ಶ್ರೀ ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಈ ಮಾಹಿತಿಗಳನ್ನು ತಿಳಿದುಕೊಳ್ಳಿ..! ಭಕ್ತಿಯಿಂದ ಶೇರ್ ಮಾಡಿ..

in ಕನ್ನಡ ಮಾಹಿತಿ 549 views

ಶ್ರೀ ಕ್ಷೇತ್ರ ಸತ್ಯ ಧರ್ಮ ನಿಷ್ಠೆಗೆ ಹೆಸರುವಾಸಿ. ಇದು ಕರ್ನಾಟಕದ ಎರಡನೇ ಶ್ರೀಮಂತ ದೇವಾಲಯ. ಇಲ್ಲಿ ಹರಿಯುವ ನದಿಯ ಸ್ನಾನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಅದೇ ನಮ್ಮ ದಕ್ಷಿಣ ಭಾರತದ ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳ. ಈ ಕ್ಷೇತ್ರಕ್ಕೆ ಸುಮಾರು  ಎಂಟು ಶತಮಾನಗಳ ಇತಿಹಾಸವಿದೆ.  ಈ ಕ್ಷೇತ್ರದಲ್ಲಿ ಶ್ರೀ ಮಂಜುನಾಥೇಶ್ವರ ಸ್ವಾಮಿ ನೆಲೆಸಿದ್ದಾರೆ. ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವುದಾದರೆ ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ತುಂಬಾ ಸೂಕ್ತವಾದ ಸಮಯ. ಇಲ್ಲಿ ತಂಗಲು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ  ಕೋಣೆಗಳು ದೊರೆಯುತ್ತವೆ. ವೈಶಾಲಿ, ನೇತ್ರಾವತಿ, ಶರಾವತಿ, ಗಾಯತ್ರಿ, ಸಾಕೇತ, ಗಂಗೋತ್ರಿ, ಇನ್ನು ಮುಂತಾದ ವಸತಿ ಗೃಹಗಳು ಇವೆ . ಈ  ವಸತಿ ಗೃಹಗಳ ಬೆಲೆ ಅತಿ ಕಡಿಮೆ ದರದಲ್ಲಿದ್ದು ಸಾಮಾನ್ಯ ಜನರಿಗೂ ಕೂಡ ಕೈಗೆಟುಕುವಂತಿದೆ ಅಲ್ಲದೇ ಅನೇಕ ಖಾಸಗಿ ವಸತಿ ಗೃಹಗಳು ಕೂಡ ಇದೆ.

Advertisement

 

Advertisement

Advertisement

ಧರ್ಮಸ್ಥಳಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೂ ಕೂಡ ಉಚಿತ ಭೋಜನದ ವ್ಯವಸ್ಥೆ ಕೂಡ ಇಲ್ಲಿ ಇದೆ. ಇದಕ್ಕಾಗಿ ಸುಸರ್ಜಿತವಾದ  ವ್ಯವಸ್ಥೆಯನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನ  ಛತ್ರವಿದೆ. ಇಲ್ಲಿನ ಪ್ರಸಾದವನ್ನು ಸ್ವೀಕರಿಸುವುದು ಭಕ್ತಾದಿಗಳಿಗೆ ಮಹದಾನಂದ ಮಹಾಭಾಗ್ಯ ಎಂದೆ ಹೇಳಬಹುದು.
ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿ ಬರುತ್ತದೆ. ಧರ್ಮಸ್ಥಳವು ಬೆಂಗಳೂರಿನಿಂದ ಸುಮಾರು ಮುನ್ನೂರು ಕಿಲೋಮೀಟರ್ ದೂರದಲ್ಲಿದೆ. ಮಂಗಳೂರಿನಿಂದ 76 ಕಿಲೋಮೀಟರ್ ದೂರದಲ್ಲಿದೆ. ಹಾಗೆಯೇ ಹುಬ್ಬಳ್ಳಿ ಧಾರವಾಡದಿಂದ ಮುನ್ನೂರ  ಐವತ್ತು ಕಿಲೋಮೀಟರ್ ದೂರದಲ್ಲಿದೆ . ರೈಲಿನಲ್ಲಿ ಪ್ರಯಾಣಿಸುವುದಾದರೆ ಕುಕ್ಕೆ ಸುಬ್ರಹ್ಮಣ್ಯಕ್ಕೆ  ರೈಲಿನಲ್ಲಿ ಪ್ರಯಾಣಿಸಿ ಆ ನಂತರ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಬಹುದು.  ಮೊದಲು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಪೂಜೆಯನ್ನು ಮಾಡಿಸಿದ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡಿಸಬೇಕು  ಕುಕ್ಕೆಯಲ್ಲಿ ಪೂಜೆ ಸಲ್ಲಿಸಿದ ನಂತರ ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಬಾರದೆಂಬ ಪ್ರತೀತಿ ಇದೆ.

Advertisement

 

ಇಲ್ಲಿನ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು  ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳವು ದಾನ ಧರ್ಮಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾರೆ . ಇಲ್ಲಿನಾವು ದೇವಾಲಯದ ಗರ್ಭಗುಡಿಯಲ್ಲಿ ಪಾರ್ವತಿ ಮಹಾ ಗಣಪತಿಯ ಮೂರ್ತಿಗಳನ್ನು ಕಾಣಬಹುದು. ಈ ದೇವಾಲಯವನ್ನು ಕೇರಳದ ದೇವಸ್ಥಾನದ ಶೈಲಿಯಲ್ಲಿ ಕಟ್ಟಲಾಗಿದೆ . ಇಲ್ಲಿನ ವಿಶೇಷವೇನೆಂದರೆ ಅದು ಜೈನ ಸಮುದಾಯದವರಿಂದ ಈ ದೇವಸ್ಥಾನವು ನಡೆಯಲ್ಪಡುತ್ತದೆ. ಹಿಂದಿನ ಕಾಲದಿಂದಲೂ ಹೆಗ್ಗಡೆ ಮನೆತನದವರು ಧರ್ಮಗುರುಗಳಾಗಿ   ದೇವರಿಗೆ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ .

 

ಧರ್ಮಸ್ಥಳದ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಪುರಾತನ ಕಾಲದ ಕಾರುಗಳು ,ಕತ್ತಿ ಗುರಾಣಿಗಳು, ಸಂಗೀತ ಸಲಕರಣೆಗಳನ್ನು ನಾವು ಕಾಣಬಹುದು . ಈ ವಸ್ತು ಸಂಗ್ರಹಾಲಯದ ಹೊರಗಡೆ  ದೊಡ್ಡ ದೇವಾಲಯ ರಥಗಳ ಸಂಗ್ರಹವೂ ಇದೆ. ಇಲ್ಲಿ ದೇಶ ಅಲ್ಲದೆ ವಿದೇಶಗಳಿಂದ ಸಂಗ್ರಹಿಸಿದ ಅತ್ಯದ್ಭುತವಾದಂತಹ  ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ದಕ್ಷಿಣ ಭಾರತದಲ್ಲೇ ಅತ್ಯದ್ಭುತವಾದ ಮ್ಯೂಸಿಯಂ ಎಂದು ಇದನ್ನು ಕರೆಯಲಾಗುತ್ತದೆ .

 

ಇಲ್ಲಿನ ಮತ್ತೊಂದು ವಿಶೇಷವೆಂದರೆ ಅದು ಬಾಹುಬಲಿ ದೇವಾಲಯ .  ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೇಲೆ ಮೂವತ್ತು ಒಂಬತ್ತು ಅಡಿ ಎತ್ತರವಿರುವ ಬಾಹುಬಲಿ ವಿಗ್ರಹವಿದೆ .1973 ರಲ್ಲಿ ರೆಂಜಾಲಾ ಗೋಪಾಲಕೃಷ್ಣ ಶೆನಾಯ್  ಎಂಬುವರು ಕೆತ್ತಿದರು . ಬಾಹುಬಲಿ ಜೈನರ ತ್ಯಾಗ  ಮತ್ತು ನಿಸ್ವಾರ್ಥತೆಯ ವ್ಯಕ್ತಿತ್ವ ಎಂದು  ಗೌರವಿಸಲಾಗುತ್ತದೆ. ನೇತ್ರಾವತಿ ನದಿ ಮಲೆನಾಡಿನ ಒಂದು ಪವಿತ್ರವಾದ ನದಿಯಾಗಿದೆ.

 


ಈ ನದಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ ನಂತರ ಮಂಜುನಾಥನ ದರ್ಶನವನ್ನು ಭಕ್ತರು ಪಡೆಯುತ್ತಾರೆ. ಈ ಮೂಲಕ ಜನರು ಸುಖ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳುತ್ತಾರೆ .ಅಲ್ಲದೆ ಇಲ್ಲಿ  ಅಪ್ಪಣ್ಣ ಬೆಟ್ಟವು ಕೂಡ ಇದೇ ಇಲ್ಲಿಗೆ  ಮಹಿಳೆಯರು ಹೋಗುವಂತಿಲ್ಲ, ಪುರುಷರು ಮಾತ್ರ ಹೋಗುವ ಪ್ರತೀತಿ ಇದೆ.

Advertisement
Share this on...