ಹೆಂಡತಿಗೆ ಹೆದರಿ ಬೆವರು ಕಿತ್ಕೊಂಡ್ ಬರೋ ಹಾಗೆ ಮನೆ ಕೆಲಸ ಮಾಡ್ತಿದ್ದಾರೆ ಕನ್ನಡದ ಈ ನಟ…!

in ಮನರಂಜನೆ 25 views

ಉಗ್ರಂ ಖ್ಯಾತಿಯ ಶ್ರೀಮುರಳಿ ಮನೆಯಲ್ಲಿ ಪಡಬಾರದ ಕಷ್ಟಪಡುತ್ತಿದ್ದಾರೆ. ಹೋಂ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇ ಬೇಕು ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅನ್ನುತ್ತಾರಂತೆ. ಅದೇನ್ ರೂಲ್ಸು, ಯಾಕಿಷ್ಟು ಕಠಿಣ ಅಂತೀರಾ..?ಲಾಕ್ ಡೌನ್ ದಿನಗಳು ಹಲವು ನಟ-ನಟಿಯರಿಗೆ ಸಂತಸ ಕೊಟ್ಟಿದ್ದು ಕುಟುಂಬದೊಂದಿಗೆ ಕಾಲ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದನ್ನ ಸದುಪಯೋಗ ಪಡಿಸಿಕೊಳ್ಳುತ್ತಿರುವ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಬಹುತೇಕ ನಟರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಂತಸದಿಂದ ಕಾಲಕಳೆಯುತ್ತಿದ್ದಾರೆ. ಹತ್ತು ಹಲವು ಚಟುವಟಿಕೆಗಳು ತಮ್ಮ ಹವ್ಯಾಸಗಳು ಸೇರಿದಂತೆ ಮನೆಗೆಲಸಗಳನ್ನ ಕೂಡ ಅಷ್ಟೇ ಇಷ್ಟಪಟ್ಟು ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಶ್ರೀಮುರಳಿಯವರಿಗೆ ಈ ಸಂಕಷ್ಟ ಎದುರಾಗಿದ್ದು ಹೋಂ ರೂಲ್ಸ್ ಫಾಲೋ ಮಾಡಲೇಬೇಕಾಗಿದೆ. ಸಿನಿಮಾ ಕೆಲಸಗಳಲ್ಲಿ ಸದಾ ಬಿಜಿ಼ಯಾಗಿರುತ್ತಿದ್ದ ಶ್ರೀಮುರುಳಿಯವರಿಗೆ ಇದೀಗ ಪತ್ನಿ ಮಕ್ಕಳು ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದೆ. ಇದನ್ನ ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ. ಇದರೊಂದಿಗೆ ಕಷ್ಟವನ್ನು ಪಡುತ್ತಿದ್ದಾರೆ.

Advertisement

 

Advertisement

 

Advertisement

Advertisement

 

ತಾವು ಕಷ್ಟ ಪಡುತ್ತಿರುವುದುರ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಸದ್ಯಕ್ಕೆ ಹೋಂ ರೂಲ್ಸ್, ಊಟ ಬೇಕು ಅಂದ್ರೆ ಪಾತ್ರೆ ತೊಳೆಯಲೇ ಬೇಕು ಇಲ್ಲ ಅಂದ್ರೆ ನನ್ನ ಹೆಂಡತಿ ವಿದ್ಯಾ ಗುರ್ ಅಂತಾರೆ. ಆದರೆ ಕೆಲಸದಿಂದ ಬೆವರು ಕಿತ್ಕೊಂಡು ಬರುತ್ತೆ ಅಂತ ಪಾತ್ರೆ ತೊಳೆಯುವ ಫೋಟೋ ಹಾಕಿದ್ದಾರೆ. ಈ ಮೂಲಕ ಮನೆ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.ಶ್ರೀಮುರುಳಿ ಪೋಸ್ಟ್ ಗೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು ಎಂಜಾಯ್ ಬ್ರದರ್, ಅತ್ತಿಗೆ ರಾಕ್ ಬ್ರದರ್ ಶಾಕ್ ಅಂತ ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ ಕ್ಯೂಟ್ ಕಪಲ್ ಬೆಸ್ಟ್ ಟು ಗೆದರ್ ಅಂತ ಕಾಮೆಂಟ್ ಮಾಡಿದ್ದಾರೆ. ಹೀಗೆ ಅವರ ಅಭಿಮಾನಿಗಳು ಮನೆಕೆಲಸ ಮಾಡುತ್ತಿರುವುದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ಶ್ರೀ ಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದು ಶ್ರೀಮುರುಳಿ ಶೂಟಿಂಗ್ ನಲ್ಲಿ ಬೀಜಿ಼ಯಾಗಿದ್ದರು. ಚಿತ್ರತಂಡ ಉತ್ತರಪ್ರದೇಶದಲ್ಲಿ ಅಘೋರಿಗಳ ಮಧ್ಯೆ ಶೂಟಿಂಗು ತೆರಳಿತ್ತು.

ನಂತರ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಬಗ್ಗೆಯೂ ಸಹ ಕುತೂಹಲ ಮೂಡಿತ್ತು. ಆಶಿಕಾ ರಂಗನಾಥ್ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆಬಿತ್ತು. ಚಿತ್ರೀಕರಣ ಭರದಿಂದ ಸಾಗುತ್ತಿರುವಾಗಲೇ ಕೊರೋನಾ ಕಾರಣದಿಂದ ಲಾಕ್ ಡೌನ್ ಜಾರಿಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ಆ ಸಮಯವನ್ನು ಎಂಜಾಯ್ ಮಾಡುತ್ತಿರುವ ಶ್ರೀಮುರುಳಿ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.

– ಸುಷ್ಮಿತಾ

Advertisement
Share this on...