ಕೊರೊನಾ ಯುದ್ಧಕ್ಕಾಗಿ ತಮ್ಮ ಐಷಾರಾಮಿ ಹೋಟೆಲ್​​​​ ಬಿಟ್ಟುಕೊಟ್ಟ ಖ್ಯಾತ ನಟ

in Kannada News 62 views

ಕೊರೊನಾ ವಿರುದ್ಧ ಹೋರಾಡಲು ರಾಜ್ಯದ ಜನತೆ ಕಟಿಬದ್ಧರಾಗಿದ್ದಾರೆ. ಸಾಮಾನ್ಯ ಜನರು, ಸೆಲಬ್ರಿಟಿಗಳು ಸೇರಿದಂತೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಊಟ ಇಲ್ಲದವರಿಗೆ, ಪ್ರಾಣಿಗಳಿಗೆ ಅಡುಗೆ ಮಾಡಿ ಆಹಾರ ಹಂಚುತ್ತಿದ್ಧಾರೆ. ಕೆಲವು ಸೆಲಬ್ರಿಟಿಗಳು ಕೊರೊನಾ ಪರಿಹಾರ ನಿಧಿಗೆ ಹಣ ಸಹಾಯ ಮಾಡುತ್ತಿದ್ದಾರೆ.

Advertisement

 

Advertisement

Advertisement

 

Advertisement

ಇನ್ನು ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆ ಕೂಡಾ ಸಾಲುತ್ತಿಲ್ಲ. ಆ ಕಾರಣಕ್ಕೆ ಎಷ್ಟೋ ಮಂದಿ ತಮ್ಮ ಸ್ವಂತ ಸ್ಥಳವನ್ನು ಕೊರೊನಾ ರೋಗಿಗಳ ಉಪಚಾರಕ್ಕೆ ಬಿಟ್ಟುಕೊಡುತ್ತಿದ್ದಾರೆ. ಬಾಲಿವುಡ್​​ ನಟ ಶಾರುಖ್ ಖಾನ್ ಹಾಗೂ ಪತ್ನಿ ಗೌರಿ ಖಾನ್ ಅಗತ್ಯ ಸಾಮಾನುಗಳನ್ನು ನಿರ್ಗತಿಕರಿಗೆ ಹಂಚುತ್ತಿರುವುದಲ್ಲದೆ, ತಮ್ಮ ನಾಲ್ಕು ಅಂತಸ್ತಿನ ಕಚೇರಿ ಕಟ್ಟಡವನ್ನು ಕೊರೊನಾ ರೋಗಿಗಳ ಸೇವೆಗಾಗಿ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು. ಇದೀಗ ಮತ್ತೊಬ್ಬ ನಟ ಕೂಡಾ ತಮ್ಮ ಐಷಾರಾಮಿ ಹೋಟೆಲನ್ನು ಮುಂಬೈ ಮಹಾನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ಧಾರೆ.

 

 

ಬಾಲಿವುಡ್ ನಟ ಸೋನುಸೂದ್​ ಮುಂಬೈನಲ್ಲಿ ತಮ್ಮ ಒಡೆತನದ ಆರು ಅಂತಸ್ತಿನ ಐಷಾರಾಮಿ ಹೋಟೆಲನ್ನು ಕೊರೊನಾ ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರು, ನರ್ಸ್​ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೋನು ಸೂದ್​ ‘ಕೊರೊನಾ ವಿರುದ್ಧ ಹೋರಾಟದಲ್ಲಿ ನನ್ನದೊಂದು ಪುಟ್ಟ ಸಹಾಯ ಇದು, ಕೊರೊನಾ ರೋಗಿಗಳನ್ನು ಉಪಚರಿಸಲು ಮಹಾರಾಷ್ಟ್ರದ ಅನೇಕ ಕಡೆಗಳಿಂದ ವೈದ್ಯರು, ನರ್ಸ್​ಗಳು, ಇತರ ವೈದ್ಯಕೀಯ ಸಿಬ್ಬಂದಿಗಳು ಮುಂಬೈಗೆ ಬಂದಿದ್ದಾರೆ. ಅವರು ವಿಶ್ರಾಂತಿ ಹೊಂದಲು ನನ್ನ ಹೋಟೆಲನ್ನು ಬಿಟ್ಟುಕೊಡುತ್ತಿದ್ದೇನೆ ‘ ಎಂದು ಸೋನು ಸೂದ್ ಹೇಳಿದ್ಧಾರೆ. ಸೂನು ಸೂದ್ ಈ ಹಿಂದೆ ಕೇರಳ ನೆರೆ ಸಮಯದಲ್ಲಿ ಕೂಡಾ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಹಣದ ಸಹಾಯ ಮಾಡಿದ್ದರು. ಇದೀಗ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗಾಗಿ ತಮ್ಮ ಐಷಾರಾಮಿ ಹೋಟೆಲ್ ಬಿಟ್ಟುಕೊಟ್ಟಿರುವುದು ನಿಜಕ್ಕೂ ಸಂತೋಷದ ವಿಚಾರ.

 

 

ನಟ ಸೋನು ಸೂದ್ ಹಿಂದಿ ಮಾತ್ರವಲ್ಲ ತೆಲುಗು, ತಮಿಳು, ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ‘ಅರುಂಧತಿ ‘ ಚಿತ್ರದಲ್ಲಿ ಸೋನು ಸೂದ್ ನಟಿಸಿದ್ದ ಪಶುಪತಿ ಪಾತ್ರ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲಿ ಸುದೀಪ್ ಜೊತೆ ‘ವಿಷ್ಣುವರ್ಧನ ‘ ಚಿತ್ರದಲ್ಲಿ ಸೋನು ಸೂದ್ ನಟಿಸಿದ್ಧಾರೆ. ಅಲ್ಲದೆ ಕಳೆದ ವರ್ಷ ಬಿಡುಗಡೆಯಾದ ‘ಕುರುಕ್ಷೇತ್ರ ‘ ಚಿತ್ರದಲ್ಲಿ ಅರ್ಜುನನ ಪಾತ್ರದಲ್ಲಿ ನಟಿಸಿದ್ದರು.

Advertisement
Share this on...