13ನೇ ವಯಸ್ಸಿನಲ್ಲೇ ಸೂಪರ್​​ ಸ್ಟಾರ್ ತಾಯಿ ಪಾತ್ರದಲ್ಲಿ ನಟಿಸಿದ್ದ ಅತಿಲೋಕ ಸುಂದರಿ…ಯಾವ ಚಿತ್ರ ಅದು..?

in ಮನರಂಜನೆ/ಸಿನಿಮಾ 125 views

‘ಕಂದನ್ ಕರುಣೈ’ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ಇಂದು ಸಿನಿರಸಿಕರ ಮನಸ್ಸಲ್ಲಿ ಅತಿಲೋಕ ಸುಂದರಿಯಾಗಿ ನೆಲೆಸಿದ್ದಾರೆ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ಈ ಸುಂದರಿ ತಮ್ಮ ಛಾಪು ಮೂಡಿಸಿದ್ದಾರೆ. ‘ಭಕ್ತ ಕುಂಬಾರ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಇವರು, ಹೆಣ್ಣು ಸಂಸಾರದ ಕಣ್ಣು, ಬಾಲ ಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಹಾಗೂ ಪ್ರಿಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ.ಬಹುಶ: ಶ್ರೀದೇವಿ ಅವರ ಸಮಕಾಲೀನ ಎಲ್ಲಾ ನಟರೊಂದಿಗೆ ನಟಿಸಿದ್ದಾರೆ. ಅವರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಇಬ್ಬರು. ರಜನಿ ಹಾಗೂ ಶ್ರೀದೇವಿ ಜೋಡಿಯಾಗಿ ನಟಿಸಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಾಮ್ ರಾಬರ್ಟ್​ ರಹೀಂ, ಪ್ರಿಯಾ, ಗಾಯತ್ರಿ, ಚಾಲ್​​​ಬಾಜ್, ಮಹಾಗುರು, ಪೋಕಿರಿ ರಾಜ, ಜಾನಿ ಸೇರಿದಂತೆ ಇವರಿಬ್ಬರೂ ಅನೇಕ ಸಿನಿಮಾಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಆದರೆ ಒಂದು ಸಿನಿಮಾದಲ್ಲಿ ಶ್ರೀದೇವಿ ಸೂಪರ್ ಸ್ಟಾರ್ ರಜನೀಕಾಂತ್ ಅವರ ತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆಗ ಶ್ರೀದೇವಿಗೆ ಕೇವಲ 13 ವರ್ಷ ವಯಸ್ಸು.

Advertisement

Advertisement

ತಮಿಳಿನ ‘ಮೂಂಡ್ರು ಮುಡಿಚ್ಚು’ ಎಂಬ ಚಿತ್ರದಲ್ಲಿ ಶ್ರೀದೇವಿ ರಜನಿ ಮಲತಾಯಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶಿಸಿದ್ದರು. ಅಷ್ಟು ಚಿಕ್ಕ ವಯಸ್ಸಿಗೆ ಶ್ರೀದೇವಿ ಆ ಪಾತ್ರ ಮಾಡಿದ್ದು ನಿಜಕ್ಕೂ ಮೆಚ್ಚುವಂತದ್ದು. ಆ ಚಿತ್ರದಲ್ಲಿ ಶ್ರೀದೇವಿ, ತಾಯಿ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದರು.ತೆಲುಗಿನ ‘ಓ ಸಿತಾ ಕಥಾ’ ಸಿನಿಮಾವನ್ನು ತಮಿಳಿನಲ್ಲಿ ‘ಮೂಂಡ್ರು ಮುಡಿಚ್ಚು’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ನಾಯಕಿ ಸೆಲ್ವಿ (ಶ್ರೀದೇವಿ) ಯನ್ನು ಪ್ರಶಾಂತ್ (ರಜನಿಕಾಂತ್​) ಹಾಗೂ ಬಾಲಾಜಿ ( ಕಮಲ್​​ಹಾಸನ್​) ಇಬ್ಬರೂ ಇಷ್ಟಪಡುತ್ತಾರೆ. ಬಾಲಾಜಿಯದ್ದು ನಿಷ್ಕಲ್ಮಷ ಪ್ರೀತಿ ಆದರೆ, ಪ್ರಶಾಂತ್​​ನದ್ದು ಆಕರ್ಷಣೆ. ಆದರೆ ಸೆಲ್ವಿ ಬಾಲಾಜಿಯನ್ನು ಇಷ್ಟಪಡುತ್ತಾಳೆ.

Advertisement

Advertisement

ಈ ಕೋಪದಿಂದ ಪ್ರಶಾಂತ್ ಸೆಲ್ವಿಯನ್ನು ಆಕೆ ಪ್ರಿಯತಮೆಯಿಂದ ದೂರಾಗುವಂತೆ ಮಾಡುತ್ತಾನೆ. ಇದಕ್ಕೆ ಸೇಡು ತೀರಿಸಿಕೊಳ್ಳುವ ಉದ್ಧೇಶದಿಂದ ಸೆಲ್ವಿ, ಪ್ರಶಾಂತ್ ತಂದೆಯನ್ನು ಮದುವೆಯಾಗುತ್ತಾಳೆ. ಅಂದುಕೊಂಡಂತೆ ಸೆಲ್ವಿ ಮಲಮಗನ ಮೇಲೆ ಸೇಡು ತೀರಿಸಿಕೊಳ್ಳುತ್ತಾಳಾ ಅಥವಾ ಅವನನ್ನು ಬದಲಾಯಿಸಿ ಸರಿದಾರಿಗೆ ತರುತ್ತಾಳಾ ಎಂಬುದು ಚಿತ್ರದ ಕಥೆ.ಈ ಚಿತ್ರವನ್ನು ಕನ್ನಡದಲ್ಲಿ ಕೂಡಾ ರೀಮೇಕ್ ಮಾಡಲಾಗಿತ್ತು. ‘ಸೌಭಾಗ್ಯ ದೇವತೆ’ ಹೆಸರಿನ ಈ ಚಿತ್ರದಲ್ಲಿ ಶ್ರುತಿ, ಸಾಯಿಕುಮಾರ್, ರಾಜೇಶ್, ಶ್ರೀಧರ್ ನಟಿಸಿದ್ದರು. ಈ ಸಿನಿಮಾಗೆ ಕೂಡಾ ಕನ್ನಡದಲ್ಲಿ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಒಟ್ಟಿನಲ್ಲಿ ಶ್ರೀದೇವಿ ಮಾಡಿರದ ಪಾತ್ರಗಳಿಲ್ಲ. ಲವ್ವರ್ , ಹೆಂಡತಿ, ತಾಯಿ, ಮಾನಸಿಕ ಅಸ್ವಸ್ಥೆ ಹೀಗೆ ಎಲ್ಲಾ ಪಾತ್ರಗಳಲ್ಲೂ ನಾನು ಮಾಡಬಲ್ಲೆ ಎಂಬುದನ್ನು ಅವರು ತೋರಿಸಿದ್ದಾರೆ. ಶ್ರೀದೇವಿ ಈಗ ನಮ್ಮೊಂದಿಗೆ ಇದ್ದಿದ್ದರೆ ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರೇನೋ. ಆದರೆ 2018 ಫೆಬ್ರವರಿ 24 ರಂದು ದುಬೈನಲ್ಲಿ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು.

Advertisement
Share this on...