ಸಿಮ್ ಕಾರ್ಡ್​ ಮೇಲೆ ಸೋನು ಸೂದ್ ಪೇಯ್ಟಿಂಗ್…ಇದಕ್ಕೆ ರಿಯಲ್ ಹೀರೋ ನೀಡಿದ ರಿಯಾಕ್ಷನ್ ಹೇಗಿತ್ತು…?

in ಸಿನಿಮಾ 82 views

‘ವದಲಾ ಬೊಮ್ಮಾಲಿ ನಿನ್ನು ವದಲಾ…’ಎಂದು ಡೈಲಾಗ್ ಹೇಳುತ್ತಾ ಅರುಂಧತಿಯನ್ನು ಕಾ’ಡಿಸುವ ಪಶುಪತಿ ಪಾತ್ರದಲ್ಲಿ ಸೋನು ಸೂದ್ ನಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇದಕ್ಕೂ ಮುನ್ನ ಸೋನು ಸೂದ್ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಜನರು ‘ಅರುಂಧತಿ’ ಚಿತ್ರ ಬಿಡುಗಡೆಯಾದಾಗ ಅವರ ಆ್ಯಕ್ಟಿಂಗ್​​​ಗೆ ಫಿದಾ ಆಗಿ ಹೋದ್ರು. ತಮಿಳು, ತೆಲುಗು, ಹಿಂದಿ, ಕನ್ನಡ ಭಾಷೆಗಳಲ್ಲಿ ನಟಿಸಿ ಸೂಪರ್ ವಿಲನ್ ಎಂದು ಹೆಸರಾಗಿದ್ದ ಸೋನು ಸೂದ್ ಅವರ ನಿಜವಾದ ವ್ಯಕ್ತಿತ್ವ ಎಲ್ಲರಿಗೂ ತಿಳಿದದ್ದು ಕೊರೊನಾ ಲಾಕ್​ಡೌನ್ ಸಮಯದಲ್ಲಿ. ಜನರು ಹೀರೋಗಳನ್ನು ಮಾತ್ರವಲ್ಲ ವಿಲನ್​​​ಗಳನ್ನೂ ಕೂಡಾ ಇಷ್ಟಪಡುತ್ತಾರೆ ಎಂಬುದು ಸೋನು ಸೂದ್ ವಿಚಾರದಲ್ಲಿ ನಿಜವಾಗಿದೆ. ತೆರೆ ಮೇಲೆ ವಿಲನ್ ಆಗಿ ನಟಿಸುವ ಸೋನು ಸೂದ್ ತಾನೊಬ್ಬ ರಿಯಲ್ ಹೀರೋ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಅವರು ಕಳೆದ 6 ತಿಂಗಳಲ್ಲಿ ಕಷ್ಟದಲ್ಲಿರುವವರಿಗೆ ಮಾಡಿದ ಸಹಾಯಕ್ಕೆ ಕೋಟ್ಯಂತರ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಸೋನು ಸೂದ್ ಅವರ ಈ ಕೆಲಸ ಪ್ರತಿ ಸೆಲಬ್ರಿಟಿಗಳಿಗೂ ಮಾದರಿ.ಇನ್ನು ಸೋನು ಸೂದ್​​​ಗೆ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಅಭಿಮಾನಿಯೊಬ್ಬರು ಸಿಮ್ ಕಾರ್ಡ್​ ಮೇಲೆ ಸೋನು ಸೂದ್ ಅವರ ಪೇಯ್ಟಿಂಗ್ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

Advertisement

Advertisement

ಅಷ್ಟೇ ಅಲ್ಲ, ಈ ಫೋಟೋವನ್ನು ಟ್ವಿಟ್ಟರ್​​ನಲ್ಲಿ ಸೋನು ಸೂದ್ ಅವರಿಗೆ ಟ್ಯಾಗ್ ಮಾಡಿ, ‘ಸರ್ ನೀವು ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೀರಿ, ನನ್ನ ಪೇಯ್ಟಿಂಗ್​​​ಗೆ ನಿಮ್ಮ ಅಭಿಪ್ರಾಯ ಏನು..?’ ಎಂದು ಕೇಳಿದ್ದಾರೆ. ಸೋನು ಸೂದ್ ಇದನ್ನು ನೋಡುತ್ತಾರೋ ಇಲ್ಲವೋ, ನೋಡಿದರೂ ನನಗೆ ರಿಪ್ಲೇ ಮಾಡುತ್ತಾರೋ ಇಲ್ಲವೋ ಎಂದುಕೊಂಡ ಅಭಿಮಾನಿಗೆ ಆಶ್ಚರ್ಯ ಕಾದಿತ್ತು. ಅಭಿಮಾನಿಯ ಸಂದೇಶಕ್ಕೆ ರಿಪ್ಲೇ ಮಾಡಿರುವ ಸೋನು ಸೂದ್ ಐ ವಿಂಕಿಂಗ್ ಎಮೋಜಿ ಹಾಕಿ ’10 ಜಿ ನೆಟ್​​ವರ್ಕ್’ ಎಂದು ರಿಪ್ಲೇ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗೆ ಬಹಳ ಖುಷಿಯಾಗಿದೆ.

Advertisement

ಸೋನು ಸೂದ್​​ ಸದ್ಯಕ್ಕೆ ಹೈದರಾಬಾದ್​​ನಲ್ಲಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಅಲ್ಲುಡು ಅದುರ್ಸ್’ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಸೋನು ಸೂದ್ ಭಾಗವಹಿಸಿದ್ದಾರೆ. ಬಹಳ ದಿನಗಳ ನಂತರ ಚಿತ್ರೀಕರಣಕ್ಕೆ ಬಂದ ಸೋನು ಸೂದ್ ಅವರನ್ನು ಚಿತ್ರತಂಡ ಚಪ್ಪಾಳೆ ಮೂಲಕ ಸ್ವಾಗತಿಸಿ ಸನ್ಮಾನಿಸಿದೆ. ಸೋನು ಸೂದ್ ಸಮಾಜ ಕಾರ್ಯಗಳಿಗೆ ಮಾರು ಹೋದ ಚಿತ್ರತಂಡ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಬಹುಭಾಷಾ ನಟ ಪ್ರಕಾಶ್ ರೈ ಸೋನು ಸೂದ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

Advertisement

ಸೋನು ಸೂದ್ ಕಳೆದ 6 ತಿಂಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಇರುವುದರಿಂದ ಯಾವುದೇ ಸ್ಕ್ರಿಪ್ಟ್​​​ಗಳನ್ನು ಅವರು ಓದಲು ಸಾಧ್ಯವಾಗಲಿಲ್ಲವಂತೆ. ಆದ್ದರಿಂದ ಅವರ ಟೇಬಲ್ ಮೇಲೆ ರಾಶಿ ರಾಶಿ ಸ್ಕ್ರಿಪ್ಟ್​​​​ಗಳಿವೆಯಂತೆ. ಇನ್ನೂ ಕೊರೊನಾ ಸಮಸ್ಯೆ ಕಡಿಮೆಯಾಗದ ಕಾರಣ ಜನರಿಗೆ ಸಹಾಯದ ಅವಶ್ಯಕತೆ ಇದೆ. ಆದ್ದರಿಂದ ಮೊದಲಿನಂತೆ ಚಿತ್ರೀಕರಣದಲ್ಲಿ ಭಾಗವಹಿಸಲು ಮತ್ತಷ್ಟು ಕಾಲಾವಕಾಶ ಕೊಡಿ ಎಂದು ಸೋನು ಸೂದ್ ನಿರ್ಮಾಪಕರ ಬಳಿ ಮನವಿ ಮಾಡಿದ್ದಾರಂತೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...