ಐಐಹೆಚ್’ಬಿ ಸಮೀಕ್ಷೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಸೋನು ಸೂದ್

in ಮನರಂಜನೆ/ಸಿನಿಮಾ 146 views

ದೇಶಾದ್ಯಂತ ಹಠಾತ್ ಲಾಕ್ ಡೌನ್ ಹೇರಿದ ನಂತರ ಆದಾಯದ ಮೂಲವನ್ನು ಕಳೆದುಕೊಂಡಿರುವ ನಿರ್ಗತಿಕ ಮತ್ತು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಹಲವಾರು ಗಣ್ಯರು ಮುಂದೆ ಬಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ (ಐಐಹೆಚ್’ಬಿ)ನಡೆಸಿದ ಸಮೀಕ್ಷೆಯಲ್ಲಿ ಸೋನು ಸೂದ್ ನಂಬರ್ ಒನ್ ಸ್ಥಾನ ಪಡೆದಿದ್ದಾರೆ.  ಹೌದು, ಲಾಕ್ ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳ ಕಾರ್ಯಕ್ಷಮತೆಯನ್ನು ರೇಟ್ ಮಾಡಲು ಐಐಹೆಚ್’ಬಿ 110 ಕಾರ್ಪೊರೇಟ್ ಮತ್ತು 550 ಗ್ರಾಹಕರನ್ನು ಸಂದರ್ಶಿಸಿತ್ತು. ಅದರಲ್ಲಿ, ಸೋನು ಸೂದ್’ಗೆ ಕಾರ್ಪೊರೇಟ್ ಸಂಸ್ಥೆಗಳಿಂದ ಶೇಕಡ 78.5 ರಷ್ಟು ಸಕಾರಾತ್ಮಕ ರೇಟಿಂಗ್ ಮತ್ತು ವಲಸಿಗರಿಗೆ ಸಹಾಯ ಮಾಡಿರುವ ಪ್ರಯತ್ನಕ್ಕಾಗಿ ಗ್ರಾಹಕರು ಶೇಕಡ 86.4 ಸಕಾರಾತ್ಮಕ ರೇಟಿಂಗ್ ನೀಡಿದ್ದಾರೆ. ಸೋನು ನಂತರ, ಅಕ್ಷಯ್ ಕುಮಾರ್ ಮತ್ತು ಅಮಿತಾಬ್ ಬಚ್ಚನ್ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

Advertisement

Advertisement

ಬಡ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಸಾರಿಗೆ ವ್ಯವಸ್ಥೆ ಒದಗಿಸುವ ಮೂಲಕ ಮಾನವೀಯ ಮರೆದಿದ್ದ ಸೋನು ಸೂದ್ ಎಲ್ಲರ ಹೃದಯವನ್ನು ಗೆದ್ದಿದ್ದಾರೆಂದು ಹೇಳಬೇಕಾಗಿಲ್ಲ. ಸೋನು ಸೂದ್ ಇತ್ತೀಚಿನ ದಿನಗಳಲ್ಲಿ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಸೋನು ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರಗಳನ್ನು ನಿರ್ವಹಿಸಿದರೂ, ನಿಜ ಜೀವನದಲ್ಲಿ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಸೋನು ಮುಂಬೈನಿಂದ ಸಾವಿರಾರು ವಲಸೆ ಕಾರ್ಮಿಕರಿಗೆ ಬಸ್ಸುಗಳನ್ನು ವ್ಯವಸ್ಥೆ ಮಾಡುವ ಮೂಲಕ ಎಲ್ಲರನ್ನೂ ಮನೆಗೆ ಕಳುಹಿಸಿದ್ದರು. ಇಷ್ಟು ಮಾತ್ರವಲ್ಲದೆ, ಎಲ್ಲಾ ಕಾರ್ಮಿಕರು ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸದಂತೆ ಸೋನು ಆ ಕಾರ್ಮಿಕರಿಗೆ ಆಹಾರವನ್ನು ಸಹ ಕಳುಹಿಸಿದ್ದರು.

Advertisement

Advertisement

ಸಂದರ್ಶನವೊಂದರಲ್ಲಿ ಸೋನು ವಲಸಿಗರ ದುಃಸ್ಥಿತಿಯ ಬಗ್ಗೆ ಮಾತನಾಡುತ್ತಾ, “ಅವರಿಗೆ ಸಹಾಯ ಮಾಡದಿದ್ದರೆ ನನಗೆ ರಾತ್ರಿ ನಿದ್ದೆ ಬರುವುದಿಲ್ಲ. ಪ್ರತಿಯೊಬ್ಬ ವಲಸಿಗನನ್ನು ಮನೆಗೆ ಕರೆತರುವವರೆಗೂ ತನ್ನ ಕೆಲಸವನ್ನು ಮುಂದುವರಿಸುವುದಾಗಿ”ಹೇಳಿದ್ದರು. ವಲಸಿಗರನ್ನು ಮನೆಗೆ ಕಳುಹಿಸಲು ಎಷ್ಟು ವೆಚ್ಚವಾಗುತ್ತಿದೆ ಎಂದು ಕೇಳಿದಾಗ, ಸೋನು 1.8 ಲಕ್ಷದಿಂದ 2 ಲಕ್ಷ ರೂ. ಇದು ವಲಸಿಗನು ಎಲ್ಲಿಗೆ ಹೋಗಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದರು.
ಸೋನು ಸೂದ್ ತೆಲುಗು, ಹಿಂದಿ, ತಮಿಳು, ಕನ್ನಡ ಸೇರಿದಂತೆ ಪಂಜಾಬಿ ಚಲನಚಿತ್ರ ‘ಫ್ರಟರ್ನಿಟಿ’ಯಲ್ಲಿಯೂ ಕೆಲಸ ಮಾಡಿದ್ದಾರೆ.

2009 ರ ಅರುಂಧತಿ ಚಿತ್ರದಲ್ಲಿ ಪಶುಪತಿಯ ಪಾತ್ರಕ್ಕಾಗಿ ಹೆಸರುವಾಸಿಯಾಗಿರುವ ಸೋನು ಸೂದ್ ಸಲ್ಮಾನ್ ಖಾನ್ ಎದುರು 2010 ರ ಆಕ್ಷನ್ ಚಿತ್ರ ‘ದಬಾಂಗ್’ ಚಿತ್ರದಲ್ಲಿ ನಟಿಸಿದರು. ಇತ್ತೀಚಿನ ದಿನಗಳಲ್ಲಿ ಅವರು ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೋ ಎಂದು ಸಾಬೀತುಪಡಿಸಿದ್ದಾರೆ.

Advertisement
Share this on...