ಸೋನು ಸೂದ್ ವಲಸೆ ಕಾರ್ಮಿಕರಿಗಾಗಿ ದಿನಕ್ಕೆಷ್ಟು ಖರ್ಚು ಮಾಡುತ್ತಿದ್ದಾರೆ ಗೊತ್ತೇ ?

in ಮನರಂಜನೆ 15 views

ನಟ ಸೋನು ಸೂದ್ ಇತ್ತೀಚಿನ ದಿನಗಳಲ್ಲಿ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಸೋನು ಸಿನಿಮಾಗಳಲ್ಲಿ ಖಳ ನಾಯಕನ ಪಾತ್ರಗಳನ್ನು ನಿರ್ವಹಿಸಿದರೂ, ನಿಜ ಜೀವನದಲ್ಲಿ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಅವರು ನಿರಂತರವಾಗಿ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ಕಳುಹಿಸುತ್ತಿದ್ದು, ಸರ್ಕಾರ ಮಾಡಬೇಕಾದ್ದನ್ನು ಇವರೇ ಮಾಡುತ್ತಿದ್ದಾರೆ. ಅಂದಹಾಗೆ ಸೋನು ಸೂದ್ ವಲಸೆ ಕಾರ್ಮಿಕರಿಗಾಗಿ ದಿನಕ್ಕೆಷ್ಟು ಖರ್ಚು ಮಾಡುತ್ತಿದ್ದಾರೆ ಗೊತ್ತೇ? ಇಲ್ಲಿದೆ ನೋಡಿ ವಿವರ.
ಸೋನು ಇದುವರೆಗೆ ಮುಂಬೈನಿಂದ ಸಾವಿರಾರು ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ. ಸೋನು ಈ ಕಾರ್ಮಿಕರಿಗೆ ಬಸ್ಸುಗಳನ್ನು ವ್ಯವಸ್ಥೆ ಮಾಡುವ ಮೂಲಕ ಎಲ್ಲರನ್ನೂ ಮನೆಗೆ ಕಳುಹಿಸಿದ್ದಾರೆ. ಇಷ್ಟು ಮಾತ್ರವಲ್ಲದೆ, ಎಲ್ಲಾ ಕಾರ್ಮಿಕರು ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸದಂತೆ ಸೋನು ಆ ಕಾರ್ಮಿಕರಿಗೆ ಆಹಾರವನ್ನು ಸಹ ಕಳುಹಿಸಿದ್ದಾರೆ.

Advertisement

 

Advertisement


ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸೋನು ವಲಸಿಗರ ದುಃಸ್ಥಿತಿಯ ಬಗ್ಗೆ ಮಾತನಾಡುತ್ತಾ, “ಅವರಿಗೆ ಸಹಾಯ ಮಾಡದಿದ್ದರೆ ನನಗೆ ರಾತ್ರಿ ನಿದ್ದೆ ಬರುವುದಿಲ್ಲ. ಪ್ರತಿಯೊಬ್ಬ ವಲಸಿಗನನ್ನು ಮನೆಗೆ ಕರೆತರುವವರೆಗೂ ತನ್ನ ಕೆಲಸವನ್ನು ಮುಂದುವರಿಸುವುದಾಗಿ” ಹೇಳಿದರು. ವಲಸಿಗರನ್ನು ಮನೆಗೆ ಕಳುಹಿಸಲು ಎಷ್ಟು ವೆಚ್ಚವಾಗುತ್ತಿದೆ ಎಂದು ಕೇಳಿದಾಗ, ಸೋನು 1.8 ಲಕ್ಷದಿಂದ 2 ಲಕ್ಷ ರೂ. ಇದು ವಲಸಿಗನು ಎಲ್ಲಿಗೆ ಹೋಗಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸೋನು ಸೂದ್ ತೆಲುಗು, ಹಿಂದಿ, ತಮಿಳು, ಕನ್ನಡ ಸೇರಿದಂತೆ ಪಂಜಾಬಿ ಚಲನಚಿತ್ರ ‘ಫ್ರಟರ್ನಿಟಿ’ಯಲ್ಲಿಯೂ ಕೆಲಸ ಮಾಡಿದ್ದಾರೆ. 2009 ರ ಅರುಂಧತಿ ಚಿತ್ರದಲ್ಲಿ ಪಶುಪತಿಯ ಪಾತ್ರಕ್ಕಾಗಿ ಹೆಸರುವಾಸಿಯಾಗಿರುವ ಸೋನು ಸೂದ್ ಸಲ್ಮಾನ್ ಖಾನ್ ಎದುರು 2010 ರ ಆಕ್ಷನ್ ಚಿತ್ರ ‘ದಬಾಂಗ್’ ಚಿತ್ರದಲ್ಲಿ ನಟಿಸಿದರು. ಇತ್ತೀಚಿನ ದಿನಗಳಲ್ಲಿ ಅವರು ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಹೀರೋ ಎಂದು ಸಾಬೀತುಪಡಿಸಿದ್ದಾರೆ.

Advertisement

 

Advertisement


ಲಾಕ್ ಡೌನ್ ಜಾರಿಯಾದಗಿನಿಂದಲೂ ಸೋನು ಸೂದ್ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅವರು ಈಗಾಗಲೇ ಕೊರೊನಾ ಚಾರಿಟಿಗೆ ದೇಣಿಗೆ ನೀಡಿದ್ದು, ಜುಹುದಲ್ಲಿನ ತಮ್ಮ ಹೋಟೆಲ್ ಅನ್ನು ವೈದ್ಯರು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಕೆಲಸಗಾರರಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಅವರು ವಲಸೆ ಕಾರ್ಮಿಕರು ಮನೆಗೆ ಹೋಗಲು ಸಹಾಯ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು 12000 ಕ್ಕೂ ಹೆಚ್ಚು ಕಾರ್ಮಿಕರನ್ನು ತಮ್ಮ ಮನೆಗಳಿಗೆ ಹೋಗಲು ಸಹಾಯ ಮಾಡಿದ್ದಾರೆ.

Advertisement
Share this on...