ಅಮೃತಘಳಿಗೆ ಸಿನಿಮಾದ ನಟ ಶ್ರೀಧರ್ ಅವರ ಮಗಳನ್ನು ನೋಡಿದ್ದೀರಾ..?

in ಮನರಂಜನೆ/ಸಿನಿಮಾ 243 views

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ 1984 ರಲ್ಲಿ ತೆರೆಕಂಡ ಅಮೃತಘಳಿಗೆ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ 80 ರ ದಶಕದ ಅಮೃತಘಳಿಗೆಯಲ್ಲಿಯೇ ಕಾಲಿಟ್ಟ ನಾಯಕ ನಟ ಶ್ರೀಧರ್. ನಂತರದಲ್ಲಿ ಬಣ್ಣದ ವೇಷ ಎಂಬ ಚಿತ್ರಕ್ಕೆ ಬಣ್ಣ ಹಚ್ಚಿದರು. ನಟ ಶ್ರೀಧರ್ ರವರು 22 ನವೆಂಬರ್  1960ರಂದು ಜನಿಸಿದ್ದರು.1986 ರಲ್ಲಿ ತೆರೆಕಂಡ ಸುಂದರ ಸ್ವಪ್ನಗಳು ಚಿತ್ರದಲ್ಲಿ ತಮ್ಮ ಸಿನಿಮಾರಂಗದ ಬದುಕಿನ ಸುಂದರ ಸ್ವಪ್ನಗಳನ್ನು ಕಂಡರು. ಸಾಂಸಾರಿಕ ಚಿತ್ರಗಳಲ್ಲಿ ಶ್ರೀಧರ್ ರವರು ಮನಮಿಡಿಯುವಂತೆ ನಟಿಸುತ್ತಿದ್ದರು. ಅವರ ನಟನೆ ಅಂದಿನ ಮಹಿಳೆಯರ ಕಣ್ಣಂಚಲ್ಲಿ ನೀರು ತರಿಸುತ್ತಿತ್ತು. ಕೇವಲ ಸಾಂಸಾರಿಕ ಚಿತ್ರಗಳಲ್ಲಿ ಮಾತ್ರವಲ್ಲದೆ ಭಕ್ತಿಪ್ರಧಾನ ಚಿತ್ರಗಳಲ್ಲಿಯೂ ಶ್ರೀಧರ್ ಮಹಿಳಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದರು.  ಅಮೃತ ಘಳಿಗೆ, ಬಣ್ಣದ ವೇಷ, ಮಾಂಗಲ್ಯ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಬುದ್ದಿವಂತ, ಭೈರವಿ, ಬೋಂಬಾಟ್ ಹೆಂಡತಿ, ಕಠಾರಿವೀರನ ಸುರಸುಂದರಾಂಗಿ ಸೇರಿದಂತೆ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟ ಶ್ರೀಧರ ಅಭಿನಯಿಸಿದ್ದಾರೆ.

Advertisement

Advertisement

ಅಮೃತ ಘಳಿಗೆ ಚಿತ್ರದಲ್ಲಿನ ‘ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ’ ಎಂಬ ಹಾಡಿನ ಸಾಲು ನೆನಪಾದರೆ ಶ್ರೀಧರ್ ಅಂದಿನ ಕಾಲದ ಸಿನಿಮಾ ಪ್ರೇಕ್ಷಕರಿಗೆ ತಟ್ಟನೆ ಕಣ್ಣ ಮುಂದೆ ಬರುತ್ತಾರೆ. ಶ್ರೀಧರ್ ರವರು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ.
ಶ್ರೀಧರ್ ಸಂತ ಶಿಶುನಾಳ ಶರೀಫ ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಇವರ ಕೈ ಸೇರಿವೆ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ಶ್ರೀಧರ್ ನಟಿಸಿದ್ದಾರೆ. ಶ್ರೀಧರ್ ರವರು ಭರತನಾಟ್ಯ ಪ್ರವೀಣರು. ಭರತನಾಟ್ಯ ನೃತ್ಯ ನಿರ್ದೇಶಕರಾಗಿ ತುಂಬಾ ಹೆಸರು ಮಾಡಿದ್ದಾರೆ. ನಟ ಶ್ರೀಧರ್ ಹಾಗೂ ಅವರ ಪತ್ನಿ ಅನುರಾಧ ಅವರು ಜೊತೆಯಾಗಿ ಹಲವಾರು ಶೋಗಳನ್ನು ನೀಡಿದ್ದಾರೆ.

Advertisement

Advertisement

ಇನ್ನೂ ಶ್ರೀಧರ್ ಅವರ ಮಗಳು ಅನಘ ಸಹ ಭರತನಾಟ್ಯ ಕಲಾವಿದೆ. ತಮ್ಮ ತಂದೆ-ತಾಯಿಯ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿತಿರುವ ಅನಘ ಕಲಾಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕೆಂಬ ಹುಮ್ಮಸ್ಸಿನಲ್ಲಿ ಇದ್ದಾರೆ.

– ಸುಷ್ಮಿತಾ

“ಇಷ್ಟ ಪಟ್ಟ ಸ್ತ್ರೀ ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9535242057. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಪವನ ಶರ್ಮ ಗುರೂಜಿ 9535242057. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9535242057

 

Advertisement
Share this on...