ್ಗಳನ್ನು ಪಂಜಾಬ್ನ ವೈದ್ಯರಿಗೆ ವ್ಯವಸ್ಥೆ ಮಾಡಿದರು.

Advertisement

 

Advertisement


ಇದೀಗ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ವಲಸೆ ಬಂದವರಿಗೆ ತಮ್ಮ ಮನೆ ತಲುಪಲು 10 ಬಸ್ಗಳನ್ನು ವ್ಯವಸ್ಥೆ ಮಾಡುವ ಮೂಲಕ ಈಗ ಸೋನು ಮತ್ತೆ ಸುದ್ದಿಯಲ್ಲಿದ್ದಾರೆ. ಕೇಂದ್ರ ಸರ್ಕಾರದ ಅನುಮತಿಯ ನಂತರವೂ ಕೆಲವು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ತಲುಪಲು ಇನ್ನೂ ಅವಕಾಶ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೋನು ಸರ್ಕಾರದಿಂದ ಅನುಮತಿ ಪಡೆದು ಮಹಾರಾಷ್ಟ್ರದ ಥಾಣೆ ಮತ್ತು ಕರ್ನಾಟಕದ ಗುಲ್ಬರ್ಗಾದಿಂದ ಬಂದ ವಲಸಿಗರನ್ನು ಕಳುಹಿಸಲು ಖಾಸಗಿ ಬಸ್ಸುಗಳನ್ನು ಬಾಡಿಗೆಗೆ ಪಡೆದಿದ್ದಾರೆ.

Advertisement

 

Advertisement


ಈ ಬಸ್ಸುಗಳು ಹೊರಡುವ ಮೊದಲು ಸೋನು ವಲಸೆ ಕಾರ್ಮಿಕರನ್ನು ಕಳುಹಿಸಲು ಥಾಣೆ ಬಸ್ ನಿಲ್ದಾಣಕ್ಕೆ ಬಂದರು. “ವಲಸಿಗರನ್ನು ವಾಪಸ್ ಕಳುಹಿಸಲು ನಾನು ರಾಜ್ಯ ಸರ್ಕಾರಗಳಿಂದ ಅಗತ್ಯವಾದ ಅನುಮತಿ ಪಡೆದುಕೊಂಡಿದ್ದೇನೆ. ಲಾಕ್ ಡೌನ್ನಿಂದಾಗಿ ಮುಂಬೈನ ರಸ್ತೆಗಳು ಮತ್ತು ಬೀದಿಗಳಲ್ಲಿ ಮಕ್ಕಳು ಮತ್ತು ವೃದ್ಧರು ಬಳಲುತ್ತಿರುವವರನ್ನು ನೋಡಿದ ನಂತರ ನಾನು ಈ ನಿರ್ಧಾರ ತೆಗೆದುಕೊಂಡೆ. ಈ ಎರಡು ರಾಜ್ಯಗಳು ಮಾತ್ರವಲ್ಲ, ಇತರ ರಾಜ್ಯಗಳಲ್ಲಿಯೂ ಸಿಲುಕಿಕೊಂಡಿರುವ ಜನರಿಗೆ ನಾನು ಸಹಾಯ ಮಾಡಲು ಸಿದ್ಧನಿದ್ದೇನೆ” ಎಂದು ಸೋನು ತಿಳಿಸಿದ್ದಾರೆ.

 

ಈ ಲಾಕ್ ಡೌನ್ ಸಮಯದಲ್ಲಿ ಅನೇಕ ಜೀವಗಳನ್ನು ರಕ್ಷಿಸಿದ್ದಕ್ಕಾಗಿ ನೆಟ್ಟಿಗರು ಸೋನು ಅವರನ್ನು ಪ್ರಶಂಸಿಸುತ್ತಿದ್ದಾರೆ. ಆನ್-ಸ್ಕ್ರೀನ್’ನಲ್ಲಿ ಖಳನಾಯಕನಾಗಿ ನಟಿಸುವ ಸೋನು, ಮತ್ತೊಮ್ಮೆ ಜನರ ಹೃದಯವನ್ನು ಗೆಲ್ಲುವ ಮೂಲಕ ಆಫ್-ಸ್ಕ್ರೀನ್ ಹೀರೋ ಆಗಿದ್ದಾರೆ. ಅಂದಹಾಗೆ ಇಂದಿನಿಂದ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವಿವಿಧ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮನೆಯಿಂದ ಆಹಾರ ಮತ್ತು ನೀರನ್ನು ತರಲು ಸೂಚಿಸಿದೆ. ಅಲ್ಲದೆ, ರೈಲು ಪ್ರವೇಶಿಸುವ ಮತ್ತು ಇಳಿಯುವ ಸಮಯದಲ್ಲಿ ಪ್ರಯಾಣಿಕರಿಗೆ ಹ್ಯಾಂಡ್ ಸ್ಯಾನಿಟೈಜರ್ ನೀಡಲಾಗುವುದು.

Advertisement
Share this on...