ಚಿನ್ನದಂಗಡಿಯಲ್ಲಿ ಒಡವೆ ಕದ್ದು ಸಿಕ್ಕಿ ಬಿದ್ದ ಸ್ಟಾರ್ ನಟಿ ! ನಂತರ ಆಗಿದ್ದೇನು ಗೊತ್ತಾ…?

in ಮನರಂಜನೆ 623 views

ಸಾರ್ವಜನಿಕ ಜೀವನದಲ್ಲಿ ಸೆಲೆಬ್ರಿಟಿಗಳು ಜನಸಾಮಾನ್ಯರಿಗೆ ಮಾದರಿಯಾಗುವಂತೆ ಇರಬೇಕಾಗುತ್ತದೆ. ಅವರ ಪ್ರತಿಯೊಂದು ನಡೆ-ನುಡಿಯನ್ನು ಸಾಮಾನ್ಯ ಜನ ಗಮನಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ನಟ-ನಟಿಯರು ತುಂಬಾ ನೈತಿಕವಾಗಿ ಬದುಕಬೇಕಾಗುತ್ತದೆ. ಆದರೆ ಈ ನಟಿ ತನ್ನ ದುರಾಸೆಯಿಂದ ಮಾಡಿದ ಕೆಲಸದಿಂದ ತನ್ನ ಮಾನ-ಮರ್ಯಾದೆಯನ್ನು ಮೂರು ಕಾಸಿಗೆ ಬೀದಿಯಲ್ಲಿ ಹರಾಜು ಹಾಕಿಕೊಂಡಿದ್ದಾಳೆ. ಜನಸಾಮಾನ್ಯರಿಂದ ಛೀ-ಥೂ ಎನಿಸಿಕೊಂಡಿದ್ದಾಳೆ.

Advertisement

 

Advertisement


ಬಾಲಿವುಡ್ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿರುವ ನಟಿ ಸ್ವಸ್ತಿಕ ಮುಖರ್ಜಿ. ಬೆಂಗಾಲಿ ಸಿನಿಮಾಗಳಲ್ಲಿ ಈಕೆ ಸ್ಟಾರ್ ಹೀರೋಯಿನ್. ಈಕೆಯ ಬಳಿ ಹಣ-ಆಸ್ತಿ ಎಲ್ಲವೂ ಸಾಕಷ್ಟಿದೆ. ಆದರೆ ಈಕೆಯ ಒಂದು ಸಣ್ಣ ದುರಾಸೆಯಿಂದ ಒಮ್ಮೆ ಮಾಡಬಾರದ ಕೆಲಸ ಮಾಡಿದ್ದಳು. ಕಳೆದ ಕೆಲವು ವರ್ಷಗಳ ಹಿಂದೆ ಸಿಂಗಪೂರ್ ನಲ್ಲಿ ಬೆಂಗಾಲಿ ಫಿಲಂ ಫೆಸ್ಟಿವಲ್ ನನ್ನು ಆಯೋಜಿಸಲಾಗಿತ್ತು. ಈ ಫೆಸ್ಟಿವಲ್ ನಲ್ಲಿ ಸ್ವಸ್ತಿಕ ಕೂಡ ಭಾಗವಹಿಸಿದ್ದರು. ಈ ಫಿಲಂ ಫೆಸ್ಟಿವಲ್ ನಲ್ಲಿ ಈಕೆಯು ಕೂಡ ಪ್ರಮುಖ ಆಕರ್ಷಣೆಯಾಗಿದ್ದರು.
ಫಿಲಂ ಫೆಸ್ಟಿವಲ್ ನಲ್ಲಿ ಕಾರ್ಯಕ್ರಮಗಳು ಮುಗಿದ ನಂತರ ಸಿಂಗಪೂರ್ ನ ಪ್ರತಿಷ್ಠಿತ ಚಿನ್ನದಂಗಡಿಯಿಂದಕ್ಕೆ ಶಾಪಿಂಗ್ ಮಾಡಲು ಹೋದರು.

Advertisement

 

Advertisement

ಗೋಲ್ಡ್ ಶಾಪ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ಈ ನಟಿ ಸುತ್ತಮುತ್ತ ನೋಡಿ ಎರಡು ಕಿವಿ ಓಲೆ ಮತ್ತು ಒಂದು ನೆಕ್ಲೆಸ್ ಅನ್ನು ಚೆಕ್ ಎಂದು ತನ್ನ ಬ್ಯಾಗಿನಲ್ಲಿ ಹಾಕಿಕೊಂಡಳು. ನಂತರ ಇನ್ನೂ ಕೆಲವು ಒಡವೆಗಳನ್ನು ಖರೀದಿಸಿದ ಈಕೆ ಅವುಗಳಿಗೆ ಮಾತ್ರ ಹಣ ಕಟ್ಟಿ ಏನೂ ಗೊತ್ತಿಲ್ಲದಂತೆ ಶಾಪ್ ನಿಂದ ಹೊರಗೆ ಬಂದಳು. ಈಕೆ ಹೊರಗೆ ಬಂದ ಕೆಲವೇ ಸಮಯದಲ್ಲಿ ಆಕೆ ಒಡವೆ ಕದಿರುವ ಸಿಸಿಟಿವಿ ದೃಶ್ಯಗಳನ್ನು ಚಿನ್ನದಂಗಡಿಯ ಸಿಬಂಧಿ ವೀಕ್ಷಿಸಿದರು. ನಂತರ ತಕ್ಷಣವೇ ಶಾಪ್ ಪಕ್ಕದಲ್ಲೇ ಇದ್ದ ನಟಿ ಸ್ವಸ್ತಿಕರವರನ್ನು ಹಿಡಿದ ಸೆಕ್ಯೂರಿಟಿ ಬ್ಯಾಗ್ ಪರಿಶೀಲಿಸಿದ ನಂತರ ಬಿಲ್ ತೋರಿಸುವಂತೆ ಹೇಳಿದರು.

 

ಬಿಲ್ ಪರಿಶೀಲಿಸಿದ ಸಿಬ್ಬಂದಿ ಓಲೆ ಮತ್ತು ನೆಕ್ಲೇಸ್ ನ ಬಿಲ್ ಎಲ್ಲಿ ಎಂದು ಗಡಸು ಧ್ವನಿಯಲ್ಲಿ ಕೇಳಿದರು. ನನಗೇನು ಗೊತ್ತಿಲ್ಲ ಇದು ನನ್ನ ಬ್ಯಾಗ್ ನಲ್ಲಿ ಹೇಗೆ ಬಂತು ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ತನಗೇನು ಗೊತ್ತಿಲ್ಲವೆಂಬಂತೆ ಈ ನಟಿ ನಟಿಸುತ್ತಿದ್ದಾಗ ಸಿಸಿಟಿವಿ ದೃಶ್ಯಗಳನ್ನು ಈ ನಟಿಗೆ ತೋರಿಸಿದ ಶಾಪ್ ಓನರ್ ಸ್ವಸ್ತಿಕಾಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡರು. ನಂತರ ಫೆಸ್ಟಿವಲ್ ನ ಆಯೋಜಕರು ಶಾಪ್ ಓನರ್ ಗೆ ಸಮಾಧಾನ ಮಾಡಿ ಕದ್ದ ವಸ್ತುಗಳನ್ನು ವಾಪಸ್ ಕೊಡಿಸಿದರು. ಈಕೆಯ ದೊಡ್ಡ ಪುಣ್ಯ ಏನು ಅಂದರೆ ಚಿನ್ನದಂಗಡಿಯ ಯಜಮಾನ ಈಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಲಿಲ್ಲ.

 

ಅಕಸ್ಮಾತ್ ಈಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಫೈಲ್ ಆಗಿದ್ದರೆ ಸಿಂಗಾಪುರದ ಕಾನೂನಿನ ಪ್ರಕಾರ 10 ವರ್ಷ ಜೈಲಿನಲ್ಲಿ ಬೇಜಾರಾದಾಗೆಲ್ಲಾ 1.2.3 ಎಂದು ಕಂಬಿ ಎಣಿಸಬೇಕಾಗುತ್ತಿತ್ತು. ಒಟ್ಟಿನಲ್ಲಿ ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ವಾಪಸ್ಸು ಬರುವುದಿಲ್ಲ ಎಂಬಂತೆ ಮಾಡಿಕೊಂಡಳು ಈ ನಟಿ.

– ಸುಷ್ಮಿತಾ

Advertisement
Share this on...