ಅರಸು ಸಿನಿಮಾ ರೀತಿಯಲ್ಲೇ ಗಾರ್ಮೆಂಟ್ಸ್ ನಲ್ಲಿ1 ಸಾವಿರ ರೂ. ಗಾಗಿ ಕೆಲಸ ಮಾಡುತ್ತಿದ್ದರು ಈ ಟಾಪ್ ನಟ !

in Uncategorized 104 views

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮೋಹಕತಾರೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ಅಭಿನಯದ ಸೂಪರ್ ಡೂಪರ್ ಹಿಟ್ ಸಿನಿಮಾ ಅರಸು, ಕನ್ನಡ ಸಿನಿ ಪ್ರೇಕ್ಷಕರಿಗೆ ಬಹಳ ಅಚ್ಚು ಮೆಚ್ಚಾದಂತಹ ಸಿನಿಮಾ. ದೂರದರ್ಶನದಲ್ಲಿ ಪ್ರಸಾರವಾದರೆ ಇಂದಿಗೂ ಕೂಡ ಮನೆಮಂದಿಯೆಲ್ಲ ಕುಳಿತು ನೋಡುತ್ತಾರೆ. ಆಗರ್ಭ ಶ್ರೀಮಂತರಾದ ಶಿವರಾಜ್,
ತನ್ನ ಮ್ಯಾನೇಜರ್ ಮಗಳಾದ ಶ್ರುತಿಯನ್ನು ಪ್ರೀತಿಸುತ್ತಾನೆ. ಆದರೆ ಆಕೆ ಶ್ರೀಮಂತ ವ್ಯಕ್ತಿಯ ಪ್ರೀತಿಯನ್ನು ನಿರಾಕರಿಸಿ ಬಿಡುತ್ತಾಳೆ. ಯಾಕೆ ಪ್ರೀತಿಸುವುದಿಲ್ಲ ಎಂದು ಶಿವರಾಜ್ ಪ್ರಶ್ನಿಸಿದಾಗ, ನಿನಗೆ ಹಣದ ಮೌಲ್ಯ ತಿಳಿದಿಲ್ಲ, ನೀನು ಯಾವುದೇ ಪ್ರಭಾವ ಬಳಸದೇ ತಿಂಗಳಿಗೆ ಕೇವಲ ಐದು ಸಾವಿರ ರೂಪಾಯಿ ದುಡಿದು ತೋರಿಸು ಎಂದು ಸವಾಲು ಹಾಕುತ್ತಾಳೆ. ಅದಕ್ಕೆ ಆತ ಒಪ್ಪಿಕೊಂಡು ಮನೆಯನ್ನು ತ್ಯಜಿಸಿ ಐಶುವಿನ ಸಹಾಯದಿಂದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ “ಅರಸು” ಸಿನಿಮಾದ ಕಥೆ! ಹೀಗೆ ರೀಲ್ ನಲ್ಲಿ ನೋಡಿದ ಕಥೆ, ನಿಜ ಜೀವನದಲ್ಲಿ ಹೀಗೆ ನಡೆದಿರಬಹುದಲ್ವಾ ಎಂಬ ಕುತೂಹಲವಿದ್ದರೆ ನೀವು ಈ ನಟನ ಬಗ್ಗೆ ತಿಳಿದುಕೊಳ್ಳಲೇ ಬೇಕು. ರೀಲ್ ನಲ್ಲಾಗಿದ್ದು, ಈ ನಟನ ಬದುಕಿನಲ್ಲಿ ರಿಯಲ್ ಆಗಿ ನಡೆದಿದೆ. ಈ ನಟ ತನ್ನ ತಂದೆಯ ಹೆಸರು ಬಳಸದೆ ಒಂದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಯಾರು ಎಂಬುದನ್ನು ತಿಳಿದುಕೊಳ್ಳಲು ಮುಂದೇ ಓದಿ..

Advertisement

 

Advertisement

Advertisement

60ರ ದಶಕದಲ್ಲಿಯೇ ಈ ನಟನ ತಂದೆ ಚಿತ್ರರಂಗದ ಖ್ಯಾತ ನಟರಾಗಿದ್ದವರು. ಆದರೆ ತನ್ನ ತಂದೆಯ ಹೆಸರು ಬಳಸದೇ ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂಬ ಛಲ ತೊಟ್ಟಿದ್ದ ಅವರ ಮಗ ಮೊದಮೊದಲು ಒಂದು ವರ್ಷಗಳ ಕಾಲ ಗಾರ್ಮೆಂಟ್ ಎಕ್ಸ್ ಫೋರ್ಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದರು. ಹೀಗೆ ಮೊದಲ ತಿಂಗಳು ಸಿಕ್ಕಿದ ಒಂದು ಸಾವಿರ ರೂಪಾಯಿ ಸಂಬಳದಲ್ಲಿ ಈ ಯುವಕ ತನ್ನ ತಾಯಿಗೆ ಸೀರೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ನಟರ ಮಗ ಎಂಬುದಾಗಲಿ, ಮುಂದೊಂದು ದಿನ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗುತ್ತಾನೆ ಎಂದು ಜೊತೆಗಿರುವವರು ಊಹೆ ಕೂಡ ಮಾಡಿರಲಲ್ಲ. ಈ ಕಲಾಕಾರ ಬೇರೆ ಯಾರೂ ಅಲ್ಲ ಶರವಣ ಅಲಿಯಾಸ್ ಸೂರ್ಯ..

Advertisement

ಶರವಣ ಅವರು ೧೯೯೫ ರಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿ ಖ್ಯಾತ ನಿರ್ದೇಶಕ ವಸಂತ್ ಅವರು ತಮ್ಮ ಮುಂದಿನ ಸಿನಿಮಾ ಆಸೈ ಸಿನಿಮಾದಲ್ಲಿ ಪ್ರಮುಖ ಪಾತ್ರ ಕೊಡುವುದಾಗಿ ದೊಡ್ಡ ಆಫರ್ ನೀಡಿದ್ದರು. ಆದರೆ ಅದೇನಾಯ್ತೋ ಏನೋ ಸರವಣ ಅವರು ತನಗೆ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಆ ಅಫರ್  ನಿರಾಕರಿಸಿಬಿಟ್ಟಿದ್ದ. ಆದರೆ 1997ರಲ್ಲಿ ಅದೇ ವಸಂತ ಅವರ ನೇರುಕ್ಕು ನೇರ್ ಎಂಬ ಸಿನಿಮಾವನ್ನು ಮಣಿರತ್ನಂ ಪ್ರೊಡ್ಯೂಸ್ ಮಾಡಿದ್ದರು.ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಲು 22ರ ಹರೆಯದ ಸರವಣ ಒಪ್ಪಿಕೊಂಡರು.

ಇನ್ನು ತಮಿಳು ಚಿತ್ರರಂಗದಲ್ಲಿ ಮೊದಲೆ ಸರವಣನನ್ ಎಂಬ ಹೆಸರು ಖ್ಯಾತಿಯಾಗಿದ್ದ ಕಾರಣ ಸೂರ್ಯ ಎಂದು ಮಣಿರತ್ನಂ ಅವರು ನಾಮಕರಣ ಮಾಡುತ್ತಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಸಹ ನಟನಾಗಿ ವಿಜಯ್ ಕೂಡಾ ಅಭಿನಯಿಸಿದ್ದರು. ಇದೀಗ ವಿಜಯ ದಳಪತಿ ವಿಜಯ್ ಆಗಿ ಕಾಲಿವುಡ್ ನ ಬಹು ಬೇಡಿಕೆಯ ನಟರಾಗಿದ್ದಾರೆ!ಇನ್ನು ಬೆಳ್ಳಿಪರದೆಯ ಮೇಲೆ ಸೂರ್ಯ ಅವರ ಹಾದಿ ಸುಗಮವಾಗಿರಲಿಲ್ಲ. ಯಾಕೆಂದರೆ ಆರಂಭದಲ್ಲಿ ಅವರ ಹಲವು ಸಿನಿಮಾಗಳು ಯಶಸ್ಸು ಕಾಣಲೇ ಇಲ್ಲ. ಅಷ್ಟೇ ಅಲ್ಲದೇ ವಿಶ್ವಾಸದ ಕೊರತೆ, ಸಂಭಾಷಣೆ ನೆನಪಿನಲ್ಲಿ ಇಟ್ಟುಕೊಳ್ಳುವುದು,ಫೈಟಿಂಗ್ ಹಾಗೂ ಡ್ಯಾನ್ಸ್ ಇವೆಲ್ಲವೂ ಕೂಡ ಸೂರ್ಯ ಅವರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ನಟ ಸೂರ್ಯನಿಗೆ ಆಪ್ತ ಸಲಹೆ ಕೊಟ್ಟಿದ್ದು ನಟ, ಖ್ಯಾತ ವಿಲನ್ ಪಾತ್ರದಲ್ಲಿಹೆಸರಾಗಿದ್ದ ರಘುವರನ್ ಅವರು. 2001ರಲ್ಲಿ ಸಿದ್ದಿಖಿ ನಿರ್ದೇಶನದ ಫ್ರೆಂಡ್ಸ್ ಸಿನಿಮಾದಲ್ಲಿ ಸೂರ್ಯ ಎರಡನೇ ಹೀರೋ ಆಗಿ ನಟಿಸಿದ್ದರು. ಸಹ ನಟನಾಗಿ ವಿಜಯ್ ಅವರು ಕೂಡ ಅಭಿನಯಿಸಿದ್ದರು.

 


ನಟ ಸೂರ್ಯ ಅವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಸಿನಿಮಾವೆಂದರೆ 2001ರಲ್ಲಿ ಬಿಡುಗಡೆಯಾಗಿದ್ದ ನಂದಾ ಸಿನಿಮಾ. ಈ ಸಿನಿಮಾದ ಅಭಿನಯಕ್ಕೆ ತಮಿಳುನಾಡು ರಾಜ್ಯ ಪ್ರಶಸ್ತಿ ಕೂಡಾ ದೊರೆಯುತ್ತದೆ. ಇನ್ನು ಅವರ ಸಿನಿ ಜೀವನದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಕಾಖಾ ಸಿನಿಮಾ. ನಂತರ ಸೂರ್ಯ ಹಿಂತಿರುಗಿ ನೋಡಲೇ ಇಲ್ಲಾ.ಪಿತಾಮಗನ್, ಗಜನಿ, ಆರು, ಸಿಲ್ಲೂನು ಓರು ಕಾದಲ್, ವೇಲ್, ಆಯನ್, ಆಂಡವನ್, ಏಳಂ ಅರಿವು, ಸಿಂಗಂ ಹೀಗೆ ಸಾಲು, ಸಾಲು ಸೂಪರ್ ಹಿಟ್ ಸಿನಿಮಾ ಕೊಡುತ್ತಲೇ ಬಂದರು.

ಹೀಗೆ ಸಿನಿಮಾಗಳಲ್ಲಿ ನಿರತರಾಗಿದ್ದ ಸೂರ್ಯ ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ಇವರಿಬ್ಬರ ಒಡನಾಟ ಬರೋಬ್ಬರಿ ಏಳು ವರ್ಷಗಳ ಹಳೆಯದಾಗಿತ್ತು. ನಂತರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2006ರಲ್ಲಿ ವಿವಾಹವಾಗುತ್ತಾರೆ. ಈ ದಂಪತಿಗೆ ದಿಯಾ ಎಂಬ ಪುತ್ರಿ, ದೇವ್ ಎಂಬ ಪುತ್ರನಿದ್ದಾನೆ.

Advertisement
Share this on...