ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲೂ ಹೀರೋವಾದ ಸೋನು ಸೂದ್

in ಮನರಂಜನೆ/ಸಿನಿಮಾ 113 views

ಸೋನು ಸೂದ್ ಕನ್ನಡಿಗರಿಗೆ ಹೊಸಬರೇನಲ್ಲ. ತೆರೆಯ ಮೇಲೆ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್ ತಮ್ಮ ಸಮಾಜಸೇವೆಯಿಂದಲೇ ಈಗ ಸುದ್ದಿಯಲ್ಲಿದ್ದಾರೆ. ಹಿಂದಿ, ತಮಿಳು ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿರುವ ಮೂಲಕ ಚರ್ತುಭಾಷಾ ತಾರೆ ಎಂದು ಗುರುತಿಸಿಲ್ಲಡುವ ಸೋನು ಸೂದ್ ಬಣ್ಣದ ಲೋಕದಲ್ಲಿ ಖಳನಾಯಕನಾಗಿ ಮಿಂಚಿದ್ದೇ ಜಾಸ್ತಿ. ಅಂದ ಹಾಗೇ ಸೊಇನು ಸೂದ್ ಕೇವಲ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲಿಯೂ ಹೀರೋ ಆಗಿ ಮಿಂಚಿದ್ದಾರೆ. ಅದಕ್ಕೆ ಅವರು ಇತ್ತೀಚೆಗೆ ಮಾಡುತ್ತಿದ್ದ ಕೆಲಸವೇ ಉದಾಹರಣೆ. ಕೊರೊನಾ ವೈರಸ್ ಎಂಬ ಮಹಾಮಾರಿಯ ಹಾವಳಿ ಸಮಯದಲ್ಲಿ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು ಆ ಸಮಯದಲ್ಲಿ ಬಡವರಿಗೆ, ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಹೀರೋ ಅನಿಸಿಕೊಂಡಿದ್ದಾರೆ. ಅಂದ ಹಾಗೇ ಸೋನು ಸೂದ್ ಅವರು ಲಾಕ್ ಡೌನ್ ಸಮಯದಲ್ಲಿ ಮಾಡಿರುವುದು ಇದು ಒಂದೇ ಕೆಲಸವಲ್ಲ, ಬದಲಿಗೆ ಕೆಲಸದ ಸಲುವಾಗಿ ಊರಿನಿಂದ ವಲಸೆ ಬಂದಿದ್ದ ಕಾರ್ಮಿಕರಿಗೆ ಕೆಲಸ ಇಲ್ಲದೆ ಪರದಾಡುವಂತಾಯಿತು. ಇತ್ತ ಅವರಿಗೆ ಊರಿಗೂ ತೆರಳಲು ಸಾಧ್ಯವಾಗದಿದ್ದಾಗ ಸೋನು ಸೂದ್ ಊರಿಗೆ ತೆರಳಲು ಸಹಾಯ ಮಾಡಿದ್ದರು. ಜೊತೆಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟ್ಯಾಪ್ ಅತ್ಯಗತ್ಯ. ಆದರೆ ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದ ಮಕ್ಕಳಿಗೆ ಸ್ವತಃ ಅವರೇ ತೆಗೆದುಕೊಟ್ಟರು. ರೈತ ಕುಟುಂಬಕ್ಕೆ ಟ್ರಾಕ್ಟರ್ ಕೊಡಿಸಿದ್ದ ಸೋನು ಸೂದ್ ಅವರು ಮುಂಬೈ ಪೋಲಿಸರಿಗೆ ಫೇಸ್ ಶೀಲ್ಡ್ ಕೂಡಾ ನೀಡಿದ್ದರು.

Advertisement

Advertisement

ಹೀಗೆ ಕಳೆದ ಆರು ತಿಂಗಳಿನಲ್ಲಿ ಸೋನು ಸೂದ್ ಅವರು ಮಾಡಿರುವ ಕಾರ್ಯಗಳನ್ನು ಗುರುತಿಸಿದ ವಿಶ್ವಸಂಸ್ಥೆ ಇದೀಗ ಸೋನು ಅವರನ್ನು ರಿಯಲ್ ಹೀರೋ ಎಂದು ಪರಿಗಣಿಸಿದೆ. ವಿಶ್ವಸಂಸ್ಥೆಯ ಪ್ರತಿಷ್ಟಿತ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸಲಾಗಿದೆ.
” ನನ್ನ ಪ್ರಯತ್ನಗಳನ್ನು ಯುಎನ್ ಡಿಪಿ ಬೆಂಬಲಿಸಿದೆ. ಇದೊಂದು ಅಪರೂಪದ ಗೌರವ. ವಿಶ್ವಸಂಸ್ಥೆ ಮಾನ್ಯತೆ ತುಂಬಾ ವಿಶೇಷವಾದುದು. ಯಾವುದೇ ನಿರೀಕ್ಷೆಗಳಿಲ್ಲದೇ ನಾನು ಸೇವೆ ಮಾಡಿದ್ದೇನೆ. ಅದನ್ನು ಯುಎನ್ ಡಿಪಿ ಗುರುತಿಸಿದೆ. ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ತುಂಬಾ ಸಂತೋಷವಾಗಿದೆ” ಎಂದು ಸಂತಸದಿಂದ ಹೇಳಿರುವ ಸೋನು ಸೂದ್ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

Advertisement

Advertisement

1999ರಲ್ಲಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸೋನು ಸೂದ್ ಅವರು ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗಿನ ಅರುಂಧತಿ ಸಿನಿಮಾ ಸೋನು ಅವರ ಬಣ್ಣದ ಜೀವನಕ್ಕೆ ಬಹು ದೊಡ್ಡ ಬ್ರೇಕ್ ನೀಡಿದ ಸಿನಿಮಾ ಹೌದು. ಅರುಂಧತಿಯ ಪಾತ್ರಕ್ಕೆ ಆಂಧ್ರಪ್ರದೇಶ ರಾಜ್ಯದಿಂದ ಅತ್ಯುತ್ತಮ ಖಳನಾಯಕ ನಂದಿ ಪ್ರಶಸ್ತಿಯನ್ನು, ಜೊತೆಗೆ ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ ಪಡೆದರು. ಇದರೊಂದಿಗೆ ಕನ್ನಡದಲ್ಲಿ ಸುದೀಪ್ ಅವರ ವಿಷ್ಣುವರ್ಧನ ಚಿತ್ರದಲ್ಲಿ ಸೋನು ಸೂದ್ ಕಾಣಿಸಿಕೊಂಡಿದ್ದಾರೆ. ಮತ್ತು ಕುರುಕ್ಷೇತ್ರ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ.
– ಅಹಲ್ಯಾ

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...