coconut pic

ತೆಂಗಿನಮರ ಫಲ ಬಿಟ್ಟ ಫೋಟೋಗಳನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ ಸ್ಟಾರ್​​​ ನಟ

in ಮನರಂಜನೆ/ಸಿನಿಮಾ 1,037 views

ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂಬ ಮಾತಿದೆ. ಇದುವರೆಗೂ ಭೂಮಿ ತಾಯಿ ತನ್ನನ್ನು ನಂಬಿದ ಯಾರನ್ನೂ ಕೈ ಬಿಟ್ಟಿಲ್ಲ. ಯಾರಾದರೂ ಆಗಲಿ ನಮ್ಮ ಸ್ವಂತದ್ದು ಎಂದು ಇಂತಿಷ್ಟು ಭೂಮಿ ಇದ್ದರೆ ಚೆಂದ ಎಂಬ ಆಸೆ ಹೊಂದಿರುತ್ತಾರೆ. ಅವರು ಬಡವ ಆಗಲಿ, ಶ್ರೀಮಂತ ಆಗಲಿ. ಕ್ರಿಕೆಟ್, ಸಿನಿಮಾ ಸೆಲಬ್ರಿಟಿಗಳು ಕೂಡಾ ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿ ಕೆಲವೊಮ್ಮೆ ತಾವೇ ಖುದ್ದು ಬೇಸಾಯ ಮಾಡುತ್ತಾರೆ. ಲಾಕ್​ಡೌನ್​ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಫುಲ್ ಟೈಮ್ ರೈತನಾಗಿದ್ದರು. ಸಾವಯವ ಬೇಸಾಯದ ಮೂಲಕ ಟೊಮ್ಯಾಟೋ, ಬದನೆಕಾಯಿ, ಮೆಣಸಿನಕಾಯಿ ಬೆಳೆದು ನಾನು ಆ್ಯಕ್ಟರ್ ಮಾತ್ರವಲ್ಲ ಫಾರ್ಮರ್ ಎಂದು ಕೂಡಾ ಸಾಬೀತು ಮಾಡಿದ್ದರು. ನಿರ್ದೇಶಕ ಪ್ರೇಮ್ ಕೂಡಾ ಮದ್ದೂರಿನ ತಮ್ಮ ಜಮೀನಿಗೆ ತೆರಳಿ ಟ್ರ್ಯಾಕ್ಟರ್ ಮೂಲಕ ಜಮೀನು ಉಳುವ ವಿಡಿಯೋ ವೈರಲ್ ಆಗಿತ್ತು. ಇವರೊಂದಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಸಲ್ಮಾನ್ ಖಾನ್ ಹಾಗೂ ಇನ್ನಿತರರು ಕೂಡಾ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಇದೀಗ ಮತ್ತೊಬ್ಬ ನಟ ಕೂಡಾ ತಮ್ಮ ಜಮೀನಿನಲ್ಲಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ.

Advertisement

Advertisement

ನಟ ಮಾಧವನ್, ತಮ್ಮ ಜಮೀನಿನಲ್ಲಿ ತೆಂಗು ಹಾಗೂ ಸೀಬೆ ಬೆಳೆಯುತ್ತಿದ್ದಾರೆ. ಮಾಧವನ್ ಕೂಡಾ ಸಾವಯವ ಕೃಷಿ ಪದ್ಧತಿ ಮೊರೆ ಹೋಗಿದ್ದು ತಮ್ಮ ಜಮೀನಿನಲ್ಲಿ ತೆಂಗು, ಸೀಬೆ ಮಾತ್ರವಲ್ಲದೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ ತೆಂಗಿನ ಮರಗಳು ಫಲ ಬಿಟ್ಟಿರುವ ಫೋಟೋಗಳನ್ನು ಮಾಧವನ್ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಫಲಗಳನ್ನು ನೋಡಿ ಮಾಧವನ್​​ಗೆ ಬಹಳ ಸಂತೋಷವಾಗಿದೆಯಂತೆ. ಅಷ್ಟೇ ಅಲ್ಲ, ಕೃಷಿ ಮೇಲೆ ಮತ್ತಷ್ಟು ಆಸಕ್ತಿ ಹೆಚ್ಚಾಗಿದೆಯಂತೆ. ಮುಂದಿನ ದಿನಗಳಲ್ಲಿ ಇನ್ನಿತರ ಬೆಳೆಗಳನ್ನು ಕೂಡಾ ಜಮೀನಿನಲ್ಲಿ ಬೆಳೆಯಲು ಮಾಧವನ್ ಪ್ಲ್ಯಾನ್ ಮಾಡುತ್ತಿದ್ದಾರಂತೆ.

Advertisement

Advertisement

ಮಾಧವನ್ ಮೂಲತ: ತಮಿಳು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಕಾಲೇಜು ದಿನಗಳಲ್ಲಿ ಓದಿನೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂದೆ ಇದ್ದ ಮಾಧವನ್ ನಾಟಕಗಳಲ್ಲೂ ಅಭಿನಯಿಸುತ್ತಿದ್ದರು. ಇದರೊಂದಿಗೆ ಬೆಸ್ಟ್ ಎನ್​​ಸಿಸಿ ಕೆಡೆಟ್ ಆಗಿ ಹೆಸರಾಗಿದ್ದ ಮಾಧವನ್ ಇಂಗ್ಲೆಂಡ್​​ವರೆಗೂ ಹೋಗಿ ಬಂದರು. ಆ್ಯಕ್ಟಿಂಗ್​ನಲ್ಲೂ ಆಸಕ್ತಿ ಇದ್ದ ಮಾಧವನ್ ಮೊದಲ ಬಾರಿಗೆ ಫೇಸ್ ಪೌಡರ್ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸಲು ಆರಂಭಿಸಿದ ಮಾಧವನ್, ಇಸ್ ರಾತ್ ಕಿ ಸುಭಾ ನಹಿ ಎಂಬ ಚಿತ್ರದಲ್ಲಿ ಬಾರ್ ಸಿಂಗರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದ ಜರ್ನಿ ಆರಂಭಿಸಿದರು. ನಂತರ ಕನ್ನಡದ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಅವರು ಎರಡನೇ ಹೀರೋ ಆಗಿ ನಟಿಸಿದರೂ ಚಿತ್ರ ಹೇಳಿಕೊಳ್ಳುವಂತ ಹೆಸರು ಮಾಡಲಿಲ್ಲ. ಆದರೆ 2000 ರಲ್ಲಿ ಮಣಿರತ್ನಂ ನಿರ್ದೇಶನದ ಅಲೈಪೈಯುತೆ ಚಿತ್ರ ಅವರಿಗೆ ಒಳ್ಳೆ ಬ್ರೇಕ್ ನೀಡಿತು.

ಮಾಧವನ್ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿದ್ದಾರೆ. ಮಾಧವನ್ ಪುತ್ರ ವೇದಾಂತ್ ಇಂಟರ್​​​​​​​ನ್ಯಾಷನಲ್​​ ಸ್ವಿಮ್ಮರ್. ಅವರ ಪತ್ನಿ ಫ್ಯಾಷನ್ ಡಿಸೈನರ್. ಆ್ಯಕ್ಟಿಂಗ್ ಜೊತೆ ಜೊತೆಗೆ ಇದೀಗ ಮಾಧವನ್ ಕೃಷಿಯತ್ತ ಕೂಡಾ ಒಲವು ತೋರುತ್ತಿರುವುದು ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ.

Advertisement
Share this on...