ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದ್ದ ಕನ್ನಡದ ಖ್ಯಾತನಟ ಇದೀಗ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾರೆ…!

in ಮನರಂಜನೆ/ಸಿನಿಮಾ 79 views

ಮಾರಣಾಂತಿಕ ಕಾಯಿಲೆ ಕೊರೋನಾ ಬಂದ ಮೇಲೆ ಜನ ಜೀವನದ ಚಿತ್ರಣವೇ ಬದಲಾಗಿ ಹೋಗಿದೆ. ಯಾವ ಸಮಯದಲ್ಲಿ, ಯಾವ ರೀತಿಯಲ್ಲಿ, ಯಾರಿಂದ ಹೇಗೆ ಈ ಮಾರಣಾಂತಿಕ ಸೋಂಕು ಬಂದು ಬಿಡುತ್ತದೋ ಎಂದು ಹೆದರಿಕೊಂಡು ಬದುಕುವ ಸಂದರ್ಭ ಬಂದೊದಗಿದೆ. ಸರ್ಕಾರ ನೀಡುತ್ತಿರುವ ಎಚ್ಚರಿಕೆ ಕ್ರಮ ಸರಿಯಾಗಿ ಅನುಸರಿಸಿದರೆ ಈ ಸೋಂಕು ಹತ್ತಿರ ಬರುವುದಿಲ್ಲ, ಆದರೆ ಏನೇ ಎಚ್ಚರಿಕೆ ವಹಿಸಿ ಸ್ವಲ್ಪ ಯಾಮಾರಿ ಬಿಟ್ಟರು ಈ ಸೋಂಕು ನಮ್ಮನ್ನು ಯಾಮಾರಿಸಿ ದೇಹದಲ್ಲಿ ಬಂದು ಸೇರಿ ಬಿಡುತ್ತದೆ. ಅನೇಕ ವೈದ್ಯರು ಈ ಕೊರೋನಾ ಭೀಕರವಾದಂತಹ ಸೋಂಕೇನಲ್ಲಾ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು  ಜನ ಮಾತ್ರ ಇನ್ನೂ ಭಯದಿಂದ ಹೊರ ಬರುವ ಧೈರ್ಯವನ್ನು ಮಾಡುತ್ತಿಲ್ಲ.‌

Advertisement

Advertisement

ಪ್ರತಿ ನಿತ್ಯ ಚಿತ್ರೀಕರಣ, ಪ್ರೆಸ್ ಮೀಟ್, ಆಡಿಯೋ ಹಾಗೂ ಸಿನಿಮಾ ಬಿಡುಗಡೆ ಕಾರ್ಯಕ್ರಮ ಎಂದು ಸಿಕ್ಕಾಪಟ್ಟೆ ನಿರತರಾಗುತ್ತಿದ್ದ ಸಿನಿ ಕಲಾವಿದರು, ಇದೀಗ ಈ ಕಾಯಿಲೆಯಿಂದ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲೇ ಕನ್ನಡದಲ್ಲಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸುತ್ತಿದ್ದ ಶ್ರೀನಾಥ್ ವಸಿಷ್ಠ ಅವರು ಇದೀಗ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ನಟ ಶ್ರೀನಾಥ್ ಅವರು ವಾಸವಿದ್ದ ಅಪಾರ್ಟ್‌ಮೆಂಟ್ ನಲ್ಲಿ ಇದ್ದ ಸೆಕ್ಯೂರಿಟಿ ಗಾರ್ಡ್ ಗೆ ಕೊರೊ‌ನಾ ಸೊಂಕು ತಗುಲಿದ ಕಾರಣ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ವಾಸ ಮಾಡುತ್ತಿರುವ ನಿವಾಸಿಗಳೆ ಮಾಡಿಕೊಳ್ಳಬೇಕು ಎಂದು ಅಪಾರ್ಟ್‌ಮೆಂಟ್
ಮನವಿ‌ ಮಾಡಲಾಗಿದೆ. ಹೀಗಾಗಿ ನಿವಾಸಿಗಳೆ ಆ‌ ಕೆಲಸ ಮಾಡುತ್ತಿದ್ದಾರೆ. ಇದೀಗ ನಟ ಶ್ರೀನಾಥ್ ವಸಿಷ್ಠ ಸಹ ಸೆಕ್ಯೂರಿಟಿ ಗಾರ್ಡ್ ಆಗಿ‌ ಕೆಲ ಕಾಲ ಕೆಲಸ ಮಾಡಿದ್ದು, ತಮ್ಮ ಅನುಭವವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement

ನಮ್ಮ ಅಪಾರ್ಟ್‌ಮೆಂಟ್‌ನ ಒಬ್ಬ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನಾ ಪಾಸಿಟಿವ್ ಆಗಿದೆ. ಇನ್ನುಳಿದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹಾಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಕಾರ್ಯ ಮಾಡುವ ನಿಶ್ಚಯ ಮಾಡಿದ್ದೇವೆ,ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಾನು ಸೆಕ್ಯೂರಿಟಿ ಗಾರ್ಡ್ ಕಾರ್ಯ ಮಾಡಿದ್ದೇನೆ. ಎಲ್ಲರೂ ಈ ಕಾರ್ಯವನ್ನು ಹಂಚಿಕೊಂಡಿದ್ದು, 10 ದಿನಗಳ ಕಾಲ ಅಪಾರ್ಟ್‌ಮೆಂಟ್ ವಾಸಿಗಳೇ ಸೆಕ್ಯೂರಿಟಿ ಗಾರ್ಡ್ ಆಗಿರಲಿದ್ದಾರೆ ನಾಳೆ ರಾತ್ರಿಯಿಂದ ನನ್ನ ಪುತ್ರ  ಋತ್ವಿಕ್ ವಸಿಷ್ಠ ಸೆಕ್ಯೂರಿಟಿ ಗಾರ್ಡ್ ಮಾಡಲಿದ್ದಾರೆ. ಹೀಗೆ ಎಲ್ಲರೂ ಕೆಲಸವನ್ನು ಹಂಚಿಕೊಂಡಿದ್ದೇವೆ. ಇದೊಂದು ಹೊಸ ಅನುಭವ ಎಂದು ಶ್ರೀನಾಥ್ ಬರೆದುಕೊಂಡಿದ್ದಾರೆ.

Advertisement
Share this on...