ಸ್ಟೇ ಹೋಂ,- ಸ್ಟೇ ಫಿಟ್ ಪವರ್ ಸ್ಟಾರ್ ಫಿಟ್ನೆಸ್ ಗೆ ನೆಟ್ಟಿಗರು ಫಿದಾ..!

in ಮನರಂಜನೆ 72 views

ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಫಿಟ್ನೆಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಫಿಟ್ನೆಸ್, ಡ್ಯಾನ್ಸ್ ಹಾಗೂ ಫೈಟಿಗೆ ಎಲ್ಲದಕ್ಕೂ ಸೈ ಎನ್ನುವ ನಟರಲ್ಲಿ ಪುನೀತ್ ರಾಜ್ ಕುಮಾರ್ ರವರು ಮುಂಚೂಣಿಗೆ ಬರುತ್ತಾರೆ. ವಯಸ್ಸು 45 ಆದರೂ ದೇಹದಲ್ಲಿ ಮೂಳೆಯೆ ಇಲ್ಲ ಎಂಬಂತೆ ಡ್ಯಾನ್ಸ್ ಮಾಡುವ ಅಪ್ಪು, ದೇಹದ ದಂಡಿಸುವ ವಿಚಾರದಲ್ಲೂ ಯಾವಾಗಲೂ ಮುಂದೆ ಇರುತ್ತಾರೆ. ಹಾಗೆ ಲಾಕ್ ಡೌನ್ ಸಮಯದಲ್ಲಿ ಅಪ್ಪು ಮನೆಯಲ್ಲೇ ಕಸರತ್ತು ಮಾಡುತ್ತಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Advertisement

 

Advertisement

Advertisement

 

Advertisement

ಅಪ್ಪು ದೇಹದಂಡನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಪ್ಪುರವರ ಈ ಕಸರತ್ತಿನ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಪವರ್ ಸ್ಟಾರ್ ಎಂಬ ಬಿರುದು ಶಿವಣ್ಣ ಕೊಟ್ಟಿದ್ದಕ್ಕೂ ಅಭಿಮಾನಿಗಳು ಎದೆಯಲ್ಲಿ ಇಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ ಕರ್ನಾಟಕದ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕವಾಗಿದೆ. ಪವರ್ ಸ್ಟಾರ್ 45ರ ವಯಸ್ಸಿನಲ್ಲೂ ಕಾಲೇಜು ಯುವಕನ ಪಾತ್ರ ಮಾಡುವಷ್ಟು ಫಿಟ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

 

ಕೇವಲ 17 ಸೆಕೆಂಡ್ ಇರುವ ಪುನೀತ್ ಅವರ ಈ ವಿಡಿಯೋದಲ್ಲಿ ಅಪ್ಪು ಜಿಗಿದು ಒಂದು ಲೆಗ್ ಪಂಚ್ ಜೊತೆಗೆ ಬ್ಯಾಕ್ ಫ್ಲಿಪ್ ಹೊಡೆದಿದ್ದಾರೆ. ಈಗ ಈ ವಿಡಿಯೋ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಈ ವಿಡಿಯೋವನ್ನು ಅಪ್ಪು ಕೂಡ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು ಸ್ಟೇಟ್ ಹೋಂ, ಸ್ಟೇ ಸೆಫ್, ಸ್ಟೇ ಫಿಟ್ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪವರ್ ಸ್ಟಾರ್ ಫಿಟ್ನೆಸ್ ನೋಡಿದ ಅವರ ಅಭಿಮಾನಿಗಳು ಪವರ್ ಸ್ಟಾರ್ ಎಂಬ ಬಿರುದು ಇವರಿಗೆ ಮಾತ್ರ ಸೂಟ್ ಆಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಲಾಕ್ ಡೌನ್ ನಡುವೆ ಮನೆಯಲ್ಲೇ ಕುಟುಂಬದವರ ಜೊತೆ ಕಾಲ ಕಳೆಯುತ್ತಿರುವ ಪವರ್ ಸ್ಟಾರ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿದ್ದಾರೆ. ಜೊತೆಗೆ ಮನೆಯಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ಕೋರೋನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಇದರ ಜೊತೆಗೆ ಕೊರೋನಾ ಸಿ.ಎಂ ಪರಿಹಾರ ನಿಧಿಗೆ ಪುನೀತ್ ರವರು 50 ಲಕ್ಷ ದೇಣಿಗೆ ಕೂಡ ನೀಡಿದ್ದಾರೆ.

 

 

View this post on Instagram

 

Stay home, Stay Safe, Stay Fit ??

A post shared by Puneeth Rajkumar (@puneethrajkumar.official) on

 

ಕೊರೋನಾ ವಿಚಾರವಾಗಿ ಮಾರ್ಚ್ 17ರಂದು ಅವರ ಹುಟ್ಟುಹಬ್ಬವನ್ನು ಕೂಡ ಅಪ್ಪು ಆಚರಿಸಿಕೊಂಡಿರುಲಿಲ್ಲ. ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದ್ದ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಅಪ್ಪು ಎಲ್ಲಾ ಸಮಸ್ತ ಅಭಿಮಾನಿ ದೇವರುಗಳಿಗೆ ನಮಸ್ಕಾರ ಈ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಯಾರು 17ರಂದು ತಮ್ಮತಮ್ಮ ಊರುಗಳಿಂದ ಮನೆಯ ಹತ್ತಿರ ಬರಬೇಡಿ. ನಾನು ಮನೆಯಲ್ಲೂ ಇರುವುದಿಲ್ಲ ಎಂದು ಮನವಿ ಮಾಡಿಕೊಂಡಿದ್ದರು. ಪುನೀತ್ ರಾಜ್ ಕುಮಾರ್ ರವರು ಸದ್ಯ ಯುವರತ್ನ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ರವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪುನೀತ್ ಅಪ್ಪು ಸಿನಿಮಾದ ಬಳಿಕ ಕಾಲೇಜ್ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ಆಗಲೆ ಮುಗಿದಿದ್ದು ಇನ್ನುಳಿದ ಚಿತ್ರೀಕರಣ ಕೊರೋನಾ ವೈರಸ್ ನಿಂದ ಮುಂದಕ್ಕೆ ಹೋಗಿದೆ.

– ಸುಷ್ಮಿತಾ

Advertisement
Share this on...