ಸೋನುಸೂದ್ ಜನಸೇವೆ ಮಾಡಿದ ಉದ್ದೇಶವೇನು, ರಾಜಕೀಯಕ್ಕೆ ಬರ್ತಾರಾ..? ಈ ಬಗ್ಗೆ ಅವರು ಏನು ಹೇಳ್ತಾರೆ..?

in Uncategorized/ರಾಜಕೀಯ 101 views

ಕಿಲ್ಲರ್ ಕೊರೊನಾ ಭಾರತಕ್ಕೆ ಬಂದಾಗಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವೈರಸ್ ನಾಶವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ. ಜನರು ಹೊರಗೆ ಹೋಗಲು ಹೆದರುತ್ತಿದ್ದಾರೆ. ಅದೇ ರೀತಿ ಮನೆಗೆ ಯಾರೂ ಬಂದರೂ ಭಯ ಬೀಳುವಂತಾಗಿದೆ.ಇನ್ನು ಇಡೀ ದೇಶದಲ್ಲೇ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರವೊಂದರಲ್ಲೇ 90, 000 ಕೇಸ್​​ಗಳು ವರದಿಯಾಗಿವೆ. ಮುಂಬೈ ಅಂತೂ ಕೊರೊನಾ ಹಾಟ್​​ ಸ್ಪಾಟ್ ಆಗಿ ಹೋಗಿದೆ. ಇನ್ನು ಕೊರೊನಾ ವಾರಿಯರ್ಸ್ ಹಾಗೂ ಕೊರೊನಾ ಪೀಡಿತರಿಗೆ ಅನೇಕ ಜನರು ಸಹಾಯ ಹಸ್ತ ನೀಡಿದ್ದಾರೆ. ಅದರಲ್ಲಿ ನಟ ಸೋನುಸೂದ್ ಕೂಡಾ ಒಬ್ಬರು. ಅವರು ಮಾಡಿದ ಸಹಾಯ ನಿಜಕ್ಕೂ ಮೆಚ್ಚುವಂಥದ್ದು. ತೆರೆ ಮೇಲೆ ವಿಲನ್ ಆಗಿ ಹೆಸರು ಮಾಡಿರುವ ಸೋನು ಸೂದ್ ಜನರಿಗೆ ಸಹಾಯ ಮಾಡುವ ಮೂಲಕ ರಿಯಲ್ ಲೈಫ್ ಹೀರೋ ಎನಿಸಿಕೊಂಡಿದ್ದಾರೆ.

Advertisement

 

Advertisement

Advertisement

ಆರಂಭದಲ್ಲಿ ಸೋನು ಸೂದ್​​ ಕೊರೊನಾ ವಾರಿಯರ್ಸ್​ಗಾಗಿ ತಮ್ಮ ಐಷಾರಾಮಿ ಹೋಟೆಲ್ ಬಿಟ್ಟುಕೊಟ್ಟಿದ್ದರು. ನಿರ್ಗತಿಕರಿಗೆ ಆಹಾರ ಧಾನ್ಯ ವಿತರಿಸಿದ್ದರು. ವಲಸೆ ಕಾರ್ಮಿಕರು, ಅದರಲ್ಲೂ ಕರ್ನಾಟಕದಿಂದ ಮುಂಬೈಗೆ ತೆರಳಿ ಸಿಲುಕಿಕೊಂಡಿದ್ದವರು ತಮ್ಮ ತಮ್ಮ ಊರುಗಳಿಗೆ ತೆರಳಲು ಸುಮಾರು 8 ಬಸ್​​​​ಗಳ ವ್ಯವಸ್ಥೆ ಮಾಡಿದ್ದರು. ತಾವೇ ಮುಂದೆ ನಿಂತು ಜನರನ್ನು ಬಸ್ ಹತ್ತಿಸಿ ಬೀಳ್ಕೊಟ್ಟಿದ್ದರು. ಅಲ್ಲದೆ ವಿಡಿಯೋ ಮೂಲಕ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಕೂಡಾ ಮೂಡಿಸುತ್ತಿದ್ದಾರೆ. ಮನೆಯಲ್ಲೇ ಫೇಸ್ ಶೀಲ್ಡ್​ ತಯಾರಿಸುವುದು ಹೇಗೆ ಎಂಬುದನ್ನೂ ವಿಡಿಯೋ ಮಾಡಿ ತೋರಿಸಿಕೊಟ್ಟಿದ್ದರು.

Advertisement

ಸೋನು ಸೂದ್ ಮನಸಾಕ್ಷಿಯಿಂದ ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವರು ಇದಕ್ಕೆ ಕೂಡಾ ರಾಜಕೀಯದ ಬಣ್ಣ ಕಟ್ಟಿದ್ದಾರೆ. ‘ಕೊರೊನಾ ನಿಯಂತ್ರಣ ಹಾಗೂ ವಲಸೆ ಕಾರ್ಮಿಕರಿಗೆ ನೆರವಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಎತ್ತಿ ತೋರಿಸುವ ಉದ್ದೇಶದಿಂದ ಸೋನು ಸೂದ್​​​​​ ಅವರನ್ನು ಬಿಜೆಪಿ ಮುಂದೆ ಬಿಟ್ಟಿದೆ, ಬಿಜೆಪಿಯೇ ದುಡ್ಡು ನೀಡಿ ಸೋನುಸೂದ್ ಮೂಲಕ ಕೆಲಸ ಮಾಡಿಸುತ್ತಿದೆ ಎಂದು ಶಿವಸೇನೆಯ ಎಂಪಿ ಸಂಜಯ್ ರಾವತ್ ಇತ್ತೀಚೆಗೆ ಆರೋಪಿಸಿದ್ದರು.

 

ಸಂಜಯ್ ರಾವತ್ ಅವರ ಈ ಮಾತಿಗೆ ಸೋನುಸೂದ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ‘ಇಡೀ ದೇಶದ ಜನರು ನನ್ನ ಕೆಲಸಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ನಾನು ಮಾಡುತ್ತಿರುವ ಕೆಲಸ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಜನರ ಸೇವೆ ಮಾಡುವುದಷ್ಟೇ ನನ್ನ ಉದ್ದೇಶ. ಜನರು ಅವರವರ ಸ್ಥಳಗಳಿಗೆ ಸೇರಬೇಕು ಎನ್ನುವುದಷ್ಟೇ ನನ್ನ ಹಾರೈಕೆ. ನನಗೆ ರಾಜಕೀಯಕ್ಕೆ ಬರುವ ಆಸಕ್ತಿ ಖಂಡಿತ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement
Share this on...