ಗರ್ಭಿಣಿ ಆಗಿದ್ದಾಗ ಸಾವನ್ನಪ್ಪಿದ ಕನ್ನಡದ ಟಾಪ್ ನಟಿ ಯಾರು ಗೊತ್ತಾ..?

in ಕನ್ನಡ ಮಾಹಿತಿ/ಸಿನಿಮಾ 342 views

ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಈ ನಟಿಯ ಸಾಂಸಾರಿಕ ಬದುಕು ಆಗ ತಾನೆ ಸಣ್ಣಗೆ ತೆರೆಯುತ್ತಿತ್ತು.  7 ತಿಂಗಳ ತುಂಬು ಗರ್ಭಿಣಿಯಾಗಿದ್ದ ಈಕೆ ತಾಯ್ತನದ ಖುಷಿಯಲ್ಲಿದ್ದರು. ತನ್ನ ಪುಟ್ಟ ಕಂದಮ್ಮನ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದರು. ಆ ದೇವರಿಗೆ ಈಕೆಯ ಬಗ್ಗೆ ಚೂರು ಕನಿಕರ ಇಲ್ಲದಾಯಿತು.  ದೇವರ ಆಟ ಬಲ್ಲವರಾರು ಎಂಬಂತೆ ಈಕೆಯ ಆಟ ಮುಗಿಯುವ ಹಂತಕ್ಕೆ ಬಂದು ತಲುಪಿತ್ತು. ಕ್ಷಣ ಮಾತ್ರದಲ್ಲಿ ಎರಡು ಜೀವ ಛಿದ್ರ ಛಿದ್ರವಾಯಿತು. ತನ್ನ ತಾಯಿಯ ಜೊತೆಗೆ ಇನ್ನೂ ಪ್ರಪಂಚವನ್ನೇ ನೋಡದ ಸಣ್ಣ ಜೀವವೊಂದು ಹೊಟ್ಟೆಯಲ್ಲಿಯೇ ಸುಟ್ಟು ಬೂದಿಯಾಯಿತು. ಈಕೆಗೆ ಕೇವಲ 31 ವರ್ಷ. ಆದಾಗಲೇ ಚಿತ್ರರಂಗದಲ್ಲಿ ಸಾಕೆನ್ನುವಷ್ಟು ಸಾಧಿಸಿದ್ದರು. ಗಂಡ ಮನೆ ಮಕ್ಕಳು ಎಂದು ತನ್ನದೇ ಆದ ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡು ಎಲ್ಲರಂತೆ ಬದುಕಲು ಯೋಚಿಸಿದ್ದರು. ಆದರೆ ಕ್ರೂರ ವಿಧಿಗೆ ಯಾವುದು ಇಷ್ಟವಿರಲಿಲ್ಲ. ಸಾವು ಈಕೆಗೆ ತುಂಬಾ ಸುಲಭವಾಗಿ ದಕ್ಕಿತು. ಈಕೆಯ ದುರಂತ ಸಾವು ಕಂಡು ಹದಿನೈದು ವರ್ಷಗಳೇ ಕಳೆದಿವೆ. ತನ್ನ ಸಣ್ಣ ವಯಸ್ಸಿಗೆ ಭೀಕರ ದುರಂತದಲ್ಲಿ ಅಂತ್ಯ ಕಂಡ ಈಕೆ ಮತ್ತ್ಯಾರು ಅಲ್ಲ. ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ಸೌಂದರ್ಯ.

Advertisement

Advertisement

2004ರ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರಕ್ಕಾಗಿ ಆಂಧ್ರಪ್ರದೇಶಕ್ಕೆ ಹೆಲಿಕ್ಯಾಪ್ಟರ್ ನಲ್ಲಿ ತೆರಳಿದ್ದರು. ಈಕೆಗೆ ರಾಜಕೀಯಕ್ಕೆ ಬರಲು ಯಾವುದೇ ಆಸಕ್ತಿ ಇರಲಿಲ್ಲ. ಆದರೆ ಸಿನಿಮಾ ನಟಿ ಎಂಬ ಕಾರಣಕ್ಕೆ ಪ್ರಚಾರಕ್ಕೆ ಹೋಗುತ್ತಿದ್ದರು. 2003 ರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಜಿ.ಎಸ್ ರಘು ಎಂಬುವವರನ್ನು ಮದುವೆಯಾಗಿದ್ದ ಸೌಂದರ್ಯ 7 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಹೆಲಿಕ್ಯಾಪ್ಟರ್ ನಲ್ಲಿ ನಟಿ ಸೌಂದರ್ಯರವರ ಸಹೋದರ ಅಮರ್ ನಾಥ್ ಕೂಡ ಜೊತೆಗಿದ್ದರು.

Advertisement

Advertisement

ಇದೇ ಸಮಯದಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಸಣ್ಣ ದೋಷ ಉಂಟಾಗಿ ಯಲಹಂಕ ಬಳಿಯ ಜಕ್ಕೂರಿನಲ್ಲಿ ಸೌಂದರ್ಯರವರು ಇದ್ದ ಹೆಲಿಕ್ಯಾಪ್ಟರ್ ಕ್ಷಣ ಮಾತ್ರದಲ್ಲಿ ಪತನವಾಯಿತು. 7 ತಿಂಗಳ ತುಂಬು ಗರ್ಭಿಣಿಯಾಗಿದ್ದ ಸೌಂದರ್ಯರವರ ಸಾವು ಎಲ್ಲರಿಗೂ ತಡೆಯಲಾಗದಷ್ಟು ನೋವನ್ನು ತಂದಿತ್ತು. ಪ್ರತಿಭಾನ್ವಿತ ನಟಿ ಸೌಂದರ್ಯರವರ ಸಾವು ಇಂದಿಗೂ ಎಲ್ಲರನ್ನು ಕಾಡುತ್ತಿದೆ.

– ಸುಷ್ಮಿತಾ

Advertisement
Share this on...